Connect with us

Bengaluru City

ಅಕ್ಷಯ ತೃತೀಯದಂದು ಯಶ್-ರಾಧಿಕಾ ಮಗಳ ಫೋಟೋ ರಿವೀಲ್!

Published

on

ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ಕಪಲ್ ಎಂದೇ ಖ್ಯಾತರಾಗಿರುವ ಯಶ್, ರಾಧಿಕಾ ಪಂಡಿತ್ ದಂಪತಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ಅಭಿಮಾನಿಗಳು ಯಶ್ ಮಗಳನ್ನು ನೋಡಲು ಕಾತುರದಿಂದ ಕಾಯುತ್ತಿದ್ದು ಮೇ 7ರಂದು ಮಗಳ ಫೋಟೋ ರಿವೀಲ್ ಮಾಡುವುದಾಗಿ ರಾಧಿಕಾ ಹೇಳಿದ್ದಾರೆ.

ಹೌದು. ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ, ಮೇ 7ರಂದು ಅಕ್ಷಯ ತೃತೀಯವಿದೆ. ಹೀಗಾಗಿ ಆ ಶುಭ ದಿನದಂದೇ ಮಗಳ ಫೋಟೋವನ್ನು ನಿಮ್ಮೆಲ್ಲರ ಮುಂದಿಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ನಾನು, ಯಶ್ ನಿಮ್ಮನ್ನು ಪ್ರೀತಿಸ್ತೇವೆ, ಆರಾಧಿಸ್ತೇವೆ: ವೈದ್ಯೆಯ ಬರ್ತ್ ಡೇಗೆ ರಾಧಿಕಾ ವಿಶ್

 ಫೇಸ್ ಬುಕ್ ನಲ್ಲಿ ಬರೆದಿದ್ದೇನು?:
ಅಪ್ಪ-ಮಗಳ ಸಂಬಂಧಕ್ಕೆ ಬೆಲೆ ಕಟ್ಟಲಾಗದು. ನೀವೆಲ್ಲರೂ ನಮ್ಮ ಪುಟ್ಟ ದೇವತೆಯನ್ನು ನೋಡಲು ಅತ್ಯಂತ ಹುರುಪಿನಿಂದ ಕಾಯುತ್ತಿದ್ದೀರಿ ಎಂದು ನನಗೆ ಗೊತ್ತಿದೆ. ಹೀಗಾಗಿ ನಿಮ್ಮ ಆಸೆಯನ್ನು ನಿರಾಸೆ ಮಾಡುವುದಿಲ್ಲ. ಆದ್ದರಿಂದ ಮೇ 7ರ ಅಕ್ಷಯ ತೃತೀಯದಂದು ನಾವು ನಮ್ಮ ಮಗಳ ಫೋಟೋವನ್ನು ರಿವೀಲ್ ಮಾಡುತ್ತೇವೆ ಎಂದು ಅಪ್ಪ ಹಾಗೂ ಮಗಳ ಅರ್ಧ ಫೋಟೋ ಹಾಕಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಗಳು, ಪತ್ನಿ ಜೊತೆ ರಾಕಿಂಗ್ ಸ್ಟಾರ್ ಮಾತು

ಯಶ್ ಮತ್ತು ರಾಧಿಕಾ ಅವರು 2016 ಡಿಸೆಂಬರ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, 2018ರ ಡಿಸೆಂಬರ್ 2ರಂದು ರಾಧಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ದಂಪತಿ ಇದುವರೆಗೂ ತಮ್ಮ ಮಗಳ ಫೋಟೋವನ್ನು ಎಲ್ಲೂ ಪ್ರಕಟಿಸಿರಲಿಲ್ಲ. ಹೀಗಾಗಿ ಇದೇ ತಿಂಗಳ 7ರಂದು ಅಭಿಮಾನಿಗಳಿಗಾಗಿ ಮಗಳ ಫೋಟೋ ಬಿಡುಗಡೆ ಮಾಡಲಿದ್ದಾರೆ.