Wednesday, 20th February 2019

Recent News

ಸೆಕ್ಸ್ ನಿರಾಕರಣೆ- ಎರಡು ಕೊಲೆಯಲ್ಲಿ ಜಗಳ ಅಂತ್ಯ

ಗಾಂಧಿನಗರ: ಮಹಿಳೆಯೊಬ್ಬರು ಸೆಕ್ಸ್ ಗೆ ನಿರಾಕರಣೆ ಮಾಡಿದಕ್ಕೆ ಆಕೆಯ ಜೊತೆ ಗೆಳೆಯನನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಈ ಘಟನೆ ಗುಜರಾತ್ ನ ರಾಜ್ ಕೋಟದಲ್ಲಿ ನಡೆದಿದ್ದು, ಆಗಸ್ಟ್ 2 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರ್ಟಿ ಮನೇಕ್ (35) ಮತ್ತು ಲಿವಿಂಗ್ ಟುಗೆದರ್ ನಲ್ಲಿದ್ದ ಗೆಳೆಯ ಸುಲೇಮನ್ ಸಿದ್ದಿ (55) ಕೊಲೆಯಾದ ದುರ್ದೈವಿಗಳು. ಬಂಧಿತ ಆರೋಪಿಗಳನ್ನು ರಾಜ್ಭಾ ಕೆರ್, ಮನೋಜ್ ಸಂಜೋಗ್ ಮತ್ತು ಪ್ಲಾಸ್ ಆಧೇರಾ ಎಂದು ಗುರುತಿಸಲಾಗಿದೆ.

ಈ ಮೂವರು ಆರೋಪಿಗಳು ಆಗಸ್ಟ್ 1ರಂದು ಲೈಂಗಿಕ ಸಂಬಂಧ ಹೊಂದಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮಹಿಳೆಯನ್ನು ಕೊಲೆ ಮಾಡಿದ್ದಾರೆ. ಬಳಿಕ ಆರೋಪಿಗಳು ಬೈಕ್ ಮೂಲಕ ಪರಾರಿಯಾಗಿದ್ದರು. ನಾವು ಶ್ವಾನ ದಳ ಸಹಾಯದ ಮೂಲಕ ತನಿಖೆ ಮಾಡಲಾಗಿದ್ದು, ಅವರನ್ನು ಒಖಾ ಬಳಿ ತಡೆಗಟ್ಟಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯಲ್ಲಿ ಒಬ್ಬನಾದ ರಾಜ್ಭಾ ಕೆರ್ ಆಗಸ್ಟ್ 1 ರಾತ್ರಿ ಮೃತ ಮನೇಕ್ ಮನೆಗೆ ನುಗ್ಗಿದ್ದಾನೆ. ಬಳಿಕ ಆಕೆಯನ್ನು ಬಲವಂತವಾಗಿ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ್ದಾನೆ. ಆದರೆ ಇದಕ್ಕೆ ಮಹಿಳೆ ನಿರಾಕರಿಸಿದ್ದಾರೆ. ಇದೇ ವಿಚಾರವಾಗಿ ಜಗಳ ಶುರುವಾಗಿ ಕೊನೆಗೆ ರಾಜ್ಭಾ ಜೊತೆ ಇಬ್ಬರು ಸ್ನೇಹಿತರನ್ನು ಸೇರಿ ಮನೇಕ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಸಿದ್ದಿ ಇದನ್ನು ತಡೆಯಲು ಮುಂದಾಗಿದ್ದಾರೆ. ಆದರೆ ಆರೋಪಿಗಳು ಅವರ ಮೇಲೂ ಹಲ್ಲೆ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Leave a Reply

Your email address will not be published. Required fields are marked *