Tuesday, 23rd July 2019

Recent News

ಯುವತಿಯ ಜೊತೆ ಅಸಭ್ಯ ವರ್ತನೆ – ಪುಂಡನಿಗೆ ಮಹಿಳೆಯರಿಂದ್ಲೇ ಧರ್ಮದೇಟು

ಬೆಂಗಳೂರು: ಯುವತಿಯ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ ಪುಂಡನಿಗೆ ಮಹಿಳೆಯರೇ ಸೇರಿಕೊಂಡು ಧರ್ಮದೇಟು ಕೊಟ್ಟಿರುವ ಘಟನೆ ನಗರದ ಕೆ.ಆರ್. ಪುರಂನಲ್ಲಿ ನಡೆದಿದೆ.

ಫಯಾಜ್ ಪಾಷಾ ಮಹಿಳೆಯರಿಂದ ಧರ್ಮದೇಟು ತಿಂದ ಆರೋಪಿ. ಕೆ.ಆರ್. ಪುರಂನ ಗಾಯತ್ರಿನಗರದ ಮಹಿಳೆಯೊಬ್ಬರಿಗೆ ಆರೋಪಿ ಫಯಾಜ್ ಪಾಷಾ ಪರಿಚಿತನಾಗಿದ್ದನು. ಈ ಸಲುಗೆಯಲ್ಲಿ ಆರೋಪಿ ಆಗಾಗ ಮಹಿಳೆಯ ಮನೆಗೆ ಹೋಗಿ ಬರುತ್ತಿದ್ದನು.

ಇತ್ತೀಚಿಗೆ ಫಯಾಜ್ ಪಾಷಾ ಮಹಿಳೆಯ ಮಗಳ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದನು. ಈ ಬಗ್ಗೆ ಮಗಳು ತಾಯಿಯ ಬಳಿ ಆತನ ವರ್ತನೆ ಬಗ್ಗೆ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಮಹಿಳೆ ಎರಡು ಮೂರು ಬಾರಿ ಆರೋಪಿ ಫಯಾಜ್ ಪಾಷಾಗೆ ಖಡಕ್ ವಾರ್ನಿಂಗ್ ನೀಡಿದ್ದರು. ಆದರೂ ಆರೋಪಿ ಪಾಷಾ ಮನೆಗೆ ಬಂದು ಯುವತಿಯ ಜೊತೆ ಮತ್ತೆ ಅಸಭ್ಯವಾಗಿ ವರ್ತಿಸುತ್ತಿದ್ದನು.

ಕೊನೆಗೆ ಮಹಿಳೆ ಈತನಿಗೆ ತಕ್ಕ ಪಾಠ ಕಲಿಸಬೇಕೆಂದು ಇಂದು ಸುತ್ತಮತ್ತಲಿನ ಮನೆಯ ಮಹಿಳೆಯರೆಲ್ಲ ಸೇರಿಕೊಂಡು ಫಯಾಜ್ ಪಾಷಾನಿಗೆ ಧರ್ಮದೇಟು ನೀಡಿದ್ದಾರೆ. ಆರೋಪಿಗೆ ಹಿಗ್ಗಮುಗ್ಗಾ ಥಳಿಸಿ ಬಳಿಕ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಮಹಿಳೆಯರು ಒಪ್ಪಿಸಿದ್ದಾರೆ. ಈ ಕುರಿತು ಕೆ.ಆರ್. ಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *