ಬೆಂಗಳೂರು: ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಕುಮಾರಸ್ವಾಮಿ ಮತ್ತು ಸುಮಲತಾ ಕಿತ್ತಾಟದಲ್ಲಿ ಕುಮಾರಸ್ವಾಮಿ ಪರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬ್ಯಾಟ್ ಬೀಸಿದ್ದಾರೆ. ಸಂಸದೆ ಸುಮಲತಾ ಅವರದ್ದು ಚೀಪ್ ಪಾಪ್ಯುಲಾರಿಟಿ ಅಂತ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
Advertisement
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೆ ಯಾವ ಗಣಿಗಾರಿಕೆ ವಿಚಾರವೂ ಗೊತ್ತಿಲ್ಲ. ನಾನು ಸ್ವಲ್ಪ ದಿನ ಮಂಡ್ಯ ಉಸ್ತುವಾರಿ ಮಂತ್ರಿ ಆಗಿದ್ದೆ. ಆಗ ಯಾರೂ ನನ್ನ ಬಳಿ ಬಂದು ಗಣಿಗಾರಿಕೆ ಸುದ್ದಿ ಮಾತಾಡಿರಲಿಲ್ಲ. ಎಲ್ಲೋ 10-15 ಕಿಲೋಮೀಟರ್ ದೂರದಲ್ಲಿ ನಡೆಯುತ್ತಿರೋ ಗಣಿಗಾರಿಕೆಗೂ ಡ್ಯಾಂಗೂ ಸಂಬಂಧವಿಲ್ಲ. ಯಾವುದೇ ವ್ಯತ್ಯಾಸ ಆಗಲ್ಲ. ಗಣಿಗಾರಿಕೆ ಮಾಡಲು ಅನೇಕ ನಿಯಮ, ಲೆಕ್ಕಾಚಾರ ಇವೆ. ಇದನ್ನ ನೋಡಿಕೊಳ್ಳಲು ಗಣಿ ಇಲಾಖೆ ಇದೆ. ಇದಕ್ಕಾಗಿ ನೂರಾರು ಜನ ಎಂಜಿನಿಯರ್ ಗಳನ್ನ ನೇಮಕ ಮಾಡಿದ್ದು, ಅವರು ನೋಡಿಕೊಳ್ತಾರೆ ಎಂದರು.
Advertisement
Advertisement
ಜನರಿಗೆ ಆತಂಕ ಮೂಡಿಸುವ ಕೆಲಸ ಯಾರೂ ಮಾಡಬಾರದು. ಬಿರುಕು ಬಿಟ್ಟಿದೆ ಅಂತ ಆತಂಕ ಹುಟ್ಟಿಸೋ ಚೀಪ್ ಪಾಪ್ಯುಲರಿಟಿ ಬಗ್ಗೆ ಮಾತಾಡೋಕೆ ನನಗೆ ಇಷ್ಟ ಇಲ್ಲ ಅಂತ ಸುಮಲತಾ ವಿರುದ್ಧ ಕಿಡಿಕಾರಿದ್ರು. ಇದು ಅತ್ಯಂತ ಸೂಕ್ಷ್ಮವಾದ ವಿಚಾರ. ಈ ದೇಶ, ಈ ರಾಜ್ಯದ ಆಸ್ತಿ. ಆಸ್ತಿ ಬಗ್ಗೆ ನಾವು ಜವಾಬ್ದಾರಿ ಸ್ಥಾನದಲ್ಲಿ ಇರೋರು ಎಚ್ಚರಿಕೆಯಿಂದ ಮಾತಾಡಬೇಕು. ನಾವೆಲ್ಲ ಕಾವೇರಿ, ಅರ್ಕಾವತಿ ಹೊಳೆ ಪಕ್ಕ ಇರೋರು ನಮಗೆ ಅ ಆತಂಕ ಗೊತ್ತು ಅಂದ್ರು. ಇದನ್ನೂ ಓದಿ: ನಮ್ಮ ಹುಡುಗ, ದೂರದ ಸಂಬಂಧಿ- ಕಪಾಳಮೋಕ್ಷ ವಿಚಾರಕ್ಕೆ ಡಿಕೆಶಿ ಸ್ಪಷ್ಟನೆ
Advertisement
ಗಣಿಗಾರಿಕೆಯಿಂದ ಡ್ಯಾಂಗೆ ತೊಂದರೆ ಇಲ್ಲವಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಆ ಸುದ್ದಿಯೇ ನನಗೆ ಗೊತ್ತಿಲ್ಲ. ಯಾರೂ ನನ್ನ ಬಳಿ ಆ ವಿಚಾರವಾಗಿ ಚರ್ಚೆ ಮಾಡಿಲ್ಲ. ಅ ಬಗ್ಗೆ ನನಗೇನು ಗೊತ್ತಿಲ್ಲ ಅಂತ ತಿಳಿಸಿದ್ರು.