– ಮಾರ್ಗ ಮಧ್ಯೆ ತಡೆದ ಗ್ರಾಮಸ್ಥರು
ರಾಯಚೂರು: ಲಿಂಗಸುಗೂರಿನ ಹಟ್ಟಿ ಚಿನ್ನದ ಗಣಿಯಿಂದ ದೇವದುರ್ಗದ ಊಟಿ ಚಿನ್ನದ ಗಣಿಗೆ ಕೆಲಸಕ್ಕಾಗಿ ಕಾರ್ಮಿಕರನ್ನ ಅಂಬ್ಯುಲೆನ್ಸ್ನಲ್ಲಿ ನಿತ್ಯ ಕರೆದ್ಯೊಯ್ಯಲಾಗುತ್ತಿದೆ. ಅಂಬ್ಯುಲೆನ್ಸ್ ಪದೇ ಪದೇ ಓಡಾಡುವುದನ್ನ ಗಮನಿಸಿ ಅನುಮಾನಗೊಂಡ ದೇವದುರ್ಗ ತಾಲೂಕಿನ ವಂದಲಿ ಗ್ರಾಮಧ ಜನ ಅಂಬ್ಯುಲೆನ್ಸ್ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೋಗಿಗಳನ್ನ ಸಾಗಿಸಲು ಎಷ್ಟು ಬಾರಿ ನಿಲ್ಲಿಸಲು ಯತ್ನಿಸಿದರು ನಿಲ್ಲದ ಅಂಬ್ಯುಲೆನ್ಸ್ ನಿಯಮ ಬಾಹಿರವಾಗಿ ಕಾರ್ಮಿಕರನ್ನ ಸಾಗಣೆ ಮಾಡುತ್ತಿರುವುದಕ್ಕೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಗ್ರಾಮೀಣ ರಸ್ತೆಯಲ್ಲಿ ಸೈರನ್ ಹಾಕಿಕೊಂಡು ಅತೀ ವೇಗವಾಗಿ ನಿತ್ಯ ಅಂಬ್ಯುಲೆನ್ಸ್ ಓಡಾಡುತ್ತಿವೆ.
Advertisement
Advertisement
ಮೂರು ಪಾಳೆಯದ ಕಾರ್ಮಿಕರನ್ನೂ ಅಂಬ್ಯುಲೆನ್ಸ್ ನಲ್ಲೇ ಸಾಗಣೆ ಮಾಡಲಾಗುತ್ತಿದೆ. ಕೋವಿಡ್ ನಿಯಮಗಳನ್ನ ಮೀರಿ ಅಂಬ್ಯುಲೆನ್ಸ್ ನಲ್ಲಿ ಕಾರ್ಮಿಕರನ್ನ ತುಂಬಿಕೊಂಡು ಸಾಗಣೆ ಮಾಡುವುದು ಸರಿಯಲ್ಲ ಅಂತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.