Saturday, 25th May 2019

Recent News

ಪ್ರೀತಿಯ ಬಲೆಯಲ್ಲಿ ಬೀಳಿಸಿ 30ಕ್ಕೂ ಹೆಚ್ಚು ಮಹಿಳೆಯರ ಮೇಲೆ ರೇಪ್!

– ಹಣಕ್ಕಾಗಿ ಬ್ಲಾಕ್‍ಮೇಲ್

ರಾಯ್ಪುರ್: ಯುವತಿಯರು ಮತ್ತು ಮಹಿಳೆಯರು ಸೇರಿದಂತೆ ಬರೋಬ್ಬರಿ 30ಕ್ಕೂ ಅಧಿಕ ಮಂದಿಯ ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆಯೊಂದು ಛತ್ತೀಸ್ ಗಢದ ದುರ್ಗ್ ಜಿಲ್ಲೆ ಭಿಲಾಯಿಯಲ್ಲಿ ಬೆಳಕಿಗೆ ಬಂದಿದೆ.

ಇದೀಗ ಛತ್ತೀಸ್ ಗಢದ, ಮಧ್ಯಪ್ರದೇಶ ಮತ್ತು ರಾಜಸ್ಥಾನದ 30ಕ್ಕೂ ಹೆಚ್ಚು ಮಹಿಳೆಯರು ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ. ಆರೋಪಿ ಯುವಕನನ್ನು ಗಗನ್ ದೀಪ್ ಅಲಿಯಾಸ್ ರಿಚಿ ಎಂದು ಗುರುತಿಸಲಾಗಿದೆ. ಈತ ಯುವತಿಯರು ಹಾಗೂ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ತನ್ನ ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಳ್ಳುತ್ತಿದ್ದನು. ನಂತರ ಅತ್ಯಾಚಾರ ಎಸಗುತ್ತಿದ್ದನು. ಅಷ್ಟೇ ಅಲ್ಲದೆ ಅದನ್ನು ವಿಡಿಯೋ ಮಾಡಿಕೊಂಡು ಹಣಕ್ಕಾಗಿ ಅವರನ್ನು ಬ್ಲಾಕ್‍ಮೇಲೆ ಮಾಡುತ್ತಿದ್ದನು.

ಪ್ರೀತಿಯ ನಾಟಕ:
ಮಹಿಳೆಯರು ಆರೋಪಿಯ ವಿರುದ್ಧ ಗೃಹ ಸಚಿವರು, ಪೊಲೀಸರು ಮತ್ತು ಮಹಿಳಾ ಆಯೋಗದವರಿಗೆ ದೂರು ಸಲ್ಲಿಸಿದ್ದಾರೆ. ಆರೋಪಿ ರಿಚಿ ಭೀಲಾಯಿಯ ವೈಶಾಲಿ ನಗರ ನಿವಾಸಿಯಾಗಿದ್ದಾನೆ. ಈತ ಭಿಲಾಯಿ, ರಾಯ್ಪುರ್, ಜಗದಾಲ್ಪುರ್, ಜೋಧ ಪುರ್ ಮತ್ತು ಇಂದೋರ್ ಸೇರಿದಂತೆ ಸುತ್ತಮುತ್ತಲ ಪ್ರದೇಶದ ಯುವತಿಯರ ಜೊತೆ ಪ್ರೀತಿಯ ನಾಟಕವಾಡುತ್ತಿದ್ದನು. ಅಲ್ಲದೇ ಮದುವೆಯಾಗುತ್ತೇನೆ ಎಂದು ನಂಬಿಸಿ ಅವರೊಂದಿಗೆ ದೈಹಿಕ ಸಂಬಂಧ ಬೆಳೆಸುತ್ತಿದ್ದನು. ನಂತರ ಅವರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದನು.

ನೊಂದ ಮಹಿಳೆ:
ಎರಡು ವರ್ಷದ ಹಿಂದೆ ರಿಚಿ ನನಗೆ ಪರಿಚಯವಾಗಿದ್ದನು. ನಂತರ ಇಬ್ಬರು ಫೋನಿನಲ್ಲಿ ಮಾತನಾಡುತ್ತಿದ್ದೆವು. ಒಂದು ದಿನ ರಾಯ್ಪುರಲ್ಲಿನ ನಮ್ಮ ಮನೆಗೆ ಬಂದನು. ಆಗ ಮನೆಯಲ್ಲಿ ಯಾರೂ ಇರಲಿಲ್ಲ. ಇದೇ ವೇಳೆ ಆತ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಮತ್ತೆ ಫೋನ್ ಮಾಡಿ 2 ಲಕ್ಷ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಒಂದು ವೇಳೆ ನಾನು ಹಣ ಕೊಡದಿದ್ದರೆ, ನನ್ನ ಫೋಟೋ ಮತ್ತು ಖಾಸಗಿ ವಿಡಿಯೋಗಳನ್ನು ನನ್ನ ಪತಿಗೆ ತೋರಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಭಿಲಾಯಿಯ ಸಂತ್ರಸ್ತೆಯೊಬ್ಬರು ಹೇಳಿಕೊಂಡಿದ್ದಾರೆ.

ವೈಶಾಲಿ ನಗರದ ಮಹಿಳೆಯೊಬ್ಬರು ಕೂಡ ಹಣಕ್ಕಾಗಿ ನನಗೆ ಬ್ಲಾಕ್‍ಮೇಲ್ ಮಾಡುತ್ತಿದ್ದಾನೆ. ನಾನು ಬೇರೆ ನಂಬರ್ ಬದಲಾಯಿಸಿದರೂ ಮತ್ತೆ ಮತ್ತೆ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ನೀಡಿದ್ದಾರೆ. ಸದ್ಯಕ್ಕೆ ಪೊಲೀಸರು ಆರೋಪಿ ವಿರುದ್ಧ ಅತ್ಯಾಚಾರ, ಹಲ್ಲೆ, ಮತ್ತು ಬ್ಲಾಕ್‍ಮೇಲ್ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *