ಚಾಮರಾಜನಗರ: ಬಿಎಸ್ಪಿ ಪಕ್ಷದಿಂದ ಉಚ್ಚಾಟನೆ ನಂತರ ಸ್ವತಂತ್ರವಾಗಿ ಉಳಿದಿದ್ದ ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಇದೀಗ ರಾಜಕೀಯ ನೆಲೆಗಾಗಿ ಕಮಲ ಪಕ್ಷ ಸೇರಲು ರೆಡಿಯಾಗಿದ್ದಾರೆ.
ಬಿಜೆಪಿ ಸೇರ್ಪಡೆಗೆ ದಿನಾಂಕ ಕೂಡ ನಿಗದಿಯಾಗಿದ್ದು, ಆಗಸ್ಟ್ 5 ರಂದು ಬಿಜೆಪಿ ಸೇರ್ಪಡೆಯಾಗ್ತೇನೆ ಎಂದು ಸ್ವತಃ ಶಾಸಕ ಎನ್ ಮಹೇಶ್ ತಿಳಿಸಿದ್ದಾರೆ.
Advertisement
Advertisement
ಕಳೆದ ಹಲವು ದಿನಗಳಿಂದಲೂ ಕೂಡ ಶಾಸಕ ಎನ್ ಮಹೇಶ್ ಮುಂದಿನ ರಾಜಕೀಯ ನಡೆಯೇನು? ಅನ್ನೋ ಮಾತು ಪದೇ ಪದೇ ಕೇಳಿಬರುತ್ತಿತ್ತು.ಇದೀಗ ಮುಂದಿನ ರಾಜಕೀಯ ಏಳಿಗೆಗಾಗಿ ಕಮಲ ಮುಡಿಯಲು ಈಗಾಗಲೇ ಮೂಹೂರ್ತ ಕೂಡ ಫಿಕ್ಸ್ ಆಗಿದೆ. ಇದನ್ನೂ ಓದಿ : ಬೊಮ್ಮಾಯಿ ಸಂಪುಟದಲ್ಲಿ ವಿಜಯೇಂದ್ರಗೆ ಮಂತ್ರಿ ಪಟ್ಟ ನೀಡಿ – ಬಿಎಸ್ವೈ ಒತ್ತಡ
Advertisement
ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಆಗುವುದಾಗಿ ಸ್ವತಃ ಕೊಳ್ಳೇಗಾಲ ಶಾಸಕ ಎನ್ ಮಹೇಶ್ ತಿಳಿಸಿದ್ದಾರೆ.