Tuesday, 25th February 2020

ಟ್ರಿಪಲ್ ಕ್ಯಾಮೆರಾ, ಸ್ಪ್ಲಾಷ್ ಪ್ರೂಫ್, ನಾಚ್ ಡಿಸ್ಪ್ಲೇ – ಎಂಐ ಎ3 ಬಿಡುಗಡೆ

ಬೆಂಗಳೂರು: ಭಾರತದ ಮಾರುಕಟ್ಟೆಗೆ ಕ್ಸಿಯೋಮಿ ಕಂಪನಿಯ ಹಿಂದುಗಡೆ ಮೂರು ಕ್ಯಾಮೆರಾ ಇರುವ ಮಧ್ಯಮ ಬಜೆಟಿನ ಎಂಐ ಎ3 ಫೋನ್ ಬಿಡುಗಡೆಯಾಗಿದೆ.

ಆಂಡ್ರಾಯ್ಡ್ ಒನ್ ಓಎಸ್ ಹೊಂದಿರುವ ಈ ಫೋನ್ ಎರಡು ಆಂತರಿಕ ಮಾದರಿಯಲ್ಲಿ ಬಿಡುಗಡೆ ಮಾಡಿದೆ. 4ಜಿಬಿ ರ‍್ಯಾಮ್ + 64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 12,999 ರೂ. ದರ ನಿಗದಿ ಮಾಡಿದೆ. 6ಜಿಬಿ ರ‍್ಯಾಮ್+128 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 15,999 ರೂ.ದರ ನಿಗದಿ ಮಾಡಿದೆ.

ಸಣ್ಣ ಪ್ರಮಾಣದ ನೀರಿನ ಮೇಲೆ ಬಿದ್ದರೂ ಏನು ಆಗದೇ ಇರುವ ಸ್ಪ್ಲಾಷ್ ಪ್ರೂಫ್ ವಿಶೇಷತೆಯನ್ನು ಈ ಫೋನ್ ಹೊಂದಿದೆ. ಕ್ವಿಕ್ ಚಾರ್ಜ್ 3.0, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 6, 6.8 ಇಂಚಿನ ಸೂಪರ್ ಅಮೊಲೆಡ್ ನಾಚ್ ಡಿಸ್ಪ್ಲೇ ಹೊಂದಿದೆ. ಈ ಫೋನಿನ ಮೊದಲ ಫ್ಲ್ಯಾಶ್ ಸೇಲ್ ಆಗಸ್ಟ್ 23ರ ಮಧ್ಯಾಹ್ನ 12 ಗಂಟೆಗೆ ಎಂಐ ತಾಣ, ಅಮೇಜಾನ್.ಕಾಂ ಆರಂಭವಾಗಲಿದೆ.

ಗುಣ ವೈಶಿಷ್ಟ್ಯಗಳು:
ಬಾಡಿ ಮತ್ತು ಡಿಸ್ಲ್ಪೇ
153.5*71.9*8.5 ಮಿ.ಮೀ ಗಾತ್ರ, 173.8 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್ ಡ್ಯುಯಲ್ ಸ್ಟ್ಯಾಂಡ್ ಬೈ), 6.08 ಇಂಚಿನ ಸೂಪರ್ ಅಮೊಲೆಡ್ ಕೆಪಾಸಿಟೆಟಿವ್ ಟಚ್‍ಸ್ಕ್ರೀನ್(720*1560 ಪಿಕ್ಸೆಲ್, 286 ಪಿಪಿಐ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5)

ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ ಒನ್ 9.0(ಪೈ), ಕ್ವಾಲಕಂ ಸ್ನಾಪ್‍ಡ್ರಾಗನ್ 665 ಅಕ್ಟಾಕೋರ್ ಪ್ರೊಸೆಸರ್, ಅಡ್ರಿನೊ 610 ಗ್ರಾಫಿಕ್ಸ್ ಪ್ರೊಸೆಸರ್, 64 ಜಿಬಿ + 4ಜಿಬಿ ರ‍್ಯಾಮ್, 128 ಜಿಬಿ+6ಜಿಬಿ ರ‍್ಯಾಮ್, ಎರಡನೇ ಸ್ಲಾಟ್ ನಲ್ಲಿ ಕಾರ್ಡ್ ಹಾಕಿದರೆ 256 ಜಿಬಿ ವರೆಗೆ ಮೆಮೊರಿ ವಿಸ್ತರಿಸಬಹುದು.

ಕ್ಯಾಮೆರಾ ಮತ್ತು ಇತರೇ
ಹಿಂದುಗಡೆ 48 ಎಂಪಿ, 8 ಎಂಪಿ ಅಲ್ಟ್ರಾವೈಡ್, 2 ಎಂಪಿ ಡೆಪ್ತ್ ಸೆನ್ಸರ್ ಕ್ಯಾಮೆರಾ, ಎಲ್‍ಇಡಿ ಫ್ಲ್ಯಾಶ್, ಎಚ್‍ಡಿಆರ್, ಪನೋರಮಾ. ಸೆಲ್ಫಿಗಾಗಿ ಮುಂದುಗಡೆ 32 ಎಂಪಿ ಕ್ಯಾಮೆರಾ ನೀಡಲಾಗಿದೆ. ಡಿಸ್ಪ್ಲೇಯಲ್ಲೇ ಫಿಂಗರ್ ಪ್ರಿಂಟ್ ಸೆನ್ಸರ್, ತೆಗೆಯಲು ಅಸಾಧ್ಯವಾದ ಲಿಪೋ 4030 ಎಂಎಎಚ್ ಬ್ಯಾಟರಿ, ಕ್ವಿಕ್ ಚಾರ್ಜ್ 3. ಯುಎಸ್‍ಬಿ ಟೈಪ್- ಸಿ, 3.5 ಎಂಎಂ ಹೆಡ್‍ಫೋನ್ ಜಾಕ್ ನೀಡಿದೆ.

ಏನಿದು ಗೂಗಲ್ ಆಂಡ್ರಾಯ್ಡ್ ಒನ್?
ಗೂಗಲ್ ಈ ಹಿಂದೆ ಏಷ್ಯಾ, ಆಫ್ರಿಕಾ ಖಂಡದಲ್ಲಿ ಮಾರುಕಟ್ಟೆ ವಿಸ್ತರಿಸಲು ಆಂಡ್ರಾಯ್ಡ್ ಓಎಸ್ ಆಧಾರಿತ ಆಂಡ್ರಾಯ್ಡ್ ಒನ್ ಫೋನ್‍ಗಳನ್ನು ಬಿಡುಗಡೆ ಮಾಡಿತ್ತು. ಈ ಫೋನ್‍ಗಳ ಬೆಲೆ ಕಡಿಮೆ ಇದ್ದು, ಗೂಗಲ್ ಮಾನದಂಡಕ್ಕೆ ಅನುಗುಣವಾಗಿ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳನ್ನು ಹೊಂದಿದ ಫೋನ್‍ಗಳನ್ನು ಕಂಪೆನಿಗಳು ತಯಾರಿಸಬೇಕಾಗುತ್ತದೆ. ವಿಶ್ವದಲ್ಲೇ ಮೊದಲ ಬಾರಿಗೆ 2014ರಲ್ಲಿ ಭಾರತದಲ್ಲಿ ಆಂಡ್ರಾಯ್ಡ್ ಓನ್ ಫೋನ್‍ಗಳು ಬಿಡುಗಡೆಯಾಗಿತ್ತು. ಭಾರತದಲ್ಲಿ  ಈ ಹಿಂದೆ ಕಾರ್ಬನ್, ಮೈಕ್ರೋಮ್ಯಾಕ್ಸ್, ಸ್ಪೈಸ್ ಕಂಪೆನಿಗಳು ಆಂಡ್ರಾಯ್ಡ್ ಓನ್ ಅಡಿಯಲ್ಲಿ ಫೋನ್ ತಯಾರಿಸಿತ್ತು. ಈಗ ಕ್ಸಿಯೋಮಿ, ಮೊಟರೋಲಾ, ನೋಕಿಯಾ , ಏಸಸ್ ಸೇರಿದಂತೆ ಹಲವು ಕಂಪನಿಗಳು ಈ ಓಎಸ್ ನಲ್ಲಿ ಫೋನ್ ಬಿಡುಗಡೆ ಮಾಡುತ್ತದೆ.  ಈ ಓಸ್ ಇದ್ದಲ್ಲಿ ಆಂಡ್ರಾಯ್ಡ್ ಓಎಸ್ ಅಪ್ಡೇಡ್ ಬೇಗನೇ ಸಿಗುತ್ತದೆ.

Leave a Reply

Your email address will not be published. Required fields are marked *