Connect with us

Cricket

ಝಾನ್ಸಿ ರಾಣಿ ಲುಕ್‍ನಲ್ಲಿ ಧೋನಿ ಮಗಳು ಮಿಂಚಿಂಗ್- ವಿಡಿಯೋ ನೋಡಿ

Published

on

ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಮಗಳು ಜೀವಾಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಫೇಮಸ್ ಆಗಿವೆ. ತಂದೆ-ಮಗಳು ಮೋಜು ಮಸ್ತಿಯ ವಿಡಿಯೋಗಳಂತೂ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಒಂದೆಡೆ ತಂದೆ ಯೋಧರಾಗಿ ಮಿಂಚುತ್ತಿದ್ದರೆ, ಮಗಳು ಝಾನ್ಸಿ ರಾಣಿ ವೇಷ ಧರಿಸಿ ಗಮನ ಸೆಳೆದಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಸದಾ ಜೀವಾ ಸುದ್ದಿಯಲ್ಲಿಯೇ ಇರುತ್ತಾಳೆ. ಆಕೆಯ ಮುಗ್ದತನ, ತುಂಟಾಟದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಆದರೆ ಈ ಬಾರಿ ಜೀವಾ ಝಾನ್ಸಿ ರಾಣಿಯಾಗಿ ಅಭಿಮಾನಿಗಳ ಹೃದಯ ಕದ್ದಿದ್ದಾಳೆ.

ಸ್ವಾತಂತ್ರ್ಯ ದಿನದ ಅಂಗವಾಗಿ ಜೀವಾ ತನ್ನ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಳು. ಕಾರ್ಯಕ್ರಮದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ನಾಯಕ/ ನಾಯಕಿಯರ ವೇಷ-ಭೂಷಣ ಧರಿಸಿ ಮಕ್ಕಳು ಮಿಂಚುತ್ತಿದ್ದರು. ಈ ಮಧ್ಯೆ ಜೀವಾ ಝಾನ್ಸಿ ರಾಣಿ ಅವತಾರದಲ್ಲಿ ಕಾಣಿಸಿಕೊಂಡಿದ್ದಳು. ಎಲ್ಲಾ ಮಕ್ಕಳು ವೇದಿಕೆ ಮೇಲೆ ಒಂದಾಗಿ ‘ದೇಶ್ ಕಾ ಸಿಪಾಯಿ ಹೂ’ ಹಾಡನ್ನು ಹಾಡಿ, ಜೊತೆಗೆ ಡ್ಯಾನ್ಸ್ ಕೂಡ ಮಾಡಿ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದಾರೆ. ಈ ಕ್ಯೂಟ್ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮುದ್ದಾದ ಜೀವಾಳ ಹೊಸ ಲುಕ್ ಎಲ್ಲರಿಗೂ ಇಷ್ಟವಾಗಿದೆ.

ಇತ್ತ ಭಾರತೀಯ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್‍ನಲ್ಲಿ ಕರ್ನಲ್ ಹುದ್ದೆ ಪಡೆದಿರುವ ಧೋನಿ ಬುಧವಾರವೇ ಲಡಾಖ್‍ಗೆ ತಲುಪಿದ್ದರು. ಈ ವರ್ಷದ ಸ್ವಾತಂತ್ರ್ಯ ದಿನದ ಸಂಭ್ರಮವನ್ನು ಲಡಾಖ್‍ನಲ್ಲಿ ಸೈನಿಕರೊಂದಿಗೆ ಧೋನಿ ಆಚರಿಸಿದರು. ಸ್ವಾತಂತ್ರ್ಯ ಸಂಭ್ರಮದ ದಿನ ಧೋನಿ ಸೈನಿಕರೊಂದಿಗೆ ಸಮಯ ಕಳೆಯುತ್ತಿದ್ದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.