Connect with us

ದೇವಸ್ಥಾನದಲ್ಲಿ ಧರಣಿ ಕುಳಿತ ಮಹಿಳೆಯರು- ಮದ್ಯ ಮಾರಾಟ ನಿಷೇಧಿಸುವಂತೆ ಪಟ್ಟು

ದೇವಸ್ಥಾನದಲ್ಲಿ ಧರಣಿ ಕುಳಿತ ಮಹಿಳೆಯರು- ಮದ್ಯ ಮಾರಾಟ ನಿಷೇಧಿಸುವಂತೆ ಪಟ್ಟು

ಧಾರವಾಡ: ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಬಂದ್ ಮಾಡಿಸುವಂತೆ ಆಗ್ರಹಿಸಿ ಮಹಿಳೆಯರು ದೇವಸ್ಥಾನದಲ್ಲಿ ಧರಣಿ ನಡೆಸಿದ ಘಟನೆ ಧಾರವಾಡ ಜಿಲ್ಲೆಯ ಮುಗದ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: ಬ್ರಾ, ಪ್ಯಾಂಟಿ ಮೇಲೆ ಕರ್ನಾಟಕದ ಲಾಂಛನ, ಕನ್ನಡದ ಬಣ್ಣ- ಗೂಗಲ್ ಬಳಿಕ ಅಮೇಜಾನ್ ಅವಾಂತರ

ಗ್ರಾಮದಲ್ಲಿ 12 ಜನ ಅಕ್ರಮ ಮದ್ಯ ಮಾರಾಟ ಮಾಡುವವರಿದ್ದರು. ಇದರಿಂದ ಬೇಸತ್ತ ಮಹಿಳೆಯರು ಇವತ್ತು ಗ್ರಾಮದ ಗ್ರಾಮ ಪಂಚಾಯ್ತಿ ಬಳಿ ಇರುವ ದೇವಸ್ಥಾನದಲ್ಲೇ ಧರಣಿ ಕುಳಿತರು. 8 ಸಾವಿರ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಒಂದೇ ಒಂದು ಮದ್ಯದ ಅಂಗಡಿ ಇಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು, ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತಿದ್ದರು.ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಸುಂಕ ವಿನಾಯಿತಿ ಪ್ರಸ್ತಾಪ ಇಲ್ಲ: ಸಿಎಂ

ಪ್ರತಿ ದಿನ ಮನೆಯಲ್ಲಿ ಕುಡುಕರ ಕಾಟ ತಾಳದೇ ಮಹಿಳೆಯರು ಇವತ್ತು ಧರಣಿ ನಡೆಸಬೇಕಾಯಿತು. ಮಹಿಳೆಯರ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಮಂಜುನಾಥ ಶರೇವಾಡ, ಗ್ರಾಮದಲ್ಲಿರುವ ಅಕ್ರಮ ಮದ್ಯ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗುವದು ಎಂದರು. ಅಲ್ಲದೇ ಇನ್ನು ಮುಂದೆ ಮಾರಾಟ ಮಾಡಿದರೆ ಅಂಥವರಿಗೆ ಗ್ರಾಮದಿಂದ ಬಹುಷ್ಕಾರ ಹಾಕುವ ಎಚ್ಚರಿಕೆ ನೀಡಿದರು.

Advertisement
Advertisement