Wednesday, 22nd January 2020

Recent News

ಪಾರ್ಕಿಂಗ್‌ನಲ್ಲೇ ಬೈಕ್ ಪಾರ್ಕ್ ಮಾಡಿದ್ರೂ ಟೋಯಿಂಗ್ ಕಾಟ- ಫೈನ್ ಕಟ್ಟದೆ ಮಹಿಳೆ ಅವಾಜ್

ಬೆಂಗಳೂರು: ನಗರದ ಸೇಂಟ್ ಮಾರ್ಥಸ್ ರಸ್ತೆಯಲ್ಲಿ ವಾಹನ ಟೋಯಿಂಗ್ ಮಾಡಿದಾಗ ಫೈನ್ ಕಟ್ಟದೆ ರೂಲ್ಸ್ ಪ್ರಶ್ನಿಸಿ ಮಹಿಳೆಯೊಬ್ಬರು ಎಲ್ಲರಿಗೂ ಬೆವರಿಳಿಸಿದ್ದಾರೆ. ಪಾರ್ಕಿಂಗ್ ಪ್ಲೇಸ್ ನಲ್ಲಿ ದ್ವಿಚಕ್ರ ವಾಹನ ಪಾರ್ಕ್ ಮಾಡಿದರೂ ಟೋಯಿಂಗ್ ಮಾಡಿ ಕಾಟ ಕೊಡ್ತಿದ್ದ ಸಿಬ್ಬಂದಿಗೆ ಮಹಿಳೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮಹಿಳೆ ಅವಾಜ್ ಹಾಕಿದ್ದಕ್ಕೆ ಟೋಯಿಂಗ್ ಮಾಡುವ ಸಿಬ್ಬಂದಿ ವಾಹನದೊಳಗೆ ಇರುವ ಗಾಡಿಯನ್ನು ಬಿಟ್ಟು ಹೋಗಿದ್ದಾರೆ. ಟ್ರಾಫಿಕ್ ಪೊಲೀಸ್ ಇಲ್ಲದೆ ಅನೌನ್ಸ್ ಮೆಂಟ್ ಮಾಡದೇ ಸಿಬ್ಬಂದಿ ಏಕಾಏಕಿ ವಾಹನವನ್ನು ಟೋಯಿಂಗ್ ಮಾಡಿ ಗಾಡಿಯಲ್ಲಿ ಎತ್ತಿಕೊಂಡು ಹೋಗುತ್ತಿದ್ದರು. ಈ ವೇಳೆ ಮಹಿಳೆ ಗಾಡಿಗೆ ಅಡ್ಡಲಾಗಿ ನಿಂತು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದು ಪಾರ್ಕಿಂಗ್ ಪ್ಲೇಸ್, ಅದ್ಯಾಗೆ ಗಾಡಿಗಳನ್ನು ತಗೊಂಡು ಹೋಗುತ್ತೀರಾ?. ಅನೌನ್ಸ್ ಮಾಡಿದ್ದೀರಾ? ಟ್ರಾಫಿಕ್ ಪೊಲೀಸ್ ಎಲ್ಲಿ ಅಂತಾ ದ್ವಿಚಕ್ರ ವಾಹನ ಸವಾರರಾಗಿರುವ ಮಹಿಳೆಯಿಂದ ಟೋಯಿಂಗ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಇದು ಸುಲಿಗೆ ಮಾಡುವ ತಂತ್ರ ಅಂತಾ ಜಗಳ ಕೂಡ ಮಾಡಿದ್ದಾರೆ.

ಮಹಿಳೆ ಆವಾಜ್ ಹಾಕುತ್ತಿದ್ದಂತೆಯೇ ಚೈನ್ ಹಿಡಿದು ಮಹಿಳೆಗೆ ರೌಂಡಪ್ ಮಾಡಿ ಸಿಬ್ಬಂದಿ ಮತ್ತೆ ವಾಹನವನ್ನು ಟೋಯಿಂಗ್ ಮಾಡಲು ಸಿದ್ಧರಾದರು. ಕೊನೆಗೆ ಎಲ್ಲಾ ಮಹಿಳಾ ವಾಹನ ಸವಾರರು ಗಲಾಟೆ ಮಾಡಲು ಶುರು ಮಾಡಿದರು. ಮಹಿಳೆಯರ ಗಲಾಟೆಗೆ ಟೋಯಿಂಗ್ ಸಿಬ್ಬಂದಿ ವಾಹನ ಕೆಳಗಿಳಿಸಿದ್ದಾರೆ.

ನಂತರ ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರು ಕೂಡ ಟೋಯಿಂಗ್ ಸಿಬ್ಬಂದಿಯನ್ನು ನಿಮ್ಮ ಲಿಮಿಟ್ಸ್ ಅಲ್ಲ ಇದು. ಯಾಕೆ ಬಂದ್ರಿ ಅಂತಾ ತರಾಟೆ ತೆಗೆದುಕೊಂಡಿದ್ದಾರೆ. ಕೊನೆಗೆ ಬಂದ ದಾರಿಗೆ ಸುಂಕ ಇಲ್ಲ ಎಂದು ಟೋಯಿಂಗ್ ಸಿಬ್ಬಂದಿ ತೆರೆಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *