– ಸಾಲದ ಮೇಲಿನ ಬಡ್ಡಿ ಇಳಿಕೆ
ನವದೆಹಲಿ: ಕೊರೊನಾ ಲಾಕ್ಡೌನ್ನಿಂದ ಇಡೀ ದೇಶವೇ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಸಾಲದ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡುವ ಮೂಲಕ ಸಿಹಿ ಸುದ್ದಿ ನೀಡಿದೆ.
ಇಂದು ಆರ್ಬಿಐ ಮುಖ್ಯಸ್ಥ ಶಕ್ತಿಕಾಂತ್ ದಾಸ್ ಸುದ್ದಿಗೋಷ್ಠಿ ನಡೆಸಿ, ಸಾಲದ ಮೇಲಿನ ಕಂತು ಕುಟ್ಟುವ ಅವಧಿ ಮತ್ತೆ ಮೂರು ತಿಂಗಳ ಕಾಲ ವಿಸ್ತರಣೆ ಮಾಡಿರುವುದಾಗಿ ಘೋಷಣೆ ಮಾಡಿದ್ದಾರೆ. ಎಲ್ಲಾ ರೀತಿಯ ಸಾಲದ ಇಎಂಐ ಕಟ್ಟಲು ಆಗಸ್ಟ್ 31ರವರೆಗೂ ಅವಧಿಯನ್ನು ವಿಸ್ತರಣೆ ಮಾಡಿದೆ.
Advertisement
Measures announced today can be divided into 4 categories: to improve functioning of markets,to support exports&imports,to ease financial stress by giving relief on debt servicing&better access to working capital&to ease financial constraints faced by state govts: RBI pic.twitter.com/NDdsrUkd7d
— ANI (@ANI) May 22, 2020
Advertisement
ಆರ್ಬಿಐ ರೆಪೋ ದರ 40 ಬೇಸಿಸ್ ಅಂಕದಷ್ಟು ಕಡಿತ ಮಾಡಿದೆ. ಈ ಮೂಲಕ ಶೇ. 4.4ರಿಂದ ಶೇ.4ಕ್ಕೆ ಇಳಿಕೆಯಾಗಿದೆ.
Advertisement
ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಮೇಲಿನ ಬಡ್ಡಿ ಇಳಿಕೆ ಮಾಡಿದೆ. ರಿವರ್ಸ್ ರೆಪೋ ದರ ಶೇ.3.35ಕ್ಕೆ ಇಳಿಕೆ ಮಾಡಿದೆ. ರಿವರ್ಸ್ ರೆಪೋ ದರ ಶೇ. 3.35 ಇಳಿಕೆಯಿಂದ ಬ್ಯಾಂಕುಗಳಿಗೆ ಪ್ರಯೋಜನವಾಗಲಿದೆ.
Advertisement
Three-month moratorium we allowed on term loans&working capitals we allowed certain relaxations. In view of the extension of the lockdown&continuing disruption on account of #COVID19, these measures are being further extended by another 3 months from June 1 to Aug 31: RBI Guv pic.twitter.com/YKulKb9bD0
— ANI (@ANI) May 22, 2020
ಅಷ್ಟೇ ಅಲ್ಲದೇ ಆರ್ಬಿಐ ಮತ್ತಷ್ಟು ಹಣಕಾಸು ನೆರವು ನೀಡಿದೆ. ಇನ್ನೂ ಮೂರು ತಿಂಗಳು ಎಸ್ಬಿಐ ಸೇರಿ ಅನೇಕ ಸಂಸ್ಥೆಗಳಿಗೆ ನೆರವು ಘೋಷಿಸಿದೆ.
ಕೇಂದ್ರ ಸರ್ಕಾರವು 20 ಲಕ್ಷ ಕೋಟಿ ರೂಪಾಯಿ ಮೊತ್ತದ ಆರ್ಥಿಕ ಪ್ಯಾಕೇಜ್ ಫೋಷಿಸಿದ ನಂತರ ಇದೇ ಮೊದಲ ಬಾರಿಗೆ ಆರ್ಬಿಐ ಗವರ್ನರ್ ಸುದ್ದಿಗೋಷ್ಠಿ ನಡೆಸಿದ್ದಾರೆ.
India's foreign exchange reserves have increased by 9.2 billion during 2020-21 from 1st April onwards. So far, up to 15th May, foreign exchange reserves stand at 487 billion US dollars: Reserve Bank of India (RBI) Governor Shaktikanta Das pic.twitter.com/lZGidaO7WO
— ANI (@ANI) May 22, 2020
ರೆಪೋ ದರ: ವಾಣಿಜ್ಯ ಬ್ಯಾಂಕುಗಳು ಆರ್ಬಿಐನಿಂದ ಪಡೆಯುವ ಅಲ್ಪಾವಧಿ ಸಾಲನ ಮೇಲಿನ ಬಡ್ಡಿದರಕ್ಕೆ ರೆಪೋ ದರ ಎಂದು ಕರೆಯಲಾಗುತ್ತದೆ. ರೆಪೋ ದರ ಕಡೆಮೆಯಾದರೆ ಬ್ಯಾಂಕ್ ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಹಣವನ್ನು ಪಡೆಯಬಹುದು.
ರಿವರ್ಸ್ ರೆಪೋ: ವಾಣಿಜ್ಯ ಬ್ಯಾಂಕುಗಳು ಆರ್ಬಿಐನಲ್ಲಿ ಇಡುವ ಠೇವಣಿಗಳ ಮೇಲೆ ಪಡೆಯುವ ಬಡ್ಡಿದರವೇ ವಿರುದ್ಧ ರೆಪೋ ರೇಟ್. ಆರ್ಬಿಐನಲ್ಲಿ ಠೇವಣಿ ಇಡುವುದು ಬ್ಯಾಂಕುಗಳಿಗೆ ಸುರಕ್ಷಿತ. ರಿವರ್ಸ್ ರೆಪೋ ದರ ಹೆಚ್ಚಾದಾಗ ಬ್ಯಾಂಕುಗಳು ಹೆಚ್ಚಿನ ಮೊತ್ತವನ್ನು ಆರ್ಬಿಐಗೆ ವರ್ಗಾಯಿಸುತ್ತದೆ.