ಬೆಂಗಳೂರು: ಸ್ಯಾಂಡಲ್ವುಡ್ ನಟಿ, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಅವರಿಗೆ ಪ್ರತಿಷ್ಠಿತ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (ಎನ್ವೈಐಎಫ್ಎಫ್)ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.
Advertisement
ಪಿಂಕಿ ಎಲ್ಲಿ? ಚಿತ್ರದಲ್ಲಿನ ನಟನೆಗಾಗಿ ಅಕ್ಷತಾ ಈ ಪ್ರಶಸ್ತಿ ಪಡೆದಿದ್ದಾರೆ. ಇದೇ ಸಿನಿಮಾಕ್ಕೆ ಚಿತ್ರಕತೆ ಬರೆದ ಕನ್ನಡದ ಚಿತ್ರ ನಿರ್ದೇಶಕ ಪೃಥ್ವಿ ಕೋಣನೂರ್ ಅವರಿಗೆ ಅತ್ಯುತ್ತಮ ಚಿತ್ರಕತೆ ಪ್ರಶಸ್ತಿ ಲಭಿಸಿದೆ. ಇದನ್ನೂ ಓದಿ: ಹೋಟೆಲ್ನಲ್ಲಿ ಕೆಲಸ ಮಾಡಿ ತಮ್ಮನ ಓದಿಗೆ ಸಹಾಯ ಮಾಡಿದ್ದ ವಿಜಯ್
Advertisement
View this post on Instagram
Advertisement
ಜೂನ್ 4ರಿಂದ 13ರವರೆಗೆ ವರ್ಚುವಲ್ ಮಾಧ್ಯಮದಲ್ಲಿ 2021ನೇ ಸಾಲಿನ ಎನ್ವೈಐಎಫ್ಎಫ್ ನಡೆಯಿತು. ಪ್ರಶಸ್ತಿ ವಿಜೇತರಿಗೆ ಆನ್ಲೈನ್ನಲ್ಲೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಅಕ್ಷತಾ ಹಾಗೂ ಪೃಥ್ವಿ ಅವರು ಕ್ರಮವಾಗಿ ಅತ್ಯುತ್ತಮ ನಟಿ ಹಾಗೂ ಅತ್ಯುತ್ತಮ ಚಿತ್ರಕತೆ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು. ಅಮೆರಿಕದಲ್ಲಿ ಭಾರತೀಯ ಸಿನಿಮಾಗಳಿಗೆ ವೇದಿಕೆ ಕಲ್ಪಿಸುವ ಚಿತ್ರೋತ್ಸವ ಇದಾಗಿದ್ದು, ಇಂಡೋ-ಅಮೆರಿಕನ್ ಆಟ್ರ್ಸ್ ಕೌನ್ಸಿಲ್ (ಐಎಎಸಿ) ಇದನ್ನು ಏರ್ಪಡಿಸುತ್ತದೆ. ಇದನ್ನೂ ಓದಿ: ಸಿನಿಮಾ ಆಗಲಿದೆ ರೋಹಿಣಿ ಸಿಂಧೂರಿ ಜೀವನ ಕಥೆ
Advertisement
ಚಿತ್ರೋತ್ಸವದಲ್ಲಿ ಮಹಾತ್ಮ ಗಾಂಧಿ ಕುರಿತಾದ ಸೇವಾ ಸಾಕ್ಷ್ಯಚಿತ್ರಕ್ಕೆ ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ, ಲಾಕ್ಡೌನ್ ವೇಳೆ ವಿವಾಹಿತ ಮಹಿಳೆಯ ಮನಸ್ಥಿತಿಯನ್ನು ಕಟ್ಟಿಕೊಡುವ ಬಂಗಾಳಿ ಕಿರುಚಿತ್ರ ತಶೇರ್ ಗಾವ್ಗೆ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ, ನಾಸಿರ್ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ, ಜೂನ್ ಸಿನಿಮಾದಲ್ಲಿನ ನಟನೆಗಾಗಿ ಸಿದ್ಧಾರ್ಥ ಮೆನನ್ಗೆ ಅತ್ಯುತ್ತಮ ನಟ ಪ್ರಶಸ್ತಿ, ಫೈರ್ ಇನ್ ದಿ ಮೌಂಟೇನ್ಸ್ ಚಿತ್ರಕ್ಕಾಗಿ ಅಜಿತ್ ಪಾಲ್ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿವೆ.
ಪ್ರಸ್ತುತ ಕರ್ನಾಟಕದಲ್ಲಿ ಚರ್ಚೆಯಲ್ಲಿರುವ ಐಎಎಸ್ ಅಧಿಕಾರಿ ಹಾಗೂ ನಿರ್ಗಮಿತ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಜೀವನ ಕಥೆ ಸಿನಿಮಾವಾಗಲಿದೆ. ಈ ಸಿನಿಮಾದಲ್ಲಿನಟಿಯಾಗಿ ರಂಗಭೂಮಿ ಕಲಾವಿದೆ ಹಾಗೂ ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಅವರು ರೋಹಿಣಿ ಸಿಂಧೂರಿ ಪಾತ್ರವನ್ನು ನಿರ್ವಹಿಸಲಿದ್ದಾರೆ