Friday, 22nd February 2019

ನೀನು ನನ್ನ ಲವ್, ಆತ್ಮೀಯ ಸ್ನೇಹಿತೆ, ಮಾರ್ಗದರ್ಶಕಿ: ನಟ ಗಣೇಶ್

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅವರು ಭಾನುವಾರ ತಮ್ಮ 11ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಅವರು ತಮ್ಮ ಪತ್ನಿ ಶಿಲ್ಪಾ ಗಣೇಶ್ ಜೊತೆಗಿರುವ ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

ಗಣೇಶ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ನೀನು ನನ್ನ ಆತ್ಮೀಯ ಗೆಳತಿ, ನನ್ನ ಮಾರ್ಗದರ್ಶಕಿ, ನನ್ನ ಪ್ರೀತಿ. ಇದು 11ನೇ ವಾರ್ಷಿಕೋತ್ಸವ. ಮೈ ಲವ್ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ರೀ-ಟ್ವೀಟ್ ಮಾಡಿ, “ನಮ್ಮ ಜೀವನದಲ್ಲಿ ಹಿಂದೆಂದೂ ಮಾಡಿದ ಉತ್ತಮ ನಿರ್ಧಾರವನ್ನು ಇಂದು ನಾವು ಆಚರಿಸುತ್ತೇವೆ. ನೀವು ಇರುವುದಕ್ಕೆ ಧನ್ಯವಾದಗಳು” ಎಂದು ರೀ-ಟ್ವೀಟ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಅವರು ಕೂಡ ತಮ್ಮ ಟ್ವಿಟ್ಟರಿನಲ್ಲಿ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಅವರಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ. ಸುದೀಪ್ ತಮ್ಮ ಟ್ವಿಟ್ಟರಿನಲ್ಲಿ, “ಖುಷಿಯಾಗಿರುವ ಜೋಡಿಗೆ ಇಂದಿನ ದಿನ ಖುಷಿಯಾಗಿರಲಿ. ಹೀಗೆ ಹಲವು ವರ್ಷ ಜೊತೆಯಲ್ಲಿ ಖುಷಿಯಾಗಿರಿ. ವಾರ್ಷಿಕೋತ್ಸವದ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *