Saturday, 19th October 2019

Recent News

ಪಂತ್‍ಗಿಂತ ಮುಂದಿನ ಪಂದ್ಯಗಳಿಗೆ ವಿಜಯ್ ಶಂಕರ್ ಸೂಕ್ತ: ಹರ್ಭಜನ್

– ಭುವಿ ಬದಲು ಶಮಿ ಒಳ್ಳೆಯ ಆಯ್ಕೆ

ನವದೆಹಲಿ: ಶನಿವಾರ ನಡೆಯಲಿರುವ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್‍ಗಿಂತ ವಿಜಯ್ ಶಂಕರ್ ಅವರನ್ನು ಆಡಿಸುವುದು ಸೂಕ್ತ ಎಂದು ಸ್ಪಿನ್ನರ್ ಹರ್ಭಜನ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರ ಉಳಿದಿದ್ದು, ಆ ಜಾಗಕ್ಕೆ ಬದಲಿ ಆಟಗಾರ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ವೇಳೆ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ವಿಜಯ್ ಅವರನ್ನು ಆಡಿಸಬೇಕಾ ಇಲ್ಲವೇ ಬದಲಿ ಆಟಗಾರ ರಿಷಭ್ ಪಂತ್ ಅವರನ್ನು ಆಡಸಬೇಕಾ ಎಂಬ ಪ್ರಶ್ನೆ ಎದ್ದಿದೆ.

ಇದರ ನಡುವೇ ಭಾರತ ತಂಡಕ್ಕೆ ಇನ್ನೊಂದು ಸಮಸ್ಯೆ ಎದುರಾಗಿದ್ದು ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರು ಸ್ನಾಯು ಸೆಳೆತಕ್ಕೆ ತುತ್ತಾಗಿ ಪಂದ್ಯದಿಂದ ಹೊರ ಉಳಿದಿದ್ದಾರೆ. ಹೀಗಾಗಿ ಅವರ ಜಾಗದಲ್ಲಿ ಯಾರನ್ನು ಆಡಿಸಬೇಕು ಎಂಬುದು ಕೂಡ ಭಾರತಕ್ಕೆ ಬಂದು ಸವಾಲಾಗಿದೆ. ಭುವಿ ಬದಲು ಅನುಭವಿ ಮೊಹಮ್ಮದ್ ಶಮಿ ಅವರನ್ನು ಆಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ವಿಚಾರವಾಗಿ ಮಾತನಾಡಿರುವ ಹರ್ಭಜನ್ ಸಿಂಗ್ ಅವರು, ರಿಷಭ್ ಪಂತ್‍ಗಿಂತ ಮುಂದಿನ ಪಂದ್ಯಗಳಿಗೆ ವಿಜಯ್ ಶಂಕರ್ ಆಡಿಸುವುದು ಸೂಕ್ತ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅವರು ಉತ್ತಮ ಪ್ರದರ್ಶನ ತೋರಿದ್ದಾರೆ. ಅದ್ದರಿಂದ ಪಂತ್‍ಗಿಂತ ಮುಂದಿನ ಪಂದ್ಯದಲ್ಲಿ ವಿಜಯ್ ಶಂಕರ್ ಅವರನ್ನು ಆಡಿಸುವುದು ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭುವನೇಶ್ವರ್ ಕುಮಾರ್ ಅವರು ಗಾಯಗೊಂಡ ಕಾರಣ ಅವರ ಬದಲು ಶಮಿ ಅವರನ್ನು ಆಡಿಸಬಹುದು, ಆದನ್ನು ಬಿಟ್ಟರೆ ಈಗ ಇರುವ ಕಾಂಬಿನೇಷನ್‍ನಲ್ಲೇ ಇಂಡಿಯಾ ಆಡುವುದು ಒಳಿತು. ಭಾರತ ತಂಡದಲ್ಲಿ ಆಗಲೇ ಒಳ್ಳೆಯ ಸ್ಫೋಟಕ ಬ್ಯಾಟ್ಸ್‌ಮ್ಯಾನ್‍ಗಳು  ಇದ್ದಾರೆ. ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಸಿಕ್ಸರ್ ಹೊಡೆಯಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಈಗ ಇರುವ ಆಟಗಾರರೇ ಭಾರತವನ್ನು 400 ರನ್‍ಗಳವರೆಗೆ ಕರೆದುಕೊಂಡು ಹೋಗುತ್ತಾರೆ ಎಂದು ಹೇಳಿದ್ದಾರೆ.

ಬುಧವಾರ ಅಭ್ಯಾಸ ಮಾಡುತ್ತಿರುವ ವೇಳೆ ಜಸ್ಪ್ರಿತ್ ಬುಮ್ರಾ ಅವರ ಎಸೆದ ಯಾರ್ಕರ್ ವಿಜಯ್ ಅವರ ಕಾಲಿನ ಬೆರಳನ್ನು ಗಾಯಗೊಳಿಸಿತ್ತು. ಅವರ ಗಾಯಗೊಂಡಿದ್ದಾರೆ ಮುಂದಿನ ಪಂದ್ಯಗಳಿಗೆ ಲಭ್ಯವಿಲ್ಲ ಎಂದು ಸುದ್ದಿಯಾಗಿತ್ತು. ಆದರೆ ಈಗ ಚೇತರಿಸಿಕೊಂಡಿರುವ ವಿಜಯ್ ಶಂಕರ್ ಗುರುವಾರ ಮತ್ತೆ ನೆಟ್ಸ್ ನಲ್ಲಿ ಕಾಣಿಸಿಕೊಂಡಿದ್ದು ಅವರು ಮುಂದಿನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ ಎನ್ನಲಾಗಿದೆ.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Leave a Reply

Your email address will not be published. Required fields are marked *