ನಾಟಿಂಗ್ಹ್ಯಾಮ್: ಭಾರತದ ಅಭಿಮಾನಿಗಳು ಟೀಂ ಇಂಡಿಯಾ ಜೆರ್ಸಿ ಧರಿಸಿ ಮೈದಾನದಲ್ಲಿಯೇ ಪಾಕಿಸ್ತಾನದ ಸೋಲನ್ನು ಸಂಭ್ರಮಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡ, ವಿಶ್ವಕಪ್ನಲ್ಲಿ ಸೋಲಿನ ಮೂಲಕ ಅಭಿಯಾನವನ್ನು ಆರಂಭಿಸಿದೆ. ಪಂದ್ಯದಲ್ಲಿ 105 ರನ್ ಗಳಿಗೆ ಪಾಕ್ ತಂಡವನ್ನು ಕಟ್ಟಿ ಹಾಕಿದ್ದ ವಿಂಡೀಸ್ 13.4 ಓವರ್ ಗಳಲ್ಲಿ ಗುರಿ ತಲುಪಿ 7 ವಿಕೆಟ್ಗಳ ಭರ್ಜರಿ ಜಯಗಳಿಸಿದೆ.
ಶುಕ್ರವಾರ ಪಾಕಿಸ್ತಾನ ಪಂದ್ಯದಲ್ಲಿ ಸೋಲನ್ನು ಕಂಡ ನಂತರ ಜನರು ಟ್ರೋಲ್ ಹಾಗೂ ಮೀಮ್ಸಿ ಮಾಡಲು ಶುರು ಮಾಡಿದ್ದಾರೆ. ಅಲ್ಲದೆ ಭಾರತದ ಅಭಿಮಾನಿಗಳು ಮೈದಾನದಲ್ಲೇ ಟೀಂ ಇಂಡಿಯಾ ಜೆರ್ಸಿ ಧರಿಸಿ ಪಾಕಿಸ್ತಾನದ ಸೋಲು ಸಂಭ್ರಮಿಸುತ್ತಿರುವ ಫೋಟೋಗಳು ವೈರಲ್ ಆಗುತ್ತಿದೆ.
man said they rlly wore the India shirt and went to the game loool my guys😂😂😂😂 #PAKvWI pic.twitter.com/NzzvJj41RF
— anoushka🦋 (@anoushkaax) May 31, 2019
ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಅಲ್ಪ ಮೊತ್ತಕ್ಕೆ ಪಾಕ್ ಆಲೌಟ್ ಆಗುತ್ತಿದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ಗೆ ಒಳಗಾಗಿದೆ. ವಿಶ್ವಕಪ್ನಂತಹ ದೊಡ್ಡ ಟೂರ್ನಿಗಳಲ್ಲಿ ತಮ್ಮ ತಂಡ ಹೀಗೆ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದ್ದನ್ನು ಕಂಡ ಪಾಕ್ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Indian fans wore Indian jersey to watch #PAKvWI and celebrate Pakistan's loss 😂
Savage level : Infinity 🔥#WIvPAK pic.twitter.com/az21QTQVSl
— Roshan Rai (@RoshanKrRai) May 31, 2019
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 106 ಗುರಿ ನೀಡಿತ್ತು. 106 ರನ್ಗಳ ಅಲ್ಪ ರನ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಕೇವಲ 13.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿ ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯಿತು.