International
ಹೈ ಹೀಲ್ಸ್ ಧರಿಸಿ ವೇಗವಾಗಿ ಓಡಿದ ಮಹಿಳೆಯ ವೀಡಿಯೋ ವೈರಲ್

ಮಹಿಳೆಯರು ಹೈ ಹೀಲ್ಸ್ ಧರಿಸುವುದು ಸರ್ವೇಸಾಮಾನ್ಯ. ಹೀಲ್ಸ್ ಧರಿಸಿ ನಡೆಯಲು ಕಷ್ಟಪಡುವವರ ಮಧ್ಯೆ ಇಲ್ಲೊಬ್ಬರು ಮಹಿಳೆ ತಾವು ಧರಿಸಿರುವ ಪೆನ್ಸಿಲ್ ಹೀಲ್ನಲ್ಲಿ ವೇಗವಾಗಿ ಓಡಿ ಎಲ್ಲರನ್ನೂ ನಿಬ್ಬೆರಾಗುವಂತೆ ಮಾಡಿದ್ದಾರೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಿಳೆಯರು ತಾವು ಧರಿಸುವ ಬಟ್ಟೆ, ಆಭರಣ, ಚಪ್ಪಲಿಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಫ್ಯಾಷನ್ ಪ್ರಿಯರಾಗಿರುವ ಕೆಲವರು ತಾವು ಉದ್ದವಾಗಿ ಕಾಣಬೇಕೆಂಬ ಹಂಬಲದಿಂದ ಹೀಲ್ಸ್ ಧರಿಸುತ್ತಾರೆ. ಆದರೆ ಹೀಲ್ಸ್ ಧರಿಸಿದ ಮೇಲೆ ನಡೆದಾಡಲು ಕೆಲವರು ಕಷ್ಟಪಡುತ್ತಾರೆ. ಕೆಲವರು ಸಲಿಸಾಗಿ ನಡೆದು ತೋರಿಸುತ್ತಾರೆ. ಅಂತವರ ಮಧ್ಯೆ ಈ ವೀಡಿಯೋದಲ್ಲಿರುವ ಮಹಿಳೆ ಹೈ ಪೆನ್ಸಿಲ್ ಹೀಲ್ಸ್ ಧರಿಸಿ ಇಷ್ಟು ವೇಗವಾಗಿ ಓಡಿರುವುದು ಆಶ್ಚರ್ಯಕರವಾಗಿಸಿದೆ.
the power she has pic.twitter.com/FKe4HFsCbb
— evan! (@thebedsideghoul) February 11, 2021
ಟಿಕ್ಟಾಕ್ ಆ್ಯಪ್ನಲ್ಲಿ ಮಹಿಳೆಯೊಬ್ಬರು ಹೀಲ್ಸ್ ಧರಿಸಿ ಯಾವುದೇ ತೊಂದರೆಗೊಳಗಾಗದೇ ಸಲಿಸಾಗಿ ವೇಗವಾಗಿ ಓಡುವ ವೀಡಿಯೋ ಹಾಕಿಕೊಂಡಿದ್ದಾರೆ. ಇದನ್ನು ಗಮನಿಸಿರುವ ನೆಟ್ಟಿಗರು ಹಲವು ರೀತಿಯ ಕಾಮೆಂಟ್ ಮಾಡಿ ವೀಡಿಯೋ ವೈರಲ್ ಆಗುವಂತೆ ಮಾಡಿದ್ದಾರೆ.
