Connect with us

Crime

ರಾತ್ರಿ ಪ್ರೇಯಸಿ ನೋಡಲು ಹೋಗಿ ಹೆಣವಾದ ಪ್ರಿಯಕರ

Published

on

-ಗೆಳತಿ ಕಾಣಲು ಹೋದವನಿಗೆ ನರಕ ದರ್ಶನ
-ಎರಡು ಗ್ರಾಮಗಳ ನಡುವೆ ಉದ್ವಿಘ್ನ ಪರಿಸ್ಥಿತಿ

ಲಕ್ನೋ: ಪಕ್ಕದೂರಿನಲ್ಲಿರುವ ಗೆಳತಿಯನ್ನ ಕಾಣಲು ಹೋದ ಪ್ರಿಯಕರನ ಕೊಲೆಯಾಗಿರುವ ಘಟನೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಭರ್ತಿಯಾ ಗ್ರಾಮದಲ್ಲಿ ನಡೆದಿದೆ.

ಪರಖಮ್ ಗುರ್ಜರ್ ಗ್ರಾಮದ ಸಾಹೇಬ್ ಸಿಂಗ್ ಕೊಲೆಯಾದ ಯುವಕ. ಸಾಹೇಬ್ ಸಿಂಗ್ ತನ್ನ ಗೆಳೆಯ ಲಕ್ಷ್ಮಣ್ ಸಿಂಗ್ ಜೊತೆ ರಾತ್ರಿ ಪಕ್ಕದೂರಿನಲ್ಲಿರುವ ಪ್ರೇಯಸಿಯನ್ನ ಭೇಟಿಯಾಗಲು ತೆರಳಿದ್ದನು. ಈ ವೇಳೆ ಯುವತಿಯ ಕುಟುಂಬಸ್ಥರು ಯುವಕರಿಬ್ಬರನ್ನು ಹಿಡಿದಿದ್ದಾರೆ. ಗ್ರಾಮಸ್ಥರ ಜೊತೆ ಸೇರಿದ ಯುವತಿ ಕುಟುಂಬಸ್ಥರು ಯುವಕರಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ಸಾಹೇಬ್ ಸಿಂಗ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಮದ್ವೆಯಾಗಿದ್ದ 20ರ ಯುವತಿಯ ಜೊತೆ 21ರ ಯುವಕನ ಮೃತದೇಹ ಪತ್ತೆ

ವಿಷಯ ತಿಳಿದ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಗಾಯಾಳು ಲಕ್ಷ್ಮಣ್‍ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತನ ಶವ ತಮ್ಮ ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಯುವತಿ ಠಾಕೂರ್ ಸಮಾಜದವಳಾಗಿದ್ದು, ಯುವಕ ಗುರ್ಜರ್ ಸಮುದಾಯಕ್ಕೆ ಸೇರಿದನಾಗಿದ್ದರಿಂದ ಎರಡು ಗ್ರಾಮಗಳಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎರಡೂ ಗ್ರಾಮಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದಕ್ಕೆ ತಂಗಿ ಆತ್ಮಹತ್ಯೆ – ಪ್ರೇಮಿಯನ್ನು ಕೊಚ್ಚಿಕೊಂದ ಅಣ್ಣ

ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದಾಗ ಗ್ರಾಮಸ್ಥರು ಓರ್ವ ಯುವಕನನ್ನು ಥಳಿಸುತ್ತಿದ್ದರು. ಓರ್ವ ಮೃತಪಟ್ಟಿದ್ದ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದನು. ಘಟನೆ ಸಂಬಂಧ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನಾಲ್ವರನ್ನು ಬಂಧಿಸಲಾಗಿದೆ ಎಂದು ಎಸ್‍ಎಸ್‍ಪಿ ಡಾ.ಗೌರವ್ ಗ್ರೋವರ್ ತಿಳಿಸಿದ್ದಾರೆ. ಇದನ್ನೂ ಓದಿ: ವಿವಾಹಿತೆ ಮೇಲೆ ಆರು ಮಂದಿಯಿಂದ ಗ್ಯಾಂಗ್‍ರೇಪ್ – ವಿಡಿಯೋ ರೆಕಾರ್ಡ್

Click to comment

Leave a Reply

Your email address will not be published. Required fields are marked *