– 14 ವರ್ಷದ ಬಾಲಕನಿಗೆ ಮದ್ಯ ಕುಡಿಸಿ ಕೃತ್ಯ
ಚೆನ್ನೈ: ಮಂಗಳಮುಖಿಯರಿಬ್ಬರು ಹಣಕ್ಕಾಗಿ ಅಪರಿಚಿತ ವ್ಯಕ್ತಿಯೊಂದಿಗೆ ಓರಲ್ ಸೆಕ್ಸ್ ಮಾಡುವಂತೆ 14 ವರ್ಷದ ಬಾಲಕನಿಗೆ ಕಿರುಕುಳ ನೀಡಿ ವಿಕೃತಿ ಮೆರೆದಿದ್ದಾರೆ.
ತಮಿಳುನಾಡಿನ ತಿರುಚ್ಚಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಆರೋಪಿಗಳನ್ನು ಅಪರ್ಣ(32) ಹಾಗೂ ಸತ್ಯ(30) ಎಂದು ಗುರುತಿಸಲಾಗಿದೆ. ಇಬ್ಬರೂ ಕೂತೂರು ಮೂಲದವರಾಗಿದ್ದಾರೆ. ಬಾಲಕ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಲೈಂಗಿಕ ಅಲ್ಪಸಂಖ್ಯಾತ ಹುಡುಗ ಒಂದು ವಾರದ ಹಿಂದೆ ದಿಂಡಿಗಲ್ನ ಬಸ್ ನಿಲ್ದಾಣದಲ್ಲಿ ಅಪರ್ಣ ಹಾಗೂ ಸತ್ಯ ಅವರನ್ನು ಭೇಟಿಯಾಗಿದ್ದ. ಈ ವೇಳೆ ಬಾಲಕ ಇಬ್ಬರ ಜೊತೆ ಸ್ವಲ್ಪ ಹೊತ್ತು ಮಾತನಾಡಿದ್ದಾನೆ. ತನ್ನ ಫೋನ್ ನಂಬರ್ನ್ನು ಸಹ ಅವರೊಂದಿಗೆ ಹಂಚಿಕೊಂಡಿದ್ದಾನೆ. ಬಳಿಕ ಇಬ್ಬರೂ ಕರೆ ಮಾಡಿ ತಿರುಚ್ಚಿಗೆ ಬರುಲು ಹೇಳಿದ್ದಾರೆ. ಅಲ್ಲದೆ ಲೈಂಗಿಕತೆ ಶಸ್ತ್ರಚಿಕಿತ್ಸೆ ಮಾಡಿಸಲು ಸಹಾಯ ಮಾಡುತ್ತೇವೆ ಎಂದು ಬರಲು ಹೇಳಿದ್ದಾರೆ.
Advertisement
ಬಳಿಕ ಬಾಲಕ ನವೆಂಬರ್ 25ರಂದು ತಿರುಚ್ಚಿಗೆ ತೆರಳಿದ್ದು, ಈ ವೇಳೆ ಅಪರ್ಣ ಹಾಗೂ ಸತ್ಯ ಬಾಲಕನಿಗೆ ಮದ್ಯ ಕುಡಿಸಿದ್ದಾರೆ. ಬಳಿಕ ಹಣಕ್ಕಾಗಿ ಅಪರಿಚಿತನೊಂದಿಗೆ ಓರಲ್ ಸೆಕ್ಸ್ ಮಾಡುವಂತೆ ಕಿರುಕುಳ ನೀಡಿದ್ದಾರೆ.
Advertisement
ಬಾಲಕ ನೀಡಿದ ದೂರಿನನ್ವಯ ಪೊಲೀಸರು ಕ್ರಮ ಕೈಗೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಕ್ಸೊ ಕಾಯ್ದೆ ಸೆಕ್ಷನ್ 12 ಹಾಗೂ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣಾ ಕಾಯ್ದೆ ಅಡಿ ಪ್ರಕಣ ದಾಖಲಿಸಿದ್ದಾರೆ.