Wednesday, 20th March 2019

ಪ್ರಿಯಕರನಿಗೆ ಜೀವಾವಧಿ ಶಿಕ್ಷೆ ನೀಡಿ- ಡೆತ್‍ನೋಟ್ ಬರೆದು ಯುವತಿ ಆತ್ಮಹತ್ಯೆ

ಮೈಸೂರು: ತನಗೆ ಮೋಸ ಮಾಡಿದವನಿಗೆ ಜೀವಾವಧಿ ಶಿಕ್ಷೆ ನೀಡಿ ಎಂದು ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದಲ್ಲಿ ನಡೆದಿದೆ.

ಅರ್ಪಿತಾ (19) ಮೃತ ದುರ್ದೈವಿ. ಪ್ರಿಯತಮ ಲೋಕೇಶ್ ಗೌಡ(26) ಮೋಸ ಮಾಡಿರುವ ಯುವಕ. ಇವರಿಬ್ಬರು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಅರ್ಪಿತಾಳನ್ನು ಮದುವೆಯಾಗುವುದಾಗಿ ನಂಬಿಸಿ ಲೋಕೇಶ್ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದನು. ಆದ್ರೆ ಸ್ವಲ್ಪ ದಿನಗಳ ಹಿಂದೆ ಮನೆಯಲ್ಲಿ ನಮ್ಮ ಪ್ರೀತಿಗೆ ಒಪ್ಪುತ್ತಿಲ್ಲ ಎಂಬ ಕಾರಣ ನೀಡಿ ಯುವತಿಗೆ ಯುವಕ ಕೈಕೊಟ್ಟಿದ್ದಾನೆ.

ಲೋಕೇಶ್‍ನನ್ನು ಅರ್ಪಿತಾ ಬಹಳ ನಂಬಿದ್ದಳು. ಆತ ತನ್ನನ್ನೇ ಮದುವೆಯಾಗುತ್ತಾನೆ ಎಂದು ಕನಸು ಕೂಡ ಕಂಡಿದ್ದಳು. ಆದ್ರೆ ಈ ರೀತಿ ಲೋಕೇಶ್ ಮೋಸ ಮಾಡಿದ್ದಕ್ಕೆ ಅರ್ಪಿತಾ ಮನನೊಂದಿದ್ದಳು. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿ, ತನಗೆ ಮೋಸ ಮಾಡಿದವನಿಗೆ ಜೀವಾವಧಿ ಶಿಕ್ಷೆ ಕೊಡಿಸುವಂತೆ ಮನವಿ ಮಾಡಿಕೊಂಡು ಡೆತ್‍ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.

ಸದ್ಯ ಆರೋಪಿ ಪ್ರಿಯಕರ ಪರಾರಿಯಾಗಿದ್ದು, ಹುಣಸೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *