Saturday, 24th August 2019

ಬ್ಯುಸಿ ರಸ್ತೆಯ ದೊಡ್ಡ ಸ್ಕ್ರೀನ್‍ನಲ್ಲಿ 90 ನಿಮಿಷ ಪ್ರಸಾರವಾಯ್ತು ಪೋರ್ನ್ ವಿಡಿಯೋ

ಬೀಜಿಂಗ್: ರಸ್ತೆಯಲ್ಲಿರುವ ದೊಡ್ಡ ಎಲೆಕ್ಟ್ರಾನಿಕ್ ಫಲಕದಲ್ಲಿ 90 ನಿಮಿಷ ಪೋರ್ನ್ ವಿಡಿಯೋ ಪ್ರಸಾರವಾದ ಘಟನೆಯೊಂದು ಚೀನಾದ ಜಿಯಾಂಗ್ಸು ನಗರದ ಲಿಯಾಂಗ್‍ನಲ್ಲಿ ನಡೆದಿದೆ.

ಸಿಬ್ಬಂದಿಯೊಬ್ಬ ರಾತ್ರಿ ವೇಳೆ ಎಲೆಕ್ಟ್ರಾನಿಕ್ ಸ್ಕ್ರೀನ್ ಆಫ್ ಆಗಿರುತ್ತದೆ ಎಂದು ತಿಳಿದು ತನ್ನ ಕಂಪ್ಯೂಟರ್ ನಲ್ಲಿ ಪೋರ್ನ್ ವಿಡಿಯೋ ವೀಕ್ಷಿಸಿದ್ದಾನೆ. ಆದರೆ ಆ ಕಂಪ್ಯೂಟರ್ ಹೊರಗೆ ರಸ್ತೆಯಲ್ಲಿದ್ದ ಎಲೆಕ್ಟ್ರಾನಿಕ್ ಸ್ಕ್ರೀನ್‍ಗೆ ಸಂಪರ್ಕಿಸುವ ಕನೆಕ್ಷನ್ ಆಫ್ ಆಗದ ಕಾರಣ 90 ನಿಮಿಷಗಳ ಕಾಲ ನೀಲಿ ಚಿತ್ರ ಸ್ಕ್ರೀನ್ ಮೇಲೆ ಪ್ರಸಾರವಾಗಿದೆ.

ಪೋರ್ನ್ ವಿಡಿಯೋ ಎಲೆಕ್ಟ್ರಾನಿಕ್ ಸ್ಕ್ರೀನ್ ಮೇಲೆ ಪ್ರಸಾರವಾಗುತ್ತಿದ್ದಂತೆ ಅಲ್ಲಿ ಓಡಾಡುತ್ತಿದ್ದ ಜನರು ಒಂದು ಕ್ಷಣ ಅಚ್ಚರಿಪಟ್ಟರು. ಮತ್ತೆ ಕೆಲವರು ಪ್ರಸಾರವಾಗುತ್ತಿದ್ದ ಪೋರ್ನ್ ವಿಡಿಯೋವನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದಾರೆ.

ಸ್ಕ್ರೀನ್‍ನಲ್ಲಿ ಪೋರ್ನ್ ವಿಡಿಯೋ ಪ್ರಸಾರವಾಗುತ್ತಿರುವುದನ್ನು ನೋಡಿದ ಸಹದ್ಯೋಗಿ ಆ ವ್ಯಕ್ತಿಗೆ ಕೂಡಲೇ ಈ ವಿಡಿಯೋ ಪ್ರಸಾರ ಮಾಡುವುದನ್ನು ನಿಲ್ಲಿಸು ಎಂದು ಹೇಳಿದ್ದಾನೆ. ಆಗ ಸಿಬ್ಬಂದಿ ಆ ವಿಡಿಯೋ ಪ್ರಸಾರ ಮಾಡುವುದನ್ನು ನಿಲ್ಲಿಸಿದ್ದಾನೆ. ಈ ಘಟನೆ ಈಗ ಚೀನಾದಲ್ಲಿ ಹೆಚ್ಚು ಚರ್ಚೆ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *