Connect with us

Crime

ಮಹಿಳೆ ಟಾಯ್ಲೆಟ್‍ಗೆ ಹೋಗುತ್ತಿದ್ದಂತೆ- ಮೊಬೈಲ್‍ನಲ್ಲಿ ರೆಕಾರ್ಡ್

Published

on

– ಬಾಗಿಲು ಕೆಳಗೆ ಮೊಬೈಲ್ ಕಂಡು ಮಹಿಳೆ ಕಂಗಾಲು

ಮುಂಬೈ: ಅಸಹ್ಯಕರ ಘಟನೆಯೊಂದು ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದ್ದು, 30 ವರ್ಷದ ಮಹಿಳೆ ಹೋಟೆಲ್‍ನ ವಾಶ್ ರೂಮ್‍ಗೆ ತೆರಳಿದಾಗ 38 ವರ್ಷದ ವ್ಯಕ್ತಿ ವಿಡಿಯೋ ಮಾಡಿ ವಿಕೃತಿ ಮೆರೆದಿದ್ದಾನೆ.

ಮಹಾರಾಷ್ಟ್ರದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಸ್ಟೇಶನ್ ಎದುರಿನ ಹೋಟೆಲ್‍ನಲ್ಲಿ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆರೋಪಿಯನ್ನು ಧಾರಾವಿ ನಿವಾಸಿ ಸಮೀರ್ ಹಮೀದ್ ಶೈಖ್ ಎಂದು ಗುರುತಿಸಲಾಗಿದ್ದು, ಕಸ್ಟಡಿಗೆ ಪಡೆದಿದ್ದಾರೆ.

ಘಟನೆ ಹೇಗೆ ನಡೀತು?
ಹೋಟೆಲ್ ಪಕ್ಕದಲ್ಲೇ ಶೈಖ್ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದು, ಮಹಿಳೆ ತನ್ನ ಸಹೋದ್ಯೋಗಿ ಜೊತೆಗೆ ಬೆಳಗ್ಗೆ 8.30ರ ಸುಮಾರಿಗೆ ಹೋಟೆಲ್‍ಗೆ ಆಗಮಿಸಿದ್ದಾರೆ. ಹೋಟೆಲ್‍ಗೆ ಬರುತ್ತಿದ್ದಂತೆ ಟಾಯ್ಲೆಟ್‍ಗೆ ಹೋಗಿದ್ದಾರೆ. ಇದೇ ವೇಳೆ ಟಾಯ್ಲೆಟ್ ಬಳಸಲು ಶೈಖ್ ಹೊರಗಡೆ ಕಾಯುತ್ತಿದ್ದ. ಈ ವೇಳೆ ಮೊಬೈಲ್‍ನಲ್ಲಿ ವಿಡಿಯೋ ರೆಕಾರ್ಡರ್ ಆನ್ ಮಾಡಿ ಬಾಗಿಲು ಕೆಳಗೆ ಮೊಬೈಲ್ ಸರಿಸಿದ್ದಾನೆ. ಇದನ್ನು ಕಂಡ ಮಹಿಳೆ ಶಾಕ್ ಆಗಿ, ಸಹಾಯ ಮಾಡುವಂತೆ ಕೂಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಾಯ್ಯರಿಸಂ ಅಪರಾಧದ ಬಗ್ಗೆ ಐಪಿಸಿ ಸೆಕ್ಷನ್ 354(ಸಿ) ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಮೊಬೈಲ್ ಫೋನ್ ಸೀಜ್ ಮಾಡಲಾಗಿದೆ. ಶುಕ್ರವಾರ ಪೊಲೀಸರು ಆರೋಪಿಯನ್ನು ಸಿಟಿ ಕೋರ್ಟ್‍ಗೆ ಹಾಜರುಪಡಿಸಿದ್ದು, ಕೋರ್ಟ್ ಜಾಮೀನು ನೀಡಿದೆ.

Click to comment

Leave a Reply

Your email address will not be published. Required fields are marked *

www.publictv.in