Connect with us

Crime

ಯುವತಿಯ ಬೆತ್ತಲೆ ಚಿತ್ರ, ಮೊಬೈಲ್ ನಂಬರ್ ಹರಿಬಿಟ್ಟ ಟೆಕ್ಕಿ

Published

on

– ಯುವತಿಗೆ ಅವಮಾನಿಸಲೆಂದು ಕೃತ್ಯ

ಮುಂಬೈ: ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ 25 ವರ್ಷದ ಸಾಫ್ಟ್ ವೇರ್ ಉದ್ಯೋಗಿಯೊಬ್ಬ ಯುವತಿಯ ಬೆತ್ತಲೆ ಫೋಟೋಗಳ ಜೊತೆಗೆ ಅವಳ ಫೋನ್ ನಂಬರ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ವಿಕೃತಿ ಮೆರೆದಿದ್ದಾನೆ.

ಮಹಾರಾಷ್ಟ್ರದ ಪುಣೆಯಲ್ಲಿ ಘಟನೆ ನಡೆದಿದ್ದು, ಸಾಫ್ಟ್ ವೇರ್ ಉದ್ಯೋಗಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ತೆರೆದು ಯುವತಿಯ ಬೆತ್ತಲೆ ಫೋಟೋ ಹಾಗೂ ಮೊಬೈಲ್ ನಂಬರ್ ಪೋಸ್ಟ್ ಮಾಡಿದ್ದಾನೆ. ಇಷ್ಟು ಮಾತ್ರವಲ್ಲದೆ ಅಪರಿಚಿತರೊಂದಿಗೆ ಕರೆ ಮಾಡಿಸಿ ಸೆಕ್ಸ್ ಗೆ ಆಹ್ವಾನಿಸುವಂತೆ ಸೂಚಿಸಿದ್ದಾನೆ.

ಆರೋಪಿ ಹಾಗೂ ಸಂತ್ರಸ್ತ ಯುವತಿ ಒಂದೇ ಇಂಜಿನಿಯರಿಂಗ್ ಕಾಲೇಜಿನವರಾಗಿದ್ದು, ಪದವಿ ಮುಗಿದ ಬಳಿಕ ಬೇರೆ ಸಾಫ್ಟ್ ವೇರ್ ಕಂಪನಿಗಳಿಗೆ ಕೆಲಸಕ್ಕಾಗಿ ಸೇರಿಕೊಂಡಿದ್ದಾರೆ. ಆರೋಪಿ ಯುವತಿಯನ್ನು ಇಷ್ಟಪಟ್ಟಿದ್ದಾನೆ. ಆದರೆ ಆಕೆ ಈತನನ್ನು ತಿರಸ್ಕರಿಸಿದ್ದಾಳೆ. ಇದರಿಂದ ಬೇಸರಗೊಂಡು ಆಕೆಯನ್ನು ಅವಮಾನಿಸಲು ಈ ರೀತಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

27 ವರ್ಷ ವರ್ಷದ ಯುವತಿಗೆ ಹಲವು ಅಪರಿಚಿತರು ಕರೆ ಮಾಡಿ ಅಸಹ್ಯಕರವಾಗಿ ಮಾತನಾಡಿದ್ದಾರೆ. ಇದರಲ್ಲಿ ಒಬ್ಬರು ನಿಮ್ಮ ಫೋಟೋ ಹಾಗೂ ಮೊಬೈಲ್ ನಂಬರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಯುವತಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಬಳಿಕ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಮಹಿಳೆಯ ಗೌರವಕ್ಕೆ ಧಕ್ಕೆ ತಂದಿಕ್ಕೆ ಐಪಿಸಿಯ ಸಂಬಂಧಿಸಿದ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಐಟಿ ಕಾಯ್ದೆಯಡಿ ಸಹ ಪ್ರಕರಣ ದಾಖಲಿಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in