ಬೆಂಗಳೂರು: ನಟ ಅಭಿಷೇಕ್ ಅಂಬರೀಷ್ ಎರಡನೇ ಚಿತ್ರ ಬ್ಯಾಡ್ ಮ್ಯಾನರ್ಸ್ ಶೂಟಿಂಗ್ ಭರದಿಂದ ಸಾಗಿದ್ದು, ಇದೀಗ ನಾಯಕ ನಟಿಯನ್ನು ಆಯ್ಕೆ ಮಾಡಿರುವ ಕುರಿತ ಸುದ್ದಿಯನ್ನು ಸಹ ಸಿನಿಮಾ ತಂಡ ರಿವೀಲ್ ಮಾಡಿದೆ.
Advertisement
ಬ್ಯಾಡ್ ಮ್ಯಾನರ್ಸ್ ಸಿನಿಮಾ ಶುರುವಾಗಿ ಅನೇಕ ದಿನಗಳು ಕಳೆದಿವೆ. ಆದರೆ ಈ ಬಗ್ಗೆ ಹೆಚ್ಚು ಅಪ್ಡೇಟ್ ಸಿಕ್ಕಿರಲಿಲ್ಲ. ಇದೀಗ ಸಿನಿಮಾ ತಂಡ ಬಿಗ್ ಸಪ್ರ್ರೈಸ್ ನೀಡಿದೆ. ಬ್ಯಾಡ್ ಮ್ಯಾನರ್ಸ್ ಚಿತ್ರವನ್ನು ದುನಿಯಾ ಸೂರಿ ನಿರ್ದೇಶಿಸುತ್ತಿದ್ದು, ಅಭಿಷೇಕ್ ಅಂಬರೀಷ್ ಅವರ ಬಹುನಿರೀಕ್ಷಿತ ಸಿನಿಮಾ ಆಗಿದೆ. ಸದ್ಯ ಚಿತ್ರತಂಡ ಮಂಡ್ಯದಲ್ಲಿ ಶೂಟಿಂಗ್ ನಡೆಸುತ್ತಿದ್ದು, ಇದೇ ಸಂದರ್ಭದಲ್ಲಿ ಹೀರೋಯಿನ್ ಆಯ್ಕೆ ಕುರಿತು ಸುದ್ದಿ ರಿವೀಲ್ ಆಗಿದೆ.
Advertisement
Advertisement
ಚಿತ್ರದಲ್ಲಿ ಇಬ್ಬರು ಹೀರೋಯಿನ್ಗಳು ಇರಲಿದ್ದು, ಅಭಿಷೇಕ್ ಅಂಬರೀಷ್ ಜೊತೆ ನಟಿ ರಚಿತಾ ರಾಮ್ ಹಾಗೂ ಪ್ರಿಯಾಂಕಾ ರೊಮ್ಯಾನ್ಸ್ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಲವ್ ಯು ರಚ್ಚು ಸಿನಿಮಾದಲ್ಲಿ ರಚಿತಾ ರಾಮ್ ಬ್ಯುಸಿಯಾಗಿದ್ದು, ಇದೇ ವೇಳೆ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ನಟಿಸುತ್ತಿರುವ ಕುರಿತು ಮಾಹಿತಿ ನೀಡಿದ್ದಾರೆ.
Advertisement
ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದ್ದು, ತಾರಾ, ಶರತ್ ಲೋಹಿತಾಶ್ವ ಸಹ ತೆರೆ ಹಂಚಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಭರದಿಂದ ಸಾಗಿದೆ. ಮೊದಲ ಸಿನಿಮಾದಲ್ಲಿ ರೊಮ್ಯಾಂಟಿಕ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಅಭಿಷೇಕ್, ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಯಾವ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಅಭಿಮಾನಿಗಳ ಕುತೂಹಲವಾಗಿದೆ. ಕಳೆದ ವರ್ಷ ಅಂಬರೀಷ್ ಹುಟ್ಟುಹಬ್ಬದಂದು ಸಿನಿಮಾ ಲಾಂಚ್ ಮಾಡಲಾಗಿತ್ತು. ಆದರೆ ಲಾಕ್ಡೌನ್ ನಿಂದ ಚಿತ್ರೀಕರಣ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಆರಂಭವಾಗಿದ್ದು, ಭರದಿಂದ ಸಾಗಿದೆ.
ಚಿತ್ರದಲ್ಲಿ ರಚಿತಾ ರಾಮ್ ಫುಲ್ ಟ್ರೆಡಿಷನಲ್ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನು ಪ್ರಿಯಾಂಕ ಅವರ ಪಾತ್ರದ ಬಗ್ಗೆ ಮಾಹಿತಿ ರಿವೀಲ್ ಆಗಿಲ್ಲ. ಒಟ್ಟಿನಲ್ಲಿ ಇಬ್ಬರು ನಟಿಮಣಿಯರ ಜೊತೆ ಅಭಿಷೇಕ್ ಅಂಬರೀಷ್ ರೊಮ್ಯಾನ್ಸ್ ಮಾಡಲಿದ್ದಾರೆ ಎಂಬುದು ಇದೀಗ ತಿಳಿದಿದೆ.