ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನ ಸ್ಪಿನ್ ದ್ವಯರಾದ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ದಾಳಿಗೆ ನಲುಗಿದ ಇಂಗ್ಲೆಂಡ್ ತಂಡ 135 ರನ್ ಗಳಿಗೆ ಗಂಟುಮೂಟೆ ಕಟ್ಟಿದೆ. ಈ ಮೂಲಕ ಭಾರತ ಇನ್ನಿಂಗ್ಸ್ ಹಾಗೂ 25 ರನ್ಗಳಿಂದ 4ನೇ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಜಯಗಳಿಸುವ ಮೂಲಕ ಸರಣಿಯನ್ನು 3-1ರ ಅಂತರದಲ್ಲಿ ವಶಪಡಿಕೊಂಡಿದೆ.
3ನೇ ದಿನ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಭಾರತ ಸ್ಪಿನ್ ದ್ವಯರಾದ ಅಕ್ಷರ್ ಪಟೇಲ್ ಮತ್ತು ಅಶ್ವಿನ್ ಘಾತಕವಾಗಿ ಮೇಲೆರಗಿ ಇಂಗ್ಲೆಂಡ್ ಬ್ಯಾಟ್ಸ್ಮ್ಯಾನ್ಗಳನ್ನು ಕ್ರೀಸ್ ಪರದಾಡುವಂತೆ ಮಾಡಿದರು. ಅಕ್ಷರ್ ಪಟೇಲ್ 5 ವಿಕೆಟ್ (24 ಓವರ್, 6 ಮೇಡನ್ ಓವರ್) ಕಿತ್ತು ಮಿಂಚು ಹರಿಸಿದರೆ, ರವಿಚಂದ್ರನ್ ಅಶ್ವಿನ್ 5 ವಿಕೆಟ್( 22.5 ಓವರ್, 4 ಮೇಡನ್ ಓವರ್) ಪಡೆದು ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು ತಂದು ಕೊಟ್ಟರು.
Advertisement
#TeamIndia complete an innings & 2⃣5⃣-run win as @ashwinravi99 picks up his 3⃣0⃣th five-wicket haul in Tests. ????????
India bag the series 3-1 & march into the ICC World Test Championship Final. ????????@Paytm #INDvENG
Scorecard ???? https://t.co/9KnAXjaKfb pic.twitter.com/ucvQxZPLUQ
— BCCI (@BCCI) March 6, 2021
Advertisement
ಈ ಮೊದಲು ಎರಡನೇ ದಿನ 294 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಭಾರತ ಬ್ಯಾಟಿಂಗ್ ಮುಂದುವರಿಸಿ 365 ರನ್ಗಳಿಗೆ ಸರ್ವಪತನ ಕಂಡಿತು. ಭಾರತದ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದ ವಾಷಿಂಗ್ಟನ್ ಸುಂದರ್ 96 ರನ್ (174 ಎಸೆತ, 10 ಬೌಡಂರಿ, 1 ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿದು ಶತಕ ವಂಚಿತರಾದರು.
Advertisement
Advertisement
ಭಾರತ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 3-1ರಲ್ಲಿ ಜಯಗಳಿಸುವ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ನ ಫೈನಲ್ಗೆ ಪ್ರವೇಶಿಸಿದೆ.
That victory against England means India finish the league phase of the inaugural ICC World Test Championship with a fine view from the top of the table ????#INDvENG | #WTC21 pic.twitter.com/rXFiKPXdB7
— ICC (@ICC) March 6, 2021