ಜಮೀರ್ ಸಿಎಂ ಆಗ್ತಾರೆ ಎಂದ ಚರ್ಚ್ ಫಾದರ್

Advertisements

ಬೆಂಗಳೂರು: ಚಾಮರಾಜಪೇಟೆಯ ರಾಯಪುರಂನಲ್ಲಿರುವ ಸಂತ ಪೀಟರ್ ಪೌಲ್ ಚರ್ಚ್‍ನ ಫಾದರ್ (Saint Peter Paul Church Father) ಡೊಮಿನಿಕ್ ಝೇವಿಯರ್ ಪರಿಶ್‍ರನ್ನು(Dominic Xavier Parish) ಭೇಟಿಯಾದ ಶಾಸಕ ಜಮೀರ್‌ಗೆ ಮುಂದಿನ ದಿನಗಳಲ್ಲಿ ಸಿಎಂ ಆಗುವಂತೆ ಆಶೀರ್ವಾದಿಸಿದ್ದಾರೆ.

Advertisements

ಚಾಮರಾಜಪೇಟೆಯಾದ್ಯಂತ(Chamarajpet) ನಡೆಯುತ್ತಿರುವ ಮದರ್ ಮೇರಿ ಫೆಸ್ಟಿವಲ್‍ನಲ್ಲಿ (Mother Mary Festival) ಜಮೀರ್ (Zameer) ಭಾಗಿ ಆಗಿದ್ದ ವೇಳೆ ಫಾದರ್ ಹಾರೈಸಿದ್ದಾರೆ. 2005ರಿಂದ ಸತತವಾಗಿ ಶಾಸಕರಾಗಿ, ಸಚಿವರಾಗಿ ಸಾಕಷ್ಟು ಜನಪರ ಕಾರ್ಯಗಳು, ಸಾಮಾಜಿಕ ಚಟುವಟಿಕೆಗಳು, ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಂದು ಬ್ರಿಟನ್ ರಾಣಿ ಎಲಿಜಬೆತ್-2 ಅಂತ್ಯಕ್ರಿಯೆ – ದ್ರೌಪದಿ ಮುರ್ಮು ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಭಾಗಿ

Advertisements

ಕ್ಷೇತ್ರವಷ್ಟೇ ಅಲ್ಲದೇ ರಾಜ್ಯಮಟ್ಟದ ನಾಯಕರಾಗಿ ಬೆಳೆದಿದ್ದಾರೆ. ಭಾವೈಕ್ಯತೆ, ಸಾಮರಸ್ಯದ ಮನೋಭಾವ ಹೊಂದಿರುವ ಶಾಸಕ ಜಮೀರ್‌ ಅವರಲ್ಲಿ ಮುಖ್ಯಮಂತ್ರಿಗಳಾಗುವ(Chief Minister) ಎಲ್ಲ ಅರ್ಹತೆಗಳೂ ಇವೆ. ಹಾಗಾಗಿ, ಮುಂದಿನ ದಿನಗಳಲ್ಲಿ ಅವರು ಈ ರಾಜ್ಯದ ಸಿಎಂ ಆಗಲಿ ಎಂದು ಪ್ರಾರ್ಥಿಸಿದರು. ಅಲ್ಲದೇ ಅಲ್ಲೇ ಇದ್ದ ಮತ್ತೋರ್ವ ಫಾದರ್ ಲೂಕಸ್ ತಂದೆಗೆ ಹುಷಾರಿಲ್ಲ ಎಂದು ತಿಳಿದ ಜಮೀರ್ ಅಹ್ಮದ್ ಖಾನ್ 50 ಸಾವಿರ ಧನಸಹಾಯ ಮಾಡಿದರು. ಇದನ್ನೂ ಓದಿ: ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್‌ ಕೇಸ್‌ – ಹುಡುಗಿಯ ಬಾಯ್‌ಫ್ರೆಂಡ್‌ ಸಹ ಅರೆಸ್ಟ್‌

Live Tv

Advertisements
Exit mobile version