Connect with us

ಪತ್ನಿಯ ಗುಪ್ತಾಂಗಕ್ಕೆ ಮದ್ಯದ ಬಾಟ್ಲಿ ತುರುಕಿ ವಿಕೃತಿ ಮೆರೆದ..!

ಪತ್ನಿಯ ಗುಪ್ತಾಂಗಕ್ಕೆ ಮದ್ಯದ ಬಾಟ್ಲಿ ತುರುಕಿ ವಿಕೃತಿ ಮೆರೆದ..!

– ಕೋಣೆಯಲ್ಲಿ ಲಾಕ್ ಆಗಿದ್ದ ತಾಯಿ-ಮಗಳ ರಕ್ಷಣೆ

ಭುವನೇಶ್ವರ: ವೇಶ್ಯಾವಾಟಿಕೆಗೆ ಒಪ್ಪದ ಪತ್ನಿಯ ಗುಪ್ತಾಂಗಕ್ಕೆ ಪತಿ ಮಹಾಶಯ ಮದ್ಯದ ಬಾಟಲಿಯನ್ನು ತುರುಕಿ ವಿಕೃತಿ ಮೆರೆದ ಘಟನೆಯೊಂದು ಒಡಿಶಾದಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಮಹಿಳೆ, ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಪತಿ ಚಂದನ್ ಆಚಾರ್ಯನನ್ನು ಬಂಧಿಸಿದ್ದಾರೆ.

ಚಂದನ್ ಆಚಾರ್ಯ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಈತ ತನ್ನ ಪತ್ನಿ ಹಾಗೂ 5 ವರ್ಷದ ಮಗಳ ಜೊತೆ ಒಡಿಶಾದ ಚಂದ್ರಶೇಖರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪದ್ಮಾವತಿ ವಿಹಾರ್ ನಲ್ಲಿ ನೆಲೆಸಿದ್ದಾನೆ.

ಪತಿ ಚಂದನ್ ಆಚಾರ್ಯ ತನ್ನನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳುತ್ತಿರುವುದರಿಂದ ಮನನೊಂದ ಪತ್ನಿ ಚಂದ್ರಶೇಖರ್ ಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಮಹಿಳೆ ದೂರು ನೀಡುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ ಕೋಣೆಯಲ್ಲಿ ಲಾಕ್ ಆಗಿದ್ದ ಮಹಿಳೆ ಹಾಗೂ ಆಕೆಯ 5 ವರ್ಷದ ಮಗಳನ್ನು ರಕ್ಷಿಸಿದ್ದಾರೆ. ಇತ್ತ ಆರೋಪಿ ಪತಿ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

10 ವರ್ಷಗಳ ಹಿಂದೆ ಮಹಿಳೆ ಚಂದನ್ ಆಚಾರ್ಯನನ್ನು ವರಿಸಿದ್ದರು. ಇಷ್ಟು ವರ್ಷ ಚೆನ್ನಾಗಿಯೇ ಇದ್ದ ಸಂಸಾರ, 5 ದಿನಗಳ ಹಿಂದೆಯಿಂದ ಮಹಿಳೆಗೆ ಪತಿ ಹಿಂಸೆ ನೀಡುತ್ತಿದ್ದನು. ಪತಿಯ ನಿರ್ಧಾರಕ್ಕೆ ಪತಿ ಒಪ್ಪಲಿಲ್ಲ. ಅಲ್ಲದೆ ತನ್ನದೇ ಮನೆಯಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯಲ್ಲಿ ಸಿಲುಕಿಕೊಳ್ಳಲು ಮಹಿಳೆ ನಿರಾಕರಿಸಿದರು.

ಇದರಿಂದ ಪತಿ ಹಾಗೂ ಪತ್ನಿಯ ಮಧ್ಯೆ ಮನಸ್ತಾಪ ಉಂಟಾಗಿತ್ತು. ಒಂದು ದಿನ ಕಂಠಪೂರ್ತಿ ಕುಡಿದು ಮನೆಗೆ ಬಂದ ಪತಿರಾಯ, ರಾಡ್ ನಿಂದ ಪತ್ನಿಗೆ ಚೆನ್ನಾಗಿ ಥಳಿಸಿದ್ದಾನೆ. ನಂತರ ತನ್ನ ಕೈಯಲಿದ್ದ ಮದ್ಯದ ಬಾಟ್ಲಿಯನ್ನು ಪತ್ನಿಯ ಗುಪ್ತಾಂಗಕ್ಕೆ ತುರುಕಿದ್ದಾನೆ. ಪರಿಣಾಮ ಪತ್ನಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಪ್ರಜ್ಞೆ ಬಂದ ಬಳಿಕ ಮಹಿಳೆ ನಡೆದ ಘಟನೆಯನ್ನು ತನ್ನ ತಾಯಿಯ ಮುಂದೆ ವಿವರಿಸಿದ್ದಾರೆ. ಅಲ್ಲದೆ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಪತಿಯ ವಿರುದ್ಧ ದೂರು ದಾಖಲಿಸಿ, ಜೈಲಿಗಟ್ಟಿದ್ದಾಳೆ.

Advertisement
Advertisement
Advertisement