– ಆರೋಗ್ಯ ಇಲಾಖೆಯಿಂದಲೇ ಕೊರೊನಾ ರೂಲ್ಸ್ ಬ್ರೇಕ್
– 10 ಜನರಲ್ಲಿ 9 ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು
ಚಿಕ್ಕಬಳ್ಳಾಪುರ: ಆರೋಗ್ಯ ಇಲಾಖೆಗೆ ಸೇರಿದ ಸ್ವಿಫ್ಟ್ ಡಿಜೈರ್ ಕಾರಲ್ಲಿ ಕುರಿಗಳಂತೆ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳನ್ನ ಕರೆದೊಯ್ದ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.
Advertisement
ಚಿಕ್ಕಬಳ್ಳಾಪುರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ತರಬೇತಿಗೆ ಅಂತ ಹಾಜರಾಗಿದ್ದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳನ್ನ ಫೀಲ್ಡ್ ವಿಸಿಟ್ ಗೆ ಅಂತ ಆರೋಗ್ಯ ಇಲಾಖೆಗೆ ಸೇರಿದ ಸ್ವಿಫ್ಟ್ ಡಿಜೈರ್ ಕಾರಲ್ಲಿ ಚಾಲಕ ಒಂದೇ ಬಾರಿಗೆ 9 ಮಂದಿ ವಿದ್ಯಾರ್ಥಿಗಳನ್ನ ಕರೆದೊಯ್ದಿದ್ದಾನೆ. ಕಾರ್ ನಲ್ಲಿ ಚಾಲಕ ಸೇರಿ ಐವರು ಪ್ರಯಾಣಿಸಬಹುದು. ಹೆಚ್ಚುವರಿಯಾಗಿ ಒಬ್ಬರು ಕೂರಬಹುದು. ಆದರೆ ಈ ಕಾರಿನ ಹಿಂಬದಿ ಸೀಟ್ ನಲ್ಲಿ 7 ಮಂದಿ, ಮುಂಬದಿ ಸೀಟ್ ಗಳಲ್ಲಿ ಚಾಲಕ ಸೇರಿ ಮೂವರು ಕುಳಿತಿದ್ದಾರೆ. ಇದನ್ನೂ ಓದಿ: ಕೊರೊನಾ ವೈರಸ್ ಲೀಕ್ ಆಗಿದ್ದು ಚೀನಾದ ಲ್ಯಾಬ್ನಿಂದಲೇ-ಯುಎಸ್ ರಿಪಬ್ಲಿಕನ್ ವರದಿ
Advertisement
Advertisement
ಕೊರೊನಾ ಆತಂಕದ ನಡುವೆ ಮಹಾಮಾರಿಗೆ ಕಡಿವಾಣ ಹಾಕಲು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಅಂತ ಹೇಳುವ ಆರೋಗ್ಯ ಇಲಾಖಾಧಿಕಾರಿಗಳು ಹೀಗೆ ಮಾಡಿದ್ರೆ ಹೇಗೆ ಎನ್ನುವ ಪ್ರಶ್ನೆ ಎದುರಾಗಿದೆ. ಕುರಿಗಳಂತೆ ಒಬ್ಬರ ಮೇಲೆ ಒಬ್ಬರು ಕೂತು ಪ್ರಯಾಣ ಮಾಡಿದ್ದು ವಿದ್ಯಾರ್ಥಿಗಳ ಜೀವದ ಜೊತೆ ಅಧಿಕಾರಿಗಳ ಚೆಲ್ಲಾಟವಾಡಿದಂತಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕಿದೆ. ಇದನ್ನೂ ಓದಿ: ಹೊಸ ಸ್ವರೂಪ ಪಡೆದ ಕೊರೊನಾ-ಕಣ್ಣೀರಿನಿಂದಲೂ ಸೋಂಕು ಹಬ್ಬುತ್ತೆ, ಎಚ್ಚರ..!