Latest
ʼSomething went wrongʼ – ಯೂಟ್ಯೂಬ್, ಜಿಮೇಲ್ ಡೌನ್

ಬೆಂಗಳೂರು: ಗೂಗಲ್ ಕಂಪನಿಯ ಜಿಮೇಲ್ ಮತ್ತು ಜನಪ್ರಿಯ ವಿಡಿಯೋ ಸಾಮಾಜಿಕ ಜಾಲತಾಣ ಯೂಟ್ಯೂಬ್ ಸೋಮವಾರ ಸಂಜೆಯಿಂದ ಡೌನ್ ಆಗಿದೆ.
ಯಾವುದೇ ಯೂಟ್ಯೂಬ್ ಖಾತೆಗಳು ಓಪನ್ ಆಗುತ್ತಿಲ್ಲ. ಪೇಜ್ ಓಪನ್ ಮಾಡಿದಾಗ ʼSomething went wrongʼ ಎಂಬ ಸಂದೇಶ ಸ್ಕ್ರೀನ್ನಲ್ಲಿ ಕಾಣುತ್ತಿದೆ.
ಜಿಮೇಲ್ ಓಪನ್ ಮಾಡಿದಾಗ Temporary Error (500) ಎಂಬ ಸಂದೇಶ ಕಾಣಿಸುತ್ತಿದೆ. ಈಗಾಗಲೇ ಟ್ವಿಟ್ಟರ್ನಲ್ಲಿ #YouTubeDOWN ಟ್ರೆಂಡ್ ಆಗಿದೆ. ಇಲ್ಲಿಯವರೆಗೂ ಯೂಟ್ಯೂಬ್ ಕಂಪನಿಯಿಂದ ಯಾವುದೇ ಹೇಳಿಕೆ ಪ್ರಕಟವಾಗಿಲ್ಲ.
