Connect with us

ವಿಶ್ವ ಹಾಲು ದಿನಾಚರಣೆ- ನಂದಿನಿ ಹಾಲು ಉಚಿತ

ವಿಶ್ವ ಹಾಲು ದಿನಾಚರಣೆ- ನಂದಿನಿ ಹಾಲು ಉಚಿತ

ಹಾವೇರಿ: ಹೆಚ್ಚು ಹಾಲು ಕುಡಿಯಿರಿ ಅಭಿಯಾನದೊಂದಿಗೆ ಜೂನ್ 1ರಂದು ರಂದು ವಿಶ್ವ ಹಾಲು ದಿನಾಚರಣೆಯ ಕಾರ್ಯಕ್ರಮದೊಂದಿಗೆ ಹಾಲನ್ನು ಉಚಿತವಾಗಿ ಗ್ರಾಹಕರಿಗೆ ಪೂರೈಸಲಿದೆ ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ತಿಳಿಸಿದ್ದಾರೆ.

ಲಾಕ್‍ಡೌನ್ ಅವಧಿಯಲ್ಲಿ ಸಾರ್ವಜನಿಕರ ಆರೋಗ್ಯ ವೃದ್ಧಿಸಲು ಮತ್ತು ವೈದ್ಯರ ಸಲಹೆಯಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೆಚ್ಚು ಹಾಲು ಕುಡಿಯಿರಿ ಅಭಿಯಾನದೊಂದಿಗೆ ಉಚಿತ ಹಾಲನ್ನು ನೀಡಲಾಗುತ್ತಿದೆ. ಜೂನ್ 1 ರಂದು ರಂದು ವಿಶ್ವ ಹಾಲು ದಿನಾಚರಣೆಯ ಕಾರ್ಯಕ್ರಮದೊಂದಿಗೆ ಜೂನ್ 2021ರ ಸಂಪೂರ್ಣ ಮಾಹೆಯಲ್ಲಿ ಎಲ್ಲಾ ಮಾದರಿಯ ನಂದಿನ 500 ಮಿಲಿ ಮತ್ತು 1000 ಮಿಲಿ ಪ್ಯಾಕಗಳಲ್ಲಿ ತಲಾ 20 ಹಾಗೂ 40 ಮಿಲಿ ಹೆಚ್ಚುವರಿ ಹಾಲನ್ನು ಉಚಿತವಾಗಿ ಗ್ರಾಹಕರಿಗೆ ಪೂರೈಸುವ ಯೋಜನೆಯನ್ನು ಜಾರಿಗೊಳಿಲಾಗಿದೆ ಎಂದು ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಅವರು ತಿಳಿಸಿದ್ದಾರೆ.

ಲಾಕ್‍ಡೌನ್ ಅವಧಿಯಲ್ಲಿ ನಂದಿನಿ, 500 ಮಿಲಿ ಮತ್ತು 1000 ಮಿಲಿ ಪ್ಯಾಕಗಳಲ್ಲಿ ತಲಾ 20 ಹಾಗೂ 40 ಮಿಲಿ ಹೆಚ್ಚುವರಿ ಹಾಲನ್ನು ಉಚಿತವಾಗಿ ಗ್ರಾಹಕರಿಗೆ ಪೂರೈಸುವ ಯೋಜನೆಯ ಸದುಪಯೋಗವನ್ನು ಗ್ರಾಹಕರು ಸದ್ಬಳಕೆಮಾಡಿಕೊಳ್ಳಲು ಕೋರಲಾಗಿದೆ. ಇದನ್ನೂ ಓದಿ: 5ಜಿ ನೆಟ್‍ವರ್ಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ

ಧಾರವಾಡ ಹಾಲು ಒಕ್ಕೂಟವು ಧಾರವಾಡ, ಹಾವೇರಿ, ಗದಗ, ಮತ್ತು ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ವಿಸ್ತರಿಸಿದ್ದು, ಅಲ್ಲಿಯ ಹಾಲು ಉತ್ಪಾದಕರಿಂದ ಸಂಗ್ರಹಿಸಿದ ಹಾಲನ್ನು ಅತ್ಯಾಧುನಿಕ ಯಂತ್ರಗಳಿಂದ ಸಂಸ್ಕರಿಸಿ ಕರ್ನಾಟಕ ರಾಜ್ಯಾದಂತ ಮನೆ ಮಾತಾಗಿರುವ ನಂದಿನಿ ಬ್ರಾಂಡಿನ ಅಡಿಯಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ನಿರಂತರವಾಗಿ ಪೂರೈಸಲಾಗುತ್ತಿದೆ. ಇದನ್ನೂ ಓದಿ: ಪ್ರಣೀತಾ ಮದುವೆಗೆ ವಿಶ್ ಮಾಡಿದ ರಮ್ಯಾಗೆ ಅಭಿಮಾನಿಗಳ ಪ್ರಶ್ನೆ ನಿಮ್ದು ಯಾವಾಗ..?

ಪ್ರಸ್ತುತ ಒಕ್ಕೂಟದ ವ್ಯಾಪ್ತಿಯಲ್ಲಿ 998 ಕಾರ್ಯನಿರತ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಕಾರ್ಯನಿರ್ವಹಣೆಯಲ್ಲಿದ್ದು, ದಿನವಹಿ ಸರಾಸರಿ 25 ಲಕ್ಷ ಲೀಟರ್ ಹಾಲು ಶೇಖರಣೆಯೊಂದಿಗೆ ದಿನವಹಿ ಸರಾಸರಿ 1.05 ಲಕ್ಷ ಲೀಟರ್ ಹಾಲು, 10 ಸಾವಿರ ಕೇಜಿ ಮೊಸರು, ಮಜ್ಜಿಗೆ, ಲಸ್ಸಿ ಮತ್ತು ನಂದಿನಿಯ 85 ಕ್ಕಿಂತ ಹೆಚ್ಚಿನ ಸಂಖ್ಯೆಯ ವಿವಿಧ ನಮೂನೆಯ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Advertisement
Advertisement