Monday, 20th August 2018

500 ರೂ.ಗಾಗಿ ಮ್ಯಾನ್ ಹೋಲ್ ಗೆ ಇಳಿದ ಕಾರ್ಮಿಕರು!

ಬೀದರ್: 500 ರುಪಾಯಿಗಾಗಿ ಇಬ್ಬರು ವ್ಯಕ್ತಿಗಳು ಮ್ಯಾನ್ ಹೋಲ್‍ಗೆ ಇಳಿದ ಘಟನೆ ಬೀದರ್‍ನಲ್ಲಿ ನಡೆದಿದೆ. ಗಬ್ಬು ನಾರುವ ದುರ್ವಾಸನೆಯ ನಡುವೆ ಚರಂಡಿಯಲ್ಲಿ ತುಂಬಿಕೊಂಡಿದ್ದ ಹೂಳನ್ನು ಎತ್ತುವ ದೃಶ್ಯ ಪಬ್ಲಿಕ್ ಟಿವಿಗೆ ಲಭಿಸಿದೆ.

ಬೀದರ್ ನಗರದ ಹುಡ್ಕೋ ಕಾಲೋನಿಯಲ್ಲಿ ಇಬ್ಬರು ಕಾರ್ಮಿಕರು ಬಡಾವಣೆಯ ರಸ್ತೆಯಲ್ಲಿದ್ದ ಮ್ಯಾನ್ ಹೋಲ್‍ಗೆ ಇಳಿದು ಸ್ವಚ್ಛಗೊಳಿಸುತ್ತಿರುವ ಅಮಾನವೀಯ ಘಟನೆ ಕಂಡು ಬಂದಿದೆ. ಈ ಬಡಾವಣೆಯಲ್ಲಿ ಚರಂಡಿ ಹೂಳು ತುಂಬಿಕೊಂಡು ಮನೆಗಳಿಗೆ ಚರಂಡಿ ನೀರು ನುಗ್ಗಿ ಗಬ್ಬು ನಾರುವ ವಾಸನೆಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿತ್ತು. ಹೀಗಾಗಿ 500 ರುಪಾಯಿ ಕೂಲಿ ಪಡೆದು ಇಬ್ಬರು ಕಾರ್ಮಿಕರು ಮ್ಯಾನ್ ಹೋಲ್‍ಗೆ ಇಳಿದಿದ್ದಾರೆ.

ಕೈಗೆ ಹ್ಯಾಂಡ್ ಗ್ಲೋಸ್ ಹಾಕಿಕೊಳ್ಳದೆ, ಮುಖಕ್ಕೆ ಮಾಸ್ಕ್ ಕೂಡ ಹಾಕಿಕೊಳ್ಳದೆ ಅಪಾಯಕಾರಿಯಾದ ಮ್ಯಾನ್ ಹೋಲ್‍ನಲ್ಲಿ ಎಂಟ್ರಿಕೊಟ್ಟು ಅಸಹಾಯಕ ಕಾರ್ಮಿಕರನ್ನು ಬಳಸಿಕೊಳ್ಳಲಾಗಿದೆ. ಇಂಥ ಅಮಾನವೀಯ ಕೆಲಸಗಳಲ್ಲಿ ಸುರಕ್ಷಿತ ಸಾಧನಗಳನ್ನು ಬಳಸಿ ಸ್ವಚ್ಛತೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ್ದರೂ ರಾಜ್ಯದಲ್ಲಿ ಆದೇಶ ನಿರಂತರ ಉಲ್ಲಂಘನೆಯಾಗುತ್ತಿದೆ.

Leave a Reply

Your email address will not be published. Required fields are marked *