Friday, 22nd November 2019

Recent News

ಮತ್ತೊಂದು ವಿಶ್ವ ದಾಖಲೆ ಸನಿಹದಲ್ಲಿ ವಿರಾಟ್ ಕೊಹ್ಲಿ

ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ವಿಶ್ವ ದಾಖಲೆ ನಿರ್ಮಿಸುವ ಸನಿಹದಲ್ಲಿದ್ದಾರೆ. ವಿಶ್ವಕಪ್ ಟೂರ್ನಿಯ ಭಾಗವಾಗಿ ಇಂದು ಕೊಹ್ಲಿ ಪಡೆ ನ್ಯೂಜಿಲೆಂಡ್ ತಂಡವನ್ನು ಎದುರಿಸುತ್ತಿದ್ದು, ಪಂದ್ಯದಲ್ಲಿ ಕೊಹ್ಲಿ ವಿಶ್ವದಾಖಲೆ ನಿರ್ಮಿಸುವ ಅವಕಾಶ ಹೊಂದಿದ್ದಾರೆ.

ಕೊಹ್ಲಿ ಈ ಪಂದ್ಯದಲ್ಲಿ 57 ರನ್ ಗಳಿಸಿದರೆ ಏಕದಿನ ಕ್ರಿಕೆಟ್‍ನಲ್ಲಿ ವೇಗವಾಗಿ 11 ಸಾವಿರ ರನ್ ಗಳಿಸಿದ ದಾಖಲೆ ಬರೆಯಲಿದ್ದಾರೆ. 222 ಇನ್ನಿಂಗ್ಸ್ ಗಳಲ್ಲೇ ಕೊಹ್ಲಿಗೆ ಈ ಸಾಧನೆ ಮಾಡುವ ಅವಕಾಶ ಲಭಿಸಿದ್ದು, ಈ ಹಿಂದೆ ಸಚಿನ್ 276 ಇನ್ನಿಂಗ್ಸ್ ಗಳಲ್ಲಿ 11 ಸಾವಿರ ರನ್ ಗಳಿಸಿದ್ದರು.

ಏಕದಿನ ಕ್ರಿಕೆಟ್‍ನಲ್ಲಿ ಕೊಹ್ಲಿ 11 ಸಾವಿರ ರನ್ ಪೂರ್ಣಗೊಳಿಸಿದ 9ನೇ ಆಟಗಾರ ಎಂಬ ಹೆಗ್ಗಳಿಕೆಯನ್ನ ಕೊಹ್ಲಿ ಪಡೆಯಲಿದ್ದಾರೆ. ಅಲ್ಲದೇ ಭಾರತ ಪರ ಈ ಸಾಧನೆ ಮಾಡಿ 3ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಟೀಂ ಇಂಡಿಯಾ ಪರ ಇದುವರೆಗೂ ಸಚಿನ್, ಗಂಗೂಲಿ 11 ಸಾವಿರ ರನ್ ಪೂರೈಸಿದ್ದಾರೆ. ಸಚಿನ್ ಏಕದಿನ ಕ್ರಿಕೆಟಿನಲ್ಲಿ 18,426 ರನ್ ಸಿಡಿಸಿದ್ದರೆ, ಗಂಗೂಲಿ 11,363 ರನ್ ಗಳಿಸಿದ್ದರೆ. ಇದರೊಂದಿಗೆ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿದರೆ ನ್ಯೂಜಿಲೆಂಡ್ ವಿರುದ್ಧ ಹೆಚ್ಚು ಶತಕ ಸಿಡಿಸಿ ಆಟಗಾರ ಎನಿಸಿಕೊಳ್ಳಲಿದ್ದಾರೆ. ಟೀಂ ಇಂಡಿಯಾ ಮಾಜಿ ಆಟಗಾರ ಸೆಹ್ವಾಗ್, ಆಸೀಸ್ ಮಾಜಿ ಆಟಗಾರ ರಿಕಿ ಪಾಟಿಂಗ್ ನ್ಯೂಜಿಲೆಂಡ್ ವಿರುದ್ಧ ತಲಾ 6 ಶತಕ ಸಿಡಿಸಿದ್ದು, ಕೊಹ್ಲಿ 5 ಶತಕ ಸಿಡಿಸಿದ್ದಾರೆ.

ಇತ್ತ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದು, ಪರಿಣಾಮ ಪಂದ್ಯದ ಟಾಸ್ ಕೂಡ ತಡವಾಗಿದೆ. ಟೀಂ ಇಂಡಿಯಾದಿಂದ ಧವನ್ ಹೊರಗುಳಿದಿರುವುದರಿಂದ ಪಂದ್ಯದಲ್ಲಿ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕೆ ಇಳಿಯವುದು ಖಚಿತವಾಗಿದ್ದು, 4ನೇ ಕ್ರಮಾಂಕದಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಿದೆ.

Leave a Reply

Your email address will not be published. Required fields are marked *