Connect with us

ಲಾಕ್‍ಡೌನ್ ವೇಳೆ ಜೀವನ ಸಾಗಿಸಲು ಯುವಕನ ಪ್ಲ್ಯಾನ್- ಮನೆಯಂಗಳದಲ್ಲಿ ಒಂಟೆ ಸವಾರಿ

ಲಾಕ್‍ಡೌನ್ ವೇಳೆ ಜೀವನ ಸಾಗಿಸಲು ಯುವಕನ ಪ್ಲ್ಯಾನ್- ಮನೆಯಂಗಳದಲ್ಲಿ ಒಂಟೆ ಸವಾರಿ

ಉಡುಪಿ: ಮಹಾಮಾರಿ ಕೊರೊನಾ ಉಡುಪಿ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಸ್ಥಬ್ದ ಮಾಡಿದೆ. ಮಲ್ಪೆ ಬೀಚ್ ಪ್ರವಾಸಿಗರು ಇಲ್ಲದೆ ಬಿಕೋ ಅನ್ನುತ್ತಿದೆ. ಸಂಕಷ್ಟದ ಕಾಲದಲ್ಲಿ ರಾಜಸ್ಥಾನದಿಂದ ಉಡುಪಿಗೆ ಬಂದ ಯುವಕನೊಬ್ಬ ಡೋರ್ ಟು ಡೋರ್ ಒಂಟೆ ತಂದು ಜೀವನ ನಡೆಸುತ್ತಿದ್ದಾನೆ.

ಕೊರೊನಾ ಕಾಲದಲ್ಲಿ ಸರಕಾರ ಬಡ ಮತ್ತು ಶ್ರಮಿಕ ವರ್ಗಕ್ಕೆ ಪ್ರೋತ್ಸಾಹಧನ ನೀಡಿದೆ. ಪ್ರವಾಸಿಗರನ್ನು ನಂಬಿ ರಾಜಸ್ಥಾನದಿಂದ ಒಂಟೆ ಖರೀದಿಸಿ ಉಡುಪಿಗೆ ಬಂದು ಜೀವನ ಸಾಗಿಸುತ್ತಿದ್ದ ಸುಂದರ್ ಲಾಲ್ ಈ ಸಂದರ್ಭದಲ್ಲಿ ಹೊಸ ಪ್ಲಾನ್ ಮಾಡಿದ್ದಾನೆ. ಪ್ರವಾಸಿ ತಾಣಕ್ಕೆ ಜನ ಬಾರದ ಕಾರಣ ಒಂಟೆ ಸಾಕುವುದು ತನ್ನ ಜೀವನದ ಸಾಗಿಸುವುದು ಬಹಳ ಕಷ್ಟವಾಗಿತ್ತು. ಇದನ್ನೂ ಓದಿ: ಸೋಕಿನಿಂದ ಹಲವು ಕುಟುಂಬಗಳು ವಿನಾಶದ ಅಂಚಿನಲ್ಲಿವೆ – ಸಂಸದ ಎ.ನಾರಾಯಣ ಸ್ವಾಮಿ

 

ಒಂಟೆಯ ಜೊತೆ ಯುವಕ ದಿನಕ್ಕೊಂದು ರೆಸಿಡೆನ್ಸಿಯಲ್ ಏರಿಯಾಕ್ಕೆ ಬರುತ್ತಾನೆ. ಮಕ್ಕಳನ್ನು ಮನೆಯ ಮುಂದಿನ ರಸ್ತೆಯಲ್ಲೇ ಒಂಟೆಯ ಮೇಲೆ ಕೂರಿಸಿ ಒಂದು ಸುತ್ತು ಹೊಡೆಸುತ್ತಾನೆ. ಹತ್ತಿಪ್ಪತ್ತು ರೂಪಾಯಿಗೆ ಒಂದು ಸುತ್ತು ಒಂಟೆ ಸವಾರಿ ಮಾಡಿಸುತ್ತಾನೆ. ಸರಕಾರದ ಸಹಾಯ ಸಿಗದ, ಪ್ರವಾಸೋದ್ಯಮ ಆರಂಭವಾಗಿದ್ದರಿಂದ ಈ ರೀತಿ ಜೀವನ ಮಾಡುತ್ತಿದ್ದಾನೆ. ಇದನ್ನೂ ಓದಿ: ಚೊಚ್ಚಲ ಬಾರಿಗೆ ಟೀಂ ಇಂಡಿಯಾ ಪರ ಆಡಲು ಐವರು ಆಟಗಾರರಿಗೆ ಕರೆ

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುಂದರ್ ಲಾಲ್, ಪ್ರವಾಸಿಗರು ಉಡುಪಿಗೆ ಬರುವ ಸೀಸನ್‍ನಲ್ಲಿ ಕೊರೊನಾ ಲಾಕ್‍ಡೌನ್ ಆಗಿದೆ. ಹೋದ ವರ್ಷ ಕೂಡ ಇದೇ ರೀತಿಯ ಸಂಕಷ್ಟ ಇತ್ತು. ಒಂಟೆಯನ್ನು ಸಾಕುವುದು, ನಾನು ಜೀವನವನ್ನು ಸಾಗಿಸುವುದು ಕಷ್ಟವಾಗಿದೆ. ಹೀಗಾಗಿ ದಿನದ ಖರ್ಚನ್ನು ನಾನು ದುಡಿಯಲೇಬೇಕು. ಬಹಳಷ್ಟು ಜಾಗ್ರತೆವಹಿಸಿ ಒಂಟೆ ಸವಾರಿ ಮಾಡಿಸುತ್ತೇನೆ ಎಂದು ಹೇಳಿದ್ದಾರೆ.

Advertisement
Advertisement