– ಬೆಂಗ್ಳೂರಿನಲ್ಲಿ ಓರ್ವನಿಂದ 14 ಮಂದಿಗೆ ಸೋಂಕು
– ಕಲಬುರಗಿಯಲ್ಲಿ ಕೊರೊನಾ ಸ್ಫೋಟ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿಸಿದೆ. ಇಂದು ಒಂದೇ ದಿನ 36 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 1092ಕ್ಕೆ ಏರಿಕೆಯಯಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಜೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಇಂದು ಬೆಂಗಳೂರಿನಲ್ಲಿ 14, ಕಲಬುಗಿಯ 8, ಹಾಸನ 4, ಶಿವಮೊಗ್ಗದ 3, ವಿಜಯಪುರು, ಮಂಡ್ಯ, ದಾವಣಗೆರೆ, ಉಡುಪಿ, ಧಾರವಾಡ, ಬಳ್ಳಾರಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಕೊರೊನಾ ದೃಢಪಟ್ಟಿದೆ. ಉಡುಪಿಯಲ್ಲಿ 1 ವರ್ಷದ ಹೆಣ್ಣು ಮಗುವಿಕೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದೆ.
Advertisement
Advertisement
ಬೆಳಗ್ಗಿನ ವರದಿಯ ಪ್ರಕಾರ ಕಲಬುರಗಿ ಹಾಗೂ ಶಿವಮೊಗ್ಗದ ಯಾರಿಗೂ ಸೋಂಕು ಪತ್ತೆಯಾಗಿರಲಿಲ್ಲ. ಆದರೆ ಸಂಜೆ ಬಿಡುಗಡೆಯಾದ ಪಟ್ಟಿಯು ಈ ಎರಡೂ ಜಿಲ್ಲೆಗಳ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಇತ್ತ ಬೆಂಗಳೂರಿನಲ್ಲಿ ಓರ್ವ ಸೋಂಕಿತನಿಂದ 14 ಜನರಿಗೆ ಸೋಂಕು ತಗುಲಿದೆ.
Advertisement
ಇಂದು ಡಿಸ್ಚಾರ್ಜ್:
ಬೆಂಗಳೂರು, ಕಲಬುರಗಿ, ವಿಜಯಪುರು ಜಿಲ್ಲೆ ಸೇರಿ ಇಂದು ರಾಜ್ಯದಲ್ಲಿ ಒಟ್ಟು 16 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ 14 ಮಂದಿ (ರೋಗಿ-434, 435, 452, 454, 459, 460, 469, 470, 473, 474, 477, 478, 480, 490), ಕಲಬುರಗಿಯ ಒಬ್ಬರು (ರೋಗಿ-529) ಹಾಗೂ ವಿಜಯಪುರದ ಒಬ್ಬರು (ರೋಗಿ-278) ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
Advertisement
ಮಧ್ಯಾಹ್ನದ ವರದಿ:
1. ರೋಗಿ-1057: ಮಂಡ್ಯದ 40 ವರ್ಷದ ವ್ಯಕ್ತಿ. ಕೋಲಾರ ಮತ್ತು ಬೆಂಗಳೂರು ಪ್ರಯಾಣ ಹಿನ್ನೆಲೆ
2. ರೋಗಿ-1058: ಹಾಸನದ 50 ವರ್ಷದ ವ್ಯಕ್ತಿ. ಮುಂಬೈ ಪ್ರಯಾಣ ಹಿನ್ನೆಲೆ
3. ರೋಗಿ-1059: ಉಡುಪಿಯ 1 ವರ್ಷದ ಹೆಣ್ಣು ಮಗು. ದುಬೈನಿಂದ ವಾಪಸ್ಸಾಗಿರುವ ಹಿನ್ನಲೆ
4. ರೋಗಿ-1060: ಧಾರವಾಡದ 34 ವರ್ಷದ ಯುವಕ. ಮುಂಬೈ ಪ್ರಯಾಣ ಹಿನ್ನೆಲೆ
5. ರೋಗಿ-1061: ದಾವಣಗೆರೆಯ 65 ವರ್ಷದ ಮಹಿಳೆ. ರೋಗಿ 533 ರ ದ್ವಿತೀಯ ಸಂಪರ್ಕ
6. ರೋಗಿ-1062: ಬಳ್ಳಾರಿಯ 46 ವರ್ಷದ ವ್ಯಕ್ತಿ. ಅಹಮದಾಬಾದ್, ಗುಜರಾತ್ ಪ್ರಯಾಣ ಹಿನ್ನೆಲೆ
7. ರೋಗಿ-1063: ಬಾಗಲಕೋಟೆಯ 33 ವರ್ಷದ ಯುವಕ. ಮುಂಬೈ, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ
8. ರೋಗಿ-1064; ಬೆಂಗಳೂರಿನ 27 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕದಲ್ಲಿದ್ದರು.
9. ರೋಗಿ-1065: ಬೆಂಗಳೂರಿನ 25 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕದಲ್ಲಿದ್ದರು.
10. ರೋಗಿ-1066: ಬೆಂಗಳೂರಿನ 20 ವರ್ಷದ ಯುವಕ. ರೋಗಿ 653ರ ದ್ವಿತೀಯ ಸಂಪರ್ಕದಲ್ಲಿದ್ದರು.
11.ರೋಗಿ-1067: ಬೆಂಗಳೂರಿನ 50 ವರ್ಷದ ಪುರುಷ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
12.ರೋಗಿ-1068: ಬೆಂಗಳೂರಿನ 20 ವರ್ಷದ ಯುವಕ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
13.ರೋಗಿ-1069: ಬೆಂಗಳೂರಿನ 27 ವರ್ಷದ ಯುವಕ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
14.ರೋಗಿ-1070: ಬೆಂಗಳೂರಿನ 24 ವರ್ಷದ ಯುವಕ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
15.ರೋಗಿ-1071: ಬೆಂಗಳೂರಿನ 23 ವರ್ಷದ ಯುವಕ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
16.ರೋಗಿ-1072: ಬೆಂಗಳೂರಿನ 24 ವರ್ಷದ ಯುವಕ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
17.ರೋಗಿ-1073: ಬೆಂಗಳೂರಿನ 26 ವರ್ಷದ ಯುವಕ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
18.ರೋಗಿ-1074: ಬೆಂಗಳೂರಿನ 33 ವರ್ಷದ ಪುರುಷ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
19.ರೋಗಿ-1075: ಬೆಂಗಳೂರಿನ 17 ವರ್ಷದ ಯುವಕ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
20.ರೋಗಿ-1076: ಬೆಂಗಳೂರಿನ 18 ವರ್ಷದ ಯುವಕ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
21.ರೋಗಿ-1077: ಬೆಂಗಳೂರಿನ 19 ವರ್ಷದ ಯುವಕ. ರೋಗಿ-653ರ ದ್ವಿತೀಯ ಸಂಪರ್ಕದಲ್ಲಿದ್ದರು.
22.ರೋಗಿ-1078: ಹಾಸನದ 63 ವರ್ಷದ ಪುರುಷ. ಮುಂಬೈ ಪ್ರಯಾಣ ಹಿನ್ನೆಲೆ.
23.ರೋಗಿ-1079: ಹಾಸನದ 21 ವರ್ಷದ ಯುವತಿ. ಮುಂಬೈ ಪ್ರಯಾಣ ಹಿನ್ನೆಲೆ.
ಸಂಜೆ ವರದಿ:
24.ರೋಗಿ-1080: ಕಲಬುರಗಿಯ 33 ವರ್ಷದ ಮಹಿಳೆ. ರೋಗಿ-848ರ ಸಂಪರ್ಕದಲ್ಲಿದ್ದರು.
25.ರೋಗಿ-1081: ಕಲಬುರಗಿಯ 15 ವರ್ಷದ ಬಾಲಕಿ. ರೋಗಿ-848ರ ಸಂಪರ್ಕದಲ್ಲಿದ್ದಳು.
26.ರೋಗಿ-1082: ಕಲಬುರಗಿಯ 14 ವರ್ಷದ ಬಾಲಕಿ. ರೋಗಿ-848ರ ಸಂಪರ್ಕದಲ್ಲಿದ್ದಳು.
27.ರೋಗಿ-1083: ಕಲಬುರಗಿಯ 55 ವರ್ಷದ ಪುರುಷ. ರೋಗಿ-848ರ ಸಂಪರ್ಕದಲ್ಲಿದ್ದರು.
28.ರೋಗಿ-1084: ಕಲಬುರಗಿಯ 30 ವರ್ಷದ ಮಹಿಳೆ. ಮುಂಬೈ ಪ್ರಯಾಣದ ಹಿನ್ನೆಲೆ.
29.ರೋಗಿ-1085: ಕಲಬುರಗಿಯ 50 ವರ್ಷದ ಮಹಿಳೆ. ರೋಗಿ-927ರ ಸಂಪರ್ಕ ಹೊಂದಿದ್ದರು.
30.ರೋಗಿ-1086: ಕಲಬುರಗಿಯ 60 ವರ್ಷದ ವೃದ್ಧ. ರೋಗಿ-848ರ ಸಂಪರ್ಕ ಹೊಂದಿದ್ದರು.
31.ರೋಗಿ-1087: ಕಲಬುರಗಿಯ 10 ವರ್ಷದ ಬಾಲಕಿ. ರೋಗಿ-848ರ ಸಂಪರ್ಕದಲ್ಲಿದ್ದರು.
32.ರೋಗಿ-1088: ಶಿವಮೊಗ್ಗದ 38 ವರ್ಷದ ಮಹಿಳೆ. ಮುಂಬೈ ಪ್ರಯಾಣದ ಹಿನ್ನೆಲೆ.
33.ರೋಗಿ-1089: ಶಿವಮೊಗ್ಗದ 42 ವರ್ಷದ ಪುರುಷ. ಮುಂಬೈ ಪ್ರಯಾಣದ ಹಿನ್ನೆಲೆ.
34.ರೋಗಿ-1090: ಶಿವಮೊಗ್ಗದ 4 ವರ್ಷದ ಬಾಲಕಿ. ಮುಂಬೈ ಪ್ರಯಾಣದ ಹಿನ್ನೆಲೆ.
35.ರೋಗಿ-1091: ವಿಜಯಪುರದ 4 ವರ್ಷದ ಬಾಲಕಿ. ರೋಗಿ-594ರ ಸಂಪರ್ಕದಲ್ಲಿದ್ದರು.
36.ರೋಗಿ-1092: ಹಾಸನದ 18 ವರ್ಷದ ಯುವಕ. ಮುಂಬೈ ಪ್ರಯಾಣದ ಹಿನ್ನೆಲೆ.
ಕೊರೊನಾ ಹಾಟ್ಸ್ಪಾಟ್ ಆಗಿರುವ ಸಿಲಿಕಾನ್ ಸಿಟಿಯ ಶಿವಾಜಿನಗರದಲ್ಲಿ ಇದೀಗ ಮತ್ತೆ 14 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಹೌಸ್ ಕೀಪಿಂಗ್ ಜೊತೆ ದ್ವಿತೀಯ ಸಂಪರ್ಕದಲ್ಲಿ ಇದ್ದ ವ್ಯಕ್ತಿಗಳಿಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ 20 ಜನರ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಇದರಲ್ಲಿ 14 ಮಂದಿಗೆ ಪಾಸಿಟಿವ್ ಇರುವುದು ದೃಢವಾಗಿದೆ.
ಶುಕ್ರವಾರ 22 ಜನರ ಗಂಟಲು ದ್ರವ ಪರೀಕ್ಷೆಯಲ್ಲಿ 11 ಜನರಿಗೆ ಕೊರೊನಾ ದೃಢಪಟ್ಟಿತ್ತು. ಹೀಗಾಗಿ ಶಿವಾಜಿನಗರದಲ್ಲಿ ಇದೀಗ ಒಟ್ಟು ಪ್ರಕರಣಗಳ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ನಿನ್ನೆ 202 ಪ್ರಕರಣ ಪತ್ತೆಯಾಗಿದ್ದು, ಇಂದಿನ 14 ಪ್ರಕರಣ ಸೇರಿ 216ಕ್ಕೆ ಏರಿಕೆಯಾಗಿದೆ. ಈ ಮೂಲಕ ಶಿವಾಜಿನಗರ ಕೊರೊನಾ ಹಬ್ ಆಗಿದೆ.
ಒಂದೇ ಬಿಲ್ಡಿಂಗ್ನಲ್ಲಿ ಇದ್ದ 72 ಜನರನ್ನ ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ ನಿನ್ನೆ 22 ಜನರ ಗಂಟಲು ದ್ರವ ಪರೀಕ್ಷೆಯಲ್ಲಿ 11 ಪಾಸಿಟಿವ್ ದೃಢಪಟ್ಟಿತ್ತು. ಇಂದು 20 ಜನರ ಗಂಟಲು ದ್ರವ ಪರೀಕ್ಷೆಯಲ್ಲಿ 14 ಪಾಸಿಟಿವ್ ಬಂದಿದೆ. ಈ 14 ಜನ ಹಾಗೂ ನಿನ್ನೆ ಪಾಸಿಟಿವ್ ಬಂದ 11 ಜನ ಒಂದೇ ಪ್ಲೋರ್ ನಲ್ಲಿ ಇದ್ದರು.