ಚೆನ್ನೈ: ನಾನು ಮತ್ತು ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಸ್ವಾತಂತ್ರ್ಯ ದಿನಾಚರಣೆಯ ದಿನವೇ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಹೇಳಿದ್ದು ಯಾಕೆ ಎಂದು ಎಡಗೈ ಬ್ಯಾಟ್ಸ್ಮನ್ ಸುರೇಶ್ ರೈನಾ ಈಗ ಬಹಿರಂಗಪಡಿಸಿದ್ದಾರೆ.
ಈ ವಿಚಾರದ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಸುರೇಶ್ ರೈನಾ ನಾವಿಬ್ಬರು ಮೊದಲೇ ನಿರ್ಧರಿಸಿ ಆಗಸ್ಟ್ 15 ರಂದು ನಿವೃತ್ತಿ ಘೋಷಣೆ ಮಾಡುವ ತೀರ್ಮಾನ ತೆಗೆದುಕೊಂಡಿದ್ದೆವು ಎಂದು ತಿಳಿಸಿದ್ದಾರೆ.
Advertisement
Advertisement
ಧೋನಿ ಜೆರ್ಸಿ ನಂಬರ್ 7, ನನ್ನದು 3. ಇಬ್ಬರ ನಂಬರ್ ಸೇರಿದರೆ 73 ಆಗುತ್ತದೆ. ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕಿ ನಮಗೆ 73 ವರ್ಷ ಪೂರ್ಣಗೊಳ್ಳುತ್ತದೆ. ಈ ದಿನ ಬಿಟ್ಟರೆ ಬೇರೆ ಉತ್ತಮ ದಿನ ಇಲ್ಲ ಎಂದು ತೀರ್ಮಾನಿಸಿ ನಿವೃತ್ತಿ ಹೇಳಿದ್ದೇವೆ ಎಂದು ತಿಳಿಸಿದ್ದಾರೆ.
Advertisement
ಇಬ್ಬರು ಆಟಗಾರು ಒಂದೇ ಸಮಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡುತ್ತಿದ್ದರು. ಅಷ್ಟೇ ಅಲ್ಲದೇ ಚೆನ್ನೈ ತಂಡದ ಪರ ಮೊದಲಿನಿಂದಲೂ ಆಡುತ್ತಾ ಬಂದಿದ್ದಾರೆ. ಇದನ್ನೂ ಓದಿ: ಯಾರಿಗೆ ಸಿಗಲಿದೆ ಧೋನಿಯ ನಂ.7 ಜೆರ್ಸಿ?
Advertisement
ಧೋನಿ 2004ರ ಡಿಸೆಂಬರ್ 23 ರಂದು ಬಾಂಗ್ಲಾ ವಿರುದ್ಧ ಮೊದಲ ಪಂದ್ಯವಾಡಿದ್ದರೆ ನಾನು 2005ರ ಜುಲೈ 30 ರಂದು ಶ್ರೀಲಂಕಾ ವಿರುದ್ಧ ಮೊದಲ ಪಂದ್ಯವನ್ನು ಆಡಿದ್ದೆ. ನಾವಿಬ್ಬರು ಒಟ್ಟಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದೆವು. ಈಗಲೂ ಚೆನ್ನೈ ತಂಡದಲ್ಲಿ ಆಡುತ್ತಿದ್ದೇವೆ. ಹೀಗಾಗಿ ಜೊತೆಯಾಗಿ ನಿವೃತ್ತಿ ಹೇಳಿ ಜೊತೆಯಾಗಿ ಐಪಿಎಲ್ ಆಡುತ್ತಿದ್ದೇವೆ ಎಂದು ವಿವರಿಸಿದರು.
ಸುರೇಶ್ ರೈನಾ ಆಗಸ್ಟ್ 15 ರಂದು ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿ ನಿವೃತ್ತಿ ಹೇಳಿದ್ದರು. ಆಗಸ್ಟ್ 16 ರಂದು ಶಿಷ್ಟಾಚಾರದ ಪ್ರಕಾರ ಬಿಸಿಸಿಐಗೆ ಈ ವಿಚಾರವನ್ನು ತಿಳಿಸಿದ್ದರು. ಧೋನಿ ಶಿಷ್ಟಾಚಾರವನ್ನು ಪಾಲಿಸಿದ್ದು ಶನಿವಾರ ಸಂಜೆ 6:29ಕ್ಕೆ ಬಿಸಿಸಿಐ ತಿಳಿಸಿ ಬಳಿಕ ಇನ್ಸ್ಟಾಗ್ರಾಮ್ನಲ್ಲಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದರು.