– ವಿಡಿಯೋದಿಂದ ಸಂಸಾರದಲ್ಲಿ ಬಿರುಗಾಳಿ
– ಪತ್ನಿಯನ್ನು ಬಿಟ್ಟು ಹೋದ ಪತಿ
ಮಂಡ್ಯ: ಕೊರೊನಾ ಅಟ್ಟಹಾಸದಿಂದ 8 ತಿಂಗಳಿನಿಂದ ಶಾಲಾ, ಕಾಲೇಜುಗಳು ಬಾಗಿಲು ತೆರದಿಲ್ಲ. ಈ ನಿಟ್ಟಿನಲ್ಲಿ ಮಕ್ಕಳು ಈಗ ಆನ್ಲೈನ್ ಮೂಲಕ ಪಾಠ ಕಲಿಯುತ್ತಿದ್ದಾರೆ. ಈಗ ಆನ್ಲೈನ್ ಶಿಕ್ಷಣದಿಂದ ಮಗಳು ಅಪ್ಪನ ಮುಖವಾಡ ಕಳಚಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
ನಾಗಮಂಗಲ ತಾಲ್ಲೂಕಿನ ಗ್ರಾಮವೊಂದರ ಕುಮಾರ್ ಎಂಬಾತ ಪರಸ್ತ್ರೀ ಜೊತೆ ನಡೆಸಿರುವ ರಾಸಲೀಲೆಯನ್ನು ತನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡು ಇಟ್ಟುಕೊಂಡಿದ್ದ. ಇದಾದ ಬಳಿಕ ಮನೆಗೆ ಹೋದ ವೇಳೆ ಆನ್ಲೈನ್ ಮೂಲಕ ದ್ವಿತೀಯ ಪಿಯುಸಿ ಓದುತ್ತಿದ್ದ ಮಗಳಿಗೆ ಮೊಬೈಲ್ ನೀಡಿದ್ದಾನೆ. ಆನ್ಲೈನ್ ಶಿಕ್ಷಣ ಆರಂಭಕ್ಕೆ ಸ್ವಲ್ಪ ಸಮಯ ಇದ್ದ ಕಾರಣ ಮಗಳು ಮನರಂಜನೆಗೆ ವಿಡಿಯೋಗಳನ್ನು ನೋಡಿದ್ದಾಳೆ.
Advertisement
Advertisement
ಮೊಬೈಲ್ನಲ್ಲಿ ಇದ್ದ ವಿಡಿಯೋಗಳನ್ನು ಮಗಳು ನೋಡುತ್ತಿದ್ದಾಗ ತನ್ನ ತಂದೆ ಪರಸ್ತ್ರೀಯ ಜೊತೆ ನಡೆಸಿದ್ದ ರಾಸಲೀಲೆಯನ್ನು ನೋಡಿದ್ದಾಳೆ. ಇದನ್ನು ನೋಡಿ ಹೌಹಾರಿದ ಮಗಳು ಅಪ್ಪನ ರಾಸಲೀಲೆ ವಿಡಿಯೋವನ್ನು ತನ್ನ ತಾಯಿಗೆ ತೋರಿಸಿದ್ದಾಳೆ. ಇದಾದ ಬಳಿಕ ತನ್ನ ಗಂಡನನ್ನು ಹೆಂಡತಿ ಈ ಬಗ್ಗೆ ಪ್ರಶ್ನೆ ಮಾಡಿದ್ದಾಳೆ. ಬಳಿಕ ಮನೆಯಲ್ಲಿ ಗಲಾಟೆ ನಡೆದಿದೆ.
Advertisement
ಮೊದಲಿನಿಂದಲೇ ಪತಿಯ ಅನೈತಿಕ ಸಂಬಂಧದ ಬಗ್ಗೆ ಪತ್ನಿಗೆ ಶಂಕೆ ಇತ್ತು. ಈ ವಿಚಾರಕ್ಕೆ ಮನೆಯಲ್ಲಿ ಈ ಹಿಂದೆ ಜಗಳ ಸಹ ನಡೆದಿತ್ತು. ಈಗ ಅಧಿಕೃತವಾಗಿ ವಿಡಿಯೋ ಸಿಕ್ಕ ಮೇಲೆ ಗಂಡ ಹೆಂಡತಿಯ ನಡುವೆ ಜೋರು ಜಗಳವಾಗಿದೆ.
Advertisement
ವಿಕೋಪಕ್ಕೆ ಹೋದ ಬಳಿಕ ಗಂಡ, ಹೆಂಡತಿಯನ್ನು ಬಿಟ್ಟು ಹೋಗಿದ್ದಾನೆ. ಈ ಬಗ್ಗೆ ಪತ್ನಿ ತನ್ನ ಗಂಡನ ವಿರುದ್ಧ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ನನ್ನ ಗಂಡನಿಗೆ ಪಾಠ ಕಲಿಸಿ ಸರಿಯಾಗಿ ಸಂಸಾರ ಮಾಡುವಂತೆ ಹೇಳಿ ಎಂದು ಪೊಲೀಸರ ಮೊರೆ ಹೋಗಿದ್ದಾಳೆ. ಅಲ್ಲದೇ ನಾಗಮಂಗಲದ ಮಹಿಳಾ ಸಾಂತ್ವಾನ ಕೇಂದ್ರ ಮೊರೆ ಹೋಗಿ ನೋವು ತೋಡಿಕೊಂಡಿದ್ದಾಳೆ.