Cricket

ಕೊಹ್ಲಿ, ವಿಲಿಯಮ್ಸನ್ ನಾಯಕತ್ವ ರೆಕಾರ್ಡ್ – ಯಾರು ಬೆಸ್ಟ್ ?

Published

on

Share this

ಲಂಡನ್: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಇನ್ನೂ ಎರಡು ದಿನ ಮಾತ್ರ ಬಾಕಿ ಉಳಿದುಕೊಂಡಿದೆ. ಭಾರತ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಿದರೆ ನ್ಯೂಜಿಲೆಂಡ್ ತಂಡವನ್ನು ಕೇನ್ ವಿಲಿಯಮ್ಸನ್ ಮುನ್ನಡೆಸುತ್ತಿದ್ದಾರೆ. ಇವರಿಬ್ಬರು ಕೂಡ ನಾಯಕತ್ವದಲ್ಲಿ ಮತ್ತು ವೈಯಕ್ತಿಕವಾಗಿ ತಮ್ಮ ತಮ್ಮ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‍ಗೆ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಆಯ್ಕೆಗೊಳ್ಳುವ ಮೊದಲು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಒಟ್ಟು 60 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿ 36 ಪಂದ್ಯಗಳನ್ನು ಗೆದ್ದು, 14 ಪಂದ್ಯಗಳಲ್ಲಿ ಸೋತು 10 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದಾರೆ.

ನ್ಯೂಜಿಲೆಂಡ್ ತಂಡದ ನಾಯಕ ವಿಲಿಯಮ್ಸನ್, ಒಟ್ಟು 36 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ 21 ಪಂದ್ಯ ಜಯ, 8 ಪಂದ್ಯ ಸೋಲು ಮತ್ತು 7 ಪಂದ್ಯ ಡ್ರಾ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಲಂಕಾ ಪ್ರವಾಸಕ್ಕೆ ಶಿಖರ್ ಧವನ್ ನಾಯಕ-ತಂಡದಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ

ವಿರಾಟ್ ಭಾರತ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರವಾದರೆ, ವಿಲಿಯಮ್ಸನ್ ನ್ಯೂಜಿಲೆಂಡ್ ತಂಡದ ಪ್ರಮುಖ ಶಕ್ತಿ. ಇವರಿಬ್ಬರು ನಾಯಕತ್ವದೊಂದಿಗೆ ತಮ್ಮ ವೈಯಕ್ತಿಕ ದಾಖಲೆಯನ್ನು ಬರೆದುಕೊಂಡಿದ್ದಾರೆ. ಭಾರತವನ್ನು ಮುನ್ನಡೆಸಿದ 60 ಟೆಸ್ಟ್ ಪಂದ್ಯದಲ್ಲಿ ವಿರಾಟ್ ಒಟ್ಟು 5,392 ರನ್ ಗಳಿಸಿದ್ದು ಇದರಲ್ಲಿ 20 ಶತಕಗಳು ದಾಖಲಾಗಿದೆ. ಸೌತ್ ಆಫ್ರಿಕಾ ವಿರುದ್ಧ 2019ರಲ್ಲಿ ಸಿಡಿಸಿದ 254 ರನ್ ವೈಯಕ್ತಿಕ ಅಧಿಕ ಮೊತ್ತವಾಗಿದೆ. ಇತ್ತ ವಿಲಿಯಮ್ಸನ್ ಒಟ್ಟು 36 ಟೆಸ್ಟ್ ಪಂದ್ಯಗಳಿಂದ 3092 ರನ್ ಕಳೆಹಾಕಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಸಿಡಿಸಿದ 251 ರನ್ ವಿಲಿಯಮ್ಸನ್ ಅವರ ವೈಯಕ್ತಿಕ ಅಧಿಕ ರನ್ ಆಗಿದೆ.

ಈ ಇಬ್ಬರು ನಾಯಕರು ಕೂಡ ಗೆಲುವಿನ ಪಂದ್ಯದಲ್ಲಿ ಮತ್ತು ಪರಸ್ಪರ ಎದುರಾಳಿಯಾಗಿ ಕೂಡ ದಾಖಲೆ ಹೊಂದಿದ್ದು, ವಿರಾಟ್ ಕೊಹ್ಲಿ ಭಾರತ ಗೆದ್ದಂತಹ 36 ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 20 ಶತಕ ಸಹಿತ 3328 ರನ್ ಸಿಡಿಸಿದ್ದಾರೆ. ಅಲ್ಲದೆ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳಲ್ಲಿ ಕ್ಯಾಪ್ಟನ್ ಆಗಿ ಕಾರ್ಯ ನಿರ್ವಹಿಸಿ 3 ಪಂದ್ಯ ಗೆದ್ದು 2 ಪಂದ್ಯ ಸೋತಿದ್ದಾರೆ.  ಇದನ್ನೂ ಓದಿ: ಕೊಹ್ಲಿಗೆ ಓರ್ವ ನ್ಯೂಜಿಲೆಂಡ್ ಬೌಲರ್‌ನಿಂದ ಕಂಟಕವಿದೆ ಎಂದ ಬಾಲ್ಯದ ಕೋಚ್

ವಿಲಿಯಮ್ಸನ್ ನ್ಯೂಜಿಲೆಂಡ್ ಗೆದ್ದಂತಹ 21 ಪಂದ್ಯಗಳಲ್ಲಿ 2,210 ರನ್ ಹೊಡೆದಿದ್ದಾರೆ. ಭಾರತ ವಿರುದ್ಧ ಈವರೆಗೆ ಒಟ್ಟು 4 ಪಂದ್ಯಗಳಲ್ಲಿ ನಾಯಕತ್ವ ನಿರ್ವಹಿಸಿ 2 ಪಂದ್ಯ ಗೆದ್ದು 2 ಪಂದ್ಯ ಸೋತಿದ್ದಾರೆ.  ಇದನ್ನೂ ಓದಿ:ಅಂದು ಧೋನಿಯೊಂದಿಗಿದ್ದ ಪುಟ್ಟ ಬಾಲಕ ಇಂದು ಸ್ಟಾರ್ ಕ್ರಿಕೆಟರ್!

ಈ ಎಲ್ಲಾ ಅಂಕಿ ಅಂಶಗಳನ್ನು ನೋಡಿದಾಗ ಇಬ್ಬರು ನಾಯಕರು ಕೂಡ ಅವರವರ ತಂಡಕ್ಕೆ ಪ್ರಮುಖ ಅಸ್ತ್ರವಾಗಿ ಗೋಚರಿಸುತ್ತಿದ್ದು, ಯಾರು ಈ ಬಾರಿ ನಾಯಕತ್ವದಲ್ಲಿ ಯಶಸ್ಸು ಕಂಡು ಟೆಸ್ಟ್ ಚಾಂಪಿಯನ್‍ಶಿಪ್ ಗೆದ್ದ ನಾಯಕರಾಗಿ ಹೊರಹೊಮ್ಮುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Click to comment

Leave a Reply

Your email address will not be published. Required fields are marked *

Advertisement
Advertisement