ಮುಂಬೈ: ಪುರುಷರ ಕ್ರಿಕೆಟ್ ಜೊತೆಗೆ ಮಹಿಳೆಯರ ಐಪಿಎಲ್ ಆಯೋಜನೆ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
ಯುಎಇಯಲ್ಲಿ ಐಪಿಎಲ್ ಆಯೋಜನೆ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಇಂದು ಐಪಿಎಲ್ ಅಧಿಕಾರಿಗಳ ಜೊತೆ ಸಭೆ ನಡೆಯಿತು. ಈ ಸಭೆಯಲ್ಲಿ ಪುರುಷರ ಕ್ರಿಕೆಟ್ ಜೊತೆಗೆ 4 ತಂಡಗಳಿರುವ ಮಹಿಳಾ ಐಪಿಎಲ್ ಆಯೋಜನೆಗ ನಡೆಸುವುದಾಗಿ ಗಂಗೂಲಿ ಹೇಳಿದ್ದಾರೆ ಎಂದು ವರದಿಯಾಗಿದೆ.
Advertisement
Advertisement
ನವೆಂಬರ್ 1 ರಿಂದ 10ರ ಒಳಗಡೆ ಮಹಿಳೆಯರ ಕ್ರಿಕೆಟ್ ನಡೆಸಲು ಸಿದ್ಧತೆ ನಡೆದಿದೆ. ಶೀಘ್ರದಲ್ಲೇ ಮಹಿಳಾ ಐಪಿಎಲ್ ಟೂರ್ನಿಯ ವೇಳಾಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ.
Advertisement
Advertisement
ದುಬೈ, ಅಬುಧಾಬಿ, ಶಾರ್ಜಾದಲ್ಲಿ ಐಪಿಎಲ್ ಸೆಪ್ಟೆಂಬರ್ 19 ರಿಂದ ನವೆಂಬರ್ 10ರವರೆಗೆ ನಡೆಯಲಿದೆ. ನವೆಂಬರ್ ಮೊದಲ ವಾರದಲ್ಲಿ ಪ್ಲೇ ಆಫ್, ನಂತರ ಕ್ವಾಲಿಫಯರ್ ಬಳಿಕ ಫೈನಲ್ ಪಂದ್ಯ ನಡೆಯಲಿದೆ. ನಿರಂತರವಾಗಿ ತಂಡಗಳು ಪಂದ್ಯವಾಡಲು ಸಾಧ್ಯವಿಲ್ಲ. ಹೀಗಾಗಿ ವಿರಾಮದ ದಿನ ಮಹಿಳೆಯರ ಐಪಿಎಲ್ ಪಂದ್ಯ ನಡೆಯಲಿದೆ.
He says @BCCIWomen will get a series done with South Africa in Oct ahead of the @IPL games and post IpL a West Indies tour is planned. Then ofc down under for the World Cup if all goes to plan. @wvraman time to get your planning hat on. Imp BCCI is proactive on women’s cricket.
— Boria Majumdar (@BoriaMajumdar) August 2, 2020
ಪುರುಷರ ಐಪಿಎಲ್ ಜೊತೆ ಮಹಿಳೆಯರ ಐಪಿಎಲ್ ನಡೆಯುತ್ತಾ? ಇಲ್ಲವೋ ಎನ್ನುವ ಪ್ರಶ್ನೆಗಳು ಎದ್ದಿತ್ತು. 2018, 2019ರಲ್ಲಿ ಮಹಿಳೆಯರ ಐಪಿಎಲ್ ನಡೆದಿದ್ದು, ಎರಡು ಬಾರಿಯೂ ಸೂಪರ್ ನೋವಾ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು.
ಈ ಮೊದಲು ಐಪಿಎಲ್ ಸೆಪ್ಟೆಂಬರ್ 19 ರಿಂದ ಆರಂಭಗೊಂಡು ನವೆಂಬರ್ 8ರ ವರೆಗೆ ನಡೆಯಲಿದೆ ಎಂದು ವರದಿಯಾಗಿತ್ತು. ಆದರೆ ಈಗ ನವೆಂಬರ್ 10ರವರೆಗೆ ನಡೆಯಲಿದೆ. ಸಾಧಾರಣವಾಗಿ ಭಾನುವಾರ, ಶನಿವಾರ ಫೈನಲ್ ಪಂದ್ಯ ಆಯೋಜನೆಗೊಳ್ಳುತ್ತದೆ. ಆದರೆ ಈ ಬಾರಿ ಮಂಗಳವಾರ ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ.
This is excellent news . Our ODI World Cup campaign to finally kick start . A big thank you to @SGanguly99 @BCCI @JayShah and thank you @BoriaMajumdar for your support to women’s cricket . https://t.co/JpJSMGapzV
— Mithali Raj (@M_Raj03) August 2, 2020
ಐಪಿಎಲ್ಗೂ ಮೊದಲು ಭಾರತದ ಮಹಿಳಾ ತಂಡ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಲಿದೆ. ಐಪಿಎಲ್ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿದೆ.