Advertisements

ರಾಕಿಗಾಗಿ ದೇಶದ ಪ್ರಮುಖ ದೇಗುಲಗಳಲ್ಲಿ ಅಭಿಮಾನಿಯಿಂದ ಪೂಜೆ

ರಾಯಚೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಶತದಿನೋತ್ಸವ ಆಚರಿಸಲಿ ಅಂತ ರಾಯಚೂರಿನ ಯಶ್ ಅಭಿಮಾನಿಯೊಬ್ಬರು ದೇಶದ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

Advertisements

ಜಿಲ್ಲೆಯ ಚಿಕ್ಕಸುಗೂರು ಗ್ರಾಮದ ವೈಟಿಪಿಎಸ್ ಗುತ್ತಿಗೆ ಕಾರ್ಮಿಕ ರಾಘವೇಂದ್ರ ಯಶ್ ಅಭಿಮಾನಿ. ಇವರು ಮಂತ್ರಾಲಯ, ಮುಂಬೈ, ಪುಣೆ ಮತ್ತು ಶಿರಿಡಿಯಲ್ಲಿ ಕೆಜಿಎಫ್ ಚಿತ್ರ ಯಶಸ್ವಿಯಾಗಲಿ ಎಂದು ಪೂಜೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರದ ಪುಣೆಯ ಐತಿಹಾಸಿಕ ದಗಡುಶೆಟ್ ಗಣಪನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾರೆ. ಅಲ್ಲದೇ ದೇವಾಲಯದಲ್ಲಿ ಗಣೇಶನ ಪಾದಗಳಲ್ಲಿ ಯಶ್ ಭಾವಚಿತ್ರ ಇರುವ ಕೆಜಿಎಫ್ ಚಿತ್ರದ ಫೋಟೋ ಇಟ್ಟು ಪೂಜೆ ಮಾಡಿದ್ದಾರೆ.

Advertisements

ಬಾಲಿವುಡ್‍ನಲ್ಲಿ ತೆರೆಕಾಣುವ ಪ್ರತಿ ಸಿನಿಮಾಕ್ಕೂ ಇದೇ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಚಿತ್ರವನ್ನು ಪ್ರಾರಂಭಿಸಲಾಗುತ್ತದೆ. ಆದರಿಂದ ಬಾಲಿವುಡ್ ದಿಗ್ಗಜರಾದ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಸೇರಿದಂತೆ ಹಲವು ನಟರು ಈ ಗಣೇಶನ ಭಕ್ತರು. ಯಶ್ ಅವರ ಕೆಜಿಎಫ್ ಸಿನಿಮಾ 5 ಭಾಷೆಗಳಲ್ಲಿ ಶತದಿನ ಬಾರಿಸಲಿ ಅಂತ ರಾಘವೇಂದ್ರ ಪೂಜೆ ಸಲ್ಲಿಸಿದ್ದಾರೆ. ಶಿರಡಿ ಸಾಯಿಬಾಬ ಸನ್ನಿಧಾನದಲ್ಲೂ ವಿಶೇಷ ಪೂಜೆ ಮಾಡಿದ್ದಾರೆ. ಬಳಿಕ ತಿರುಪತಿ ತಿರುಮಲ ಹಾಗೂ ತೆಲಂಗಾಣದ ಗೋಲ್ಡನ್ ಟೆಂಪಲ್‍ಗೂ ಹೋಗಿ ನೆಚ್ಚಿನ ನಟನ ಚಿತ್ರಕ್ಕೆ ಒಳ್ಳೆಯದಾಗಲಿ ಅಂತ ಪೂಜೆ ಸಲ್ಲಿಸುತ್ತೇನೆ ಎಂದು ರಾಘವೇಂದ್ರ ತಿಳಿಸಿದ್ದಾರೆ.

ಕೆಜಿಎಫ್ ಸಿನಿಮಾ ಬಿಡುಗಡೆಗೂ ಮುನ್ನಾ ಮಂತ್ರಾಲಯ ರಾಘವೇಂದ್ರ ಸ್ವಾಮಿಗೆ ಪೂಜೆ ಸಲ್ಲಿಸಿದ ನಂತರವೇ ರಾಘವೇಂದ್ರ ಚಿತ್ರ ಮಂದಿರಕ್ಕೆ ಬಂದಿದ್ದರು. ಸಿನಿಮಾದಲ್ಲಿ ಯಶ್ ಮುಂಬೈನ ಡಾನ್ ಆಗಿರುವುದರಿಂದ ಮುಂಬೈನಲ್ಲೂ ಪೂಜೆ ಸಲ್ಲಿಸಿರುವುದಾಗಿ ರಾಘವೇಂದ್ರ ಹೇಳಿದ್ದಾರೆ.

Advertisements

ಸದ್ಯ ಎಲ್ಲಾ ಕಡೆಯಲ್ಲಿ ಕ್ರೇಜ್ ಹುಟ್ಟು ಹಾಕಿರುವ ಕೆಜಿಎಫ್ ಚಿತ್ರ ಯಶಸ್ವಿಯಾಗಿ ಎಲ್ಲೆಡೆ ಪ್ರದರ್ಶನ ಕಾಣುತ್ತಿದ್ದು, ಚಿತ್ರ ನೋಡಿದವರು ಸಲಾಂ ರಾಕಿ ಬಾಯ್ ಅಂತ ಯಶ್ ನಟನೆಯನ್ನು ಹಾಡಿ ಹೊಗಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Advertisements
Exit mobile version