ತಾಯಿಯನ್ನು ನಿಂದಿಸಿದ್ದಕ್ಕೆ ಜೈಲಿನಿಂದ ಬಂದ ಸ್ನೇಹಿತರಿಂದ್ಲೇ ಯುವಕ ಕೊಲೆಯಾದ

Advertisements

ಬಾಗಲಕೋಟೆ: ಕುಡಿಯುವ ವೇಳೆ ತಾಯಿಯನ್ನು (Mother) ನಿಂದಿಸಿದ್ದಕ್ಕೆ ಜೈಲಿನಿಂದಲೇ ಬಿಡುಗಡೆಯಾಗಿ ಬಂದಿದ್ದ ಸ್ನೇಹಿತರಿಂದಲೇ (Friends) ವ್ಯಕ್ತಿಯ ಕೊಲೆಯಾದ ಘಟನೆ ಬಾಗಲಕೋಟೆ (Bagalakote) ಜಿಲ್ಲೆಯ ಇಳಕಲ್‍ನಲ್ಲಿ ನಡೆದಿದೆ.

Advertisements

ವೀರೇಶ್ ಕರ್ನೂಲ್ (29) ಮೃತ ಯುವಕ (Young Man). ಅ. 27ರಂದು ಇಳಕಲ್ ಸಮೀಪದ ಇಂಗಳಗಿ ಗ್ರಾಮದ ಪೂಜಾರಿ ಎಂಬುವರ ಹೊಲದಲ್ಲಿ ವೀರೇಶ್ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಇಳಕಲ್ ಗ್ರಾಮೀಣ ಠಾಣೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

Advertisements

ಈ ವೇಳೆ ವೀರೇಶ್ ಜೈಲಿನಿಂದ (Jail) ಬಂದಿದ್ದ ತನ್ನ ಸ್ನೇಹಿತರಾದ ಅವಿನಾಶ್ ಸಜ್ಜನ್, ಸಂಜು ಹುಲ್ಲೂರು ಕುಳಿತು ಪಾರ್ಟಿ ಮಾಡಿರುವ ವಿಷಯ ತಿಳಿದಿದೆ. ಈ ವೇಳೆ ಅವಿನಾಶ್ ತಾಯಿಗೆ ವೀರೇಶ್ ನಿಂದಿಸಿದ್ದ. ಇದರಿಂದ ಕೋಪಗೊಂಡ ಅವಿನಾಶ್ ವಾಗ್ವಾದ ನಡೆಸಿದ್ದಾನೆ. ನಂತರ ಇದು ಅತಿರೇಕಕ್ಕೆ ಹೋಗಿ ಕುಡಿದ ಮತ್ತಲ್ಲಿ ವೀರೇಶ್‍ನನ್ನು ಅವಿನಾಶ್ ಹಾಗೂ ಸಂಜು ಸೇರಿ ಕೊಲೆ ಮಾಡಿದ್ದಾರೆ. ಅದಾದ ಬಳಿಕ ಮೂವರು ನಾಪತ್ತೆ ಆಗಿ, ಊರನ್ನೇ ಬಿಟ್ಟು ಹೋಗಿದ್ದರು. ಇದನ್ನೂ ಓದಿ: ಕುಡಿತ ಬಿಡು ಎಂದಿದ್ದಕ್ಕೆ ಮನೆಯನ್ನೇ ತೊರೆದಿದ್ದ – ಆಧಾರ್‌ಗಾಗಿ 24 ವರ್ಷಗಳ ಬಳಿಕ ವಾಪಸ್‌ ಬಂದ

ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಈ ಇಬ್ಬರನ್ನು ಬಂಧಿಸಿದ್ದಾರೆ (arrest). ಜೊತೆಗೆ ಕೊಲೆಗೆ ಸಹಕರಿಸಿದ ಹಿನ್ನೆಲೆಯಲ್ಲಿ ಬಸವರಾಜ ಚಿಮ್ಮಲಗಿಯನ್ನು ಬಂಧಿಸಲಾಗಿದೆ. ಅವಿನಾಶ್ ಹಾಗೂ ಸಂಜು ಹಲ್ಲೂರು ಈ ಹಿಂದೆ ಕೊಲೆ ಕೇಸಲ್ಲಿ ವಿಜಯಪುರ ಜೈಲು ಸೇರಿದ್ದರು. ಜೈಲಲ್ಲಿದ್ದಾಗ ಸ್ನೇಹಿತರಾಗಿದ್ದರು. ಕಳೆದ ಒಂದು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದರು. ಈಗ ಪುನಃ ಕೊಲೆ ಮಾಡಿ ದುಷ್ಕರ್ಮಿಗಳು ಜೈಲು ಸೇರಿದ್ದಾರೆ. ಇದನ್ನೂ ಓದಿ: ವಾಮಾಚಾರದ ಆರೋಪ – ನೆರೆಹೊರೆಯವರಿಂದಲೇ ಮಹಿಳೆ ಸಜೀವ ದಹನ

Advertisements

Live Tv

Advertisements
Exit mobile version