BidarLatestMain Post

ಮದುವೆಯಾಗಲು ನಿರಾಕರಿಸಿದ್ದಕ್ಕೆ ವ್ಯಕ್ತಿಯ ಮನೆ, ಆಟೋಗೆ ಬೆಂಕಿ ಹಚ್ಚಿದ ಮಹಿಳೆ!

ಬೀದರ್: ಮದುವೆಯಾಗಲು ನಿರಾಕರಿಸಿದ ವ್ಯಕ್ತಿಯ ಮನೆ ಹಾಗೂ ಆಟೋಗೆ ಮಹಿಳೆ ಬೆಂಕಿ ಹಚ್ಚಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಾಗ್ ಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ.

ಭೀಮರಾವ್ ಎಂಬಾತ ಸುಮಾ ಎಂಬ ಮಹಿಳೆಯನ್ನು ಮದುವೆಯಾಗಲು ನಿರಾಕರಿಸಿದ್ದರು. ಈ ಸಿಟ್ಟಿನಿಂದ ಊರು ಬಿಟ್ಟರೂ ವ್ಯಕ್ತಿ ನೆಲೆಸಿದ್ದ ಸ್ಥಳಕ್ಕೆ ಹೋಗಿ ಮಹಿಳೆ ಮನೆ ಹಾಗೂ ಆಟೋಗೆ ಬೆಂಕಿ ಹಾಕಿದ್ದಾಳೆ. ಇದನ್ನೂ ಓದಿ: ಹೆಂಡತಿ, ಮಗುವನ್ನು ಹುಡುಕಿಕೊಟ್ಟವರಿಗೆ 50 ಸಾವಿರ ರೂ. ಬಹುಮಾನ

ಮೂಲತಃ ಚಿಕನಾಗಾಂವ್ ಗ್ರಾಮದ ನಿವಾಸಿಯಾಗಿದ್ದ ಭೀಮರಾವ್ ಕೆಲವು ದಿನಗಳಿಂದ ಸಸ್ತಾಪೂರ್ ಗ್ರಾಮದ ಸಮೀಪದ ಅಡವಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದ. ಈ ವೇಳೆ ಸುಮಾ ಎಂಬ ಮಹಿಳೆ ಪರಿಚಯವಾಗಿದ್ದಾಳೆ. ತನ್ನನ್ನು ಮದುವೆಯಾಗುವಂತೆ ಭೀಮರಾವ್‌ನನ್ನು ಸುಮಾ ಒತ್ತಾಯಿಸಿದ್ದಾಳೆ. ಆಕೆಯ ಕಾಟ ತಾಳಲಾರದೇ ಭೀಮರಾವ್ ತನ್ನ ತಾಯಿ ತವರು ಬಾಗ್ ಹಿಪ್ಪರಗಾ ಗ್ರಾಮದಲ್ಲಿ ವಾಸವಾಗಿದ್ದ.

ಈ ವಿಷಯ ತಿಳಿದು ಮಹಿಳೆ ಬಾಗ್ ಹಿಪ್ಪರಗಾ ಗ್ರಾಮಕ್ಕೆ ತೆರಳಿ ಮದುವೆ ಮಾಡಿಕೊಳ್ಳಬೇಕು ಎಂದು ಸತಾಯಿಸಿದ್ದಾಳೆ. ಇಲ್ಲದಿದ್ದರೆ ನಾನು ನೀಡಿರುವ 4 ಲಕ್ಷ ರೂ. ವಾಪಸ್‌ ಕೊಡುವಂತೆ ಒತ್ತಾಯಿಸಿದ್ದಾಳೆ. ಇದಕ್ಕೆ ಭೀಮರಾವ್‌ ಒಪ್ಪದೇ ಇದ್ದಾಗ ಇಬ್ಬರ ಸಹಾಯದಿಂದ ಮನೆ ಹಾಗೂ ಆಟೋಗೆ ಮಹಿಳೆ ಬೆಂಕಿ ಹಾಕಿದ್ದಾಳೆ. ಈ ಸಂಬಂಧ ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೃತ ತಾಯಿಯ ತೋಳುಗಳಲ್ಲಿ 2 ರಾತ್ರಿಗಳನ್ನು ಕಳೆದ 3 ರ ಬಾಲಕಿ!

Leave a Reply

Your email address will not be published.

Back to top button