– ಒಟ್ಟು ಸೋಂಕಿತರ ಸಂಖ್ಯೆ 3,89,232ಕ್ಕೆ ಏರಿಕೆ
ಬೆಂಗಳೂರು: ಇಂದು ಸಹ ಕೊರೊನಾ ತನ್ನ ಓಟವನ್ನು ಮುಂದುವರಿಸಿದ್ದು, 9,746 ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3,89,232ಕ್ಕೆ ಏರಿಕೆಯಾಗಿದೆ.
Advertisement
ಇಂದು 128 ಜನ ಕೊರೊನಾಗೆ ಬಲಿಯಾಗಿದ್ದು, ಮೃತಪಟ್ಟವರ ಒಟ್ಟು ಸಂಖ್ಯೆ 6,298ಕ್ಕೆ ಹೆಚ್ಚಳವಾಗಿದೆ. ಇನ್ನೂ 769 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 99,617 ಅಕ್ರಿಯ ಪ್ರಕರಣಗಳಿದ್ದು, ಇಂದು 9,102 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಗುಣಮುಖರಾದವರ ಒಟ್ಟು ಸಂಖ್ಯೆ 2,83,298ಕ್ಕೆ ಏರಿಕೆಯಾಗಿದೆ.
Advertisement
Advertisement
ಬೆಂಗಳೂರಲ್ಲಿ ಇಂದು 3,093 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,44,757ಕ್ಕೆ ಏರಿಕೆಯಾಗಿದೆ. ಸಿಲಿಕಾನ್ ಸಿಟಿಯಲ್ಲಿ ಇಂದು 34 ಜನ ಸಾವನ್ನಪ್ಪಿದ್ದಾರೆ. ಈ ವರೆಗೆ ಒಟ್ಟು 2,125 ಜನ ಕೇವಲ ಬೆಂಗಳೂರಲ್ಲಿ ಸಾವನ್ನಪ್ಪಿದ್ದಾರೆ. ಇಂದು 3,226 ಗುಣಮುಖರಾಗಿ ಡಿಸ್ಚಾರ್ಜ್, ಒಟ್ಟು 1,01,152 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 41,479 ಸಕ್ರಿಯ ಪ್ರಕರಣಗಳಿವೆ.
Advertisement
ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಅನ್ವಯ, ಬಾಗಲಕೋಟೆ 144, ಬಳ್ಳಾರಿ 366, ಬೆಳಗಾವಿ 473, ಬೆಂಗಳೂರು ಗ್ರಾಮಾಂತರ 124, ಬೀದರ್ 119, ಚಾಮರಾಜನಗರ 31, ಚಿಕ್ಕಬಳ್ಳಾಪುರ 133, ಚಿಕ್ಕಮಗಳೂರು 238, ಚಿತ್ರದುರ್ಗ 240, ದಕ್ಷಿಣ ಕನ್ನಡ 377, ದಾವಣಗೆರೆ 395, ಧಾರವಾಡ 227, ಗದಗ 195, ಹಾಸನ 347, ಹಾವೇರಿ 188, ಕಲಬುರಗಿ 198, ಕೊಡಗು 28, ಕೋಲಾರ 112, ಕೊಪ್ಪಳ 243, ಮಂಡ್ಯ 246, ಮೈಸೂರು 790, ರಾಯಚೂರು 186, ರಾಮನಗರ 92, ಶಿವಮೊಗ್ಗ 346, ತುಮಕೂರು 192, ಉಡುಪಿ 175, ಉತ್ತರ ಕನ್ನಡ 207, ವಿಜಯಪುರ 103 ಹಾಗೂ ಯಾದಗಿರಿಯಲ್ಲಿ 138 ಪ್ರಕರಣಗಳು ಪತ್ತೆಯಾಗಿವೆ.