Districts

ಕಳ್ಳರಿಂದ 5,45,000 ರೂ. ಮೌಲ್ಯದ 12 ಬೈಕ್‍ಗಳು ಜಪ್ತಿ

Published

on

Share this

ಯಾದಗಿರಿ: ಜಿಲ್ಲೆಯ ಶಹಪುರ ಪಟ್ಟಣದಲ್ಲಿನ ಸಾರ್ವಜನಿಕರು ವಿವಿಧ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ಬೈಕ್‍ಗಳ ಕಳ್ಳತನ ಮಾಡುತ್ತಿದ್ದ ಕಳ್ಳರನ್ನು ಬಂಧಿಸುವಲ್ಲಿ ಶಹಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ.

ಇತ್ತೀಚೆಗೆ ಶಹಾಪುರ ನಗರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಬೈಕ್ ಕಳ್ಳತನ ಹೆಚ್ಚಾಗಿತ್ತು. ಮನೆಯ ಹತ್ತಿರ, ಕಚೇರಿ ಹತ್ತಿರ, ಸೇರಿದಂತೆ ವಿವಿಧ ಕಡೆ ಜನ ಪಾರ್ಕಿಂಗ್ ಮಾಡುತ್ತಿದ್ದ ಸ್ಥಳಗಳಲ್ಲಿ ಹಾಡಹಗಲೇ ಕಳ್ಳರು ಕದಿಯುತಿದ್ದರು. ಇದರಿಂದಾಗಿ ಶಹಾಪುರ ಸಿಪಿಐ ಚೆನ್ನಯ್ಯ ಹಿರೇಮಠ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು . ಇದನ್ನೂ ಓದಿ: ಚಕ್ರವರ್ತಿ ಔಟ್ ಆಗಲು ಬಲವಾದ ಕಾರಣವೇನು ಗೊತ್ತಾ?

ಬೈಕ್ ಕಳ್ಳರ ಜಾಡುಹಿಡಿದು ಹೊರಟ ಪೊಲೀಸರು, ಇಬ್ಬರು ಕಳ್ಳರನ್ನು ಅರೆಸ್ಟ್ ಮಾಡಿದ್ದಾರೆ. 21 ವರ್ಷದ ಸಂತೋಷ್, 20 ವರ್ಷದ ಶರಬಣ್ಣ ಎಂಬ ಯುವಕರನ್ನು ಬಂಧಿಸಲಾಗಿದೆ. ಬಂಧಿತರಿಂದ ಸುಮಾರು 5,45,000 ರೂ. ಮೌಲ್ಯದ 12 ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ.

Click to comment

Leave a Reply

Your email address will not be published. Required fields are marked *

Advertisement
Advertisement