Connect with us

Bengaluru City

ಸೆಪ್ಟೆಂಬರ್‌ನಲ್ಲಿ `ಯಾವಾಗಲೂ ನಿನ್ನೊಂದಿಗೆ’ ಚಿತ್ರ ತೆರೆಗೆ

Published

on

ಡೈರೆಕ್ಟರ್ ಡ್ರೀಂ ಕ್ರಿಯೇಷನ್ಸ್ ಲಾಂಛನದಲ್ಲಿ ಗಿರೀಶ್ ಜಿ ರಾಜ್ ನಿರ್ಮಿಸಿರುವ `ಯಾವಾಗಲೂ ನಿನ್ನೊಂದಿಗೆ` ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರವನ್ನು ನೀಡಿದೆ.

ಚಿತ್ರ ಸೆಪ್ಟೆಂಬರ್‌ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಬೆಂಗಳೂರು, ಮೈಸೂರು, ಹಾಸನ ಮತ್ತು ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ರೂಪೇಶ್ ಜಿ ರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸತೀಶ್ ಬಾಬು ಅವರ ಸಂಗೀತ ನಿರ್ದೇಶನವಿದೆ.

ರೇಣುಕುಮಾರ್ ಛಾಯಾಗ್ರಹಣ, ಲಿಂಗರಾಜ್ ಸಂಕಲನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ರಾಜು ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರದ ನಾಯಕನಾಗಿ ರೂಪೇಶ್ ಜಿ ರಾಜ್ ಅಭಿನಯಿಸಿದ್ದಾರೆ. ಅರ್ಚನ ಈ ಚಿತ್ರದ ನಾಯಕಿ. ವಿ.ಮನೋಹರ್, ಹರೀಶ್ ರಾಯ್, ಟೆನ್ನಿಸ್ ಕೃಷ್ಣ, ಕುರಿ ರಂಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.