Connect with us

Districts

ತನ್ನಿಂದ ತಾನೇ ಬೋರ್‌ವೆಲ್‌ನಿಂದ ಹೊರಬರ್ತಿದೆ ನೀರು- ಗ್ರಾಮಸ್ಥರಲ್ಲಿ ಅಚ್ಚರಿ

Published

on

ಯಾದಗಿರಿ: ರಾಜ್ಯದ ಕೆಲವು ಕಡೆ ಗಂಟೆಗಟ್ಟಲೇ ಬೋರ್‌ವೆಲ್‌ ಕೊರೆದರೂನೀರು ಬರೋದು ಡೌಟ್. ಆದರೆ ಈ ಗ್ರಾಮದ ಬೋರ್‌ವೆಲ್‌ ಒಂದರಲ್ಲಿ ಸತತ ನಾಲ್ಕು ವರ್ಷಗಳಿಂದ ದಿನದ 24 ಗಂಟೆಯೂ ತನ್ನಷ್ಟಕ್ಕೆ ತಾನೆ ನೀರು ಹೊರಬರುತ್ತಿದೆ.

ಆಶ್ಚರ್ಯವಾದರೂ ಇದು ಸತ್ಯ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕಾಡಂಗೇರಾ ಬಿ ಗ್ರಾಮದಲ್ಲಿ ಈ ಕುತೂಹಲಕಾರಿ ಬೋರ್ ವೆಲ್ ಇದೆ. ಬೇಸಿಗೆ, ಮಳೆ ಮತ್ತು ಚಳಿಗಾಲದಲ್ಲಿ ಎಗ್ಗಿಲ್ಲದೆ ತನ್ನಷ್ಟಕ್ಕೆ ತಾನೇ ಈ ಹ್ಯಾಂಡ್ ಪಂಪ್‍ನಿಂದ ನೀರು ಚಿಮ್ಮುತ್ತದೆ ಇದು ಇಲ್ಲಿನ ಗ್ರಾಮಸ್ಥರ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಈ ಗ್ರಾಮದಲ್ಲಿ 9 ಬೋರ್‌ವೆಲ್‌ ಗಳು ಇವೆ. ಆದರೆ ಅವುಗಳಲ್ಲಿ ಯಾವುದರಲ್ಲಿಯೂ ಈ ರೀತಿ ನೀರು ಬರುತ್ತಿಲ್ಲ. ಆದರೆ ಈ ಕೊಳವೆ ಬಾವಿಯಲ್ಲಿ ಮಾತ್ರ ಮೂರು ಕಾಲದಲ್ಲಿಯೂ ಸತತ 24 ಗಂಟೆಗಳ ಕಾಲ ನೀರು ತನ್ನಷ್ಟಕ್ಕೆ ತಾನೇ ಬರುತ್ತಿರುವುದು ಎಲ್ಲರಿಗೂ ಅಚ್ಚರಿ ಉಂಟುಮಾಡಿದೆ.