Recent News

ಪ್ರಿಯತಮೆಯೇ ವಿಷ ತಂದು ಕೊಟ್ಟಳು- ಸೆಲ್ಫಿ ವಿಡಿಯೋ ಮಾಡಿ ಯುವಕ ಆತ್ಮಹತ್ಯೆ

ಮೈಸೂರು: ಸೆಲ್ಫಿ ವಿಡಿಯೋ ಮಾಡಿ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಸುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಸುವಿನಹಳ್ಳಿ ಗ್ರಾಮದ ಸಿದ್ದರಾಜು (22) ಆತ್ಮಹತ್ಯೆ ಮಾಡಿಕೊಂಡ ಯುವಕ. ನನ್ನ ಸಾವಿಗೆ ತನ್ನ ಪ್ರಿಯತಮೆ ಹಾಗೂ ಆಕೆಯ ತಾಯಿ ಸವಿತಾ ಹಾಗೂ ಅಜ್ಜಿ ಕಾರಣ ಎಂದು ಹೇಳಿದ್ದಾನೆ.

ವಿಡಿಯೋದಲ್ಲೇನಿದೆ?:
ಪ್ರಿಯತಮೆಯೆ ನನಗೆ ವಿಷ ತಂದು ಕೊಟ್ಟಿದ್ದಾಳೆ. ನನ್ನ ಸಾವಿಗೆ ನಾನೇ ಕಾರಣ ಎಂದು ನನ್ನಿಂದ ಡೆತ್ ನೋಟ್ ಬರೆಸಿ ಆಕೆ ನನಗೆ ವಿಷ ಕೊಟ್ಟು ಹೋದಳು ಎಂದು ವಿಡಿಯೋದಲ್ಲಿ ಡೆತ್ ನೋಟ್ ಹಾಗೂ ವಿಷದ ಪ್ಯಾಕೆಟ್ ಅನ್ನು ಪ್ರದರ್ಶಿಸಿದ್ದಾನೆ. ಅಲ್ಲದೆ ನನ್ನನ್ನು ಪ್ರೀತಿಸಿ, ನನಗೆ ಸಾಯುವಂತೆ ವಿಷ ಕೊಟ್ಟು ಆಕೆ ಮಾತ್ರ ಮತ್ತೊಬ್ಬನೊಂದಿಗೆ ವಿವಾಹವಾಗುತ್ತಿದ್ದಾಳೆ. ಅವಳಿಗೆ ಮದುವೆ ಆಗಬಾರದು ಜೈಲಿಗೆ ಹೋಗಬೇಕೆಂದು ಸಿದ್ದರಾಜು ವಿಡಿಯೋದಲ್ಲಿ ಮನವಿ ಮಾಡುವ ಮೂಲಕ ಒತ್ತಾಯಿಸಿದ್ದಾನೆ.

ಮೈಸೂರಿನ ಬೆಳವಾಡಿಯ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದರಾಜು, ಬೆಳವಾಡಿಯ ಯುವತಿಯನ್ನು ಪ್ರೀತಿಸುತ್ತಿದ್ದನು. ಇಬ್ಬರ ಮದುವೆಗೆ ಯುವತಿಯ ಪೋಷಕರ ವಿರೋಧ ಇತ್ತು. ಈ ನಡುವೆ ಪ್ರಿಯತಮೆಯೂ ಸಿದ್ದರಾಜು ಜೊತೆಗಿನ ಬಾಂಧವ್ಯ ಮುರಿದುಕೊಂಡು ತನ್ನ ಪೋಷಕರು ತೋರಿಸಿದ ಯುವಕನ ಜೊತೆ ಮದುವೆಗೆ ಮುಂದಾಗಿದ್ದಳು. ಇದರಿಂದ ಸಿದ್ದರಾಜು ನೊಂದಿದ್ದನು ಎನ್ನಲಾಗಿದೆ.

ಸಿದ್ದರಾಜು ಆತ್ಮಹತ್ಯೆ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *