Wednesday, 18th September 2019

Recent News

ಸ್ನೇಹಿತನಿಂದ ರೇಪ್ – ವಿರೋಧಿಸಿದಾಗ ಚಾಕು ತೋರಿಸಿದ ಪತಿ

ಭುವನೇಶ್ವರ: ಪತಿಯ ಸ್ನೇಹಿತನೇ ಮಹಿಳೆಯನ್ನು ಆಕೆಯ ಗಂಡನ ಮುಂದೆಯೇ ಅತ್ಯಾಚಾರ ಮಾಡಿರುವ ಆಘಾತಕಾರಿ ಘಟನೆ ಒಡಿಶಾದ ಕೇಂದ್ರಪರಾ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆ ರಾಜನಗರ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ಕಂಡಿರಾ ಪ್ರದೇಶದಲ್ಲಿ ನಡೆದಿದೆ. ಇದೀಗ ಸಂತ್ರಸ್ತೆ ರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜೂನ್ 20 ರಂದು ನಾನು ಮಲಗಿದ್ದಾಗ ಪತಿ ತನ್ನ ಸ್ನೇಹಿತ ಬ್ರಜಾ ಮಲ್ಲಿಕ್‍ನನ್ನು ಮನೆಗೆ ಕರೆದುಕೊಂಡು ಬಂದಿದ್ದನು. ಈ ವೇಳೆ ಪತಿಯ ಸಮ್ಮುಖದಲ್ಲಿ ಆರೋಪಿ ಬ್ರಜಾ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಾನು ಅತ್ಯಾಚಾರಕ್ಕೆ ವಿರೋಧಿಸಿದಾಗ ನನ್ನ ಪತಿಯೇ ಚಾಕು ತೋರಿಸಿ ಬೆದರಿಕೆವೊಡ್ಡಿದ್ದಾನೆ ಎಂದು ನೊಂದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಂತ್ರಸ್ತೆ ತನ್ನ ಪೋಷಕರಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ನಂತರ ಪೋಷಕರ ಜೊತೆಗೆ ಜೂನ್ 22 ರಂದು ರಾಜನಗರ ಪೊಲೀಸ್ ಠಾಣೆಗೆ ಬಂದು ಪತಿ ಮತ್ತು ಆತನ ಆರೋಪಿ ಬ್ರಜಾ ಮಲ್ಲಿಕ್ ವಿರುದ್ಧ ದೂರು ದಾಖಲಿಸಿದ್ದಾರೆ. ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಪ್ರಕರಣದ ಬಗ್ಗೆ ನಾವು ತನಿಖೆ ಮಾಡುತ್ತಿದ್ದೇವೆ. ಆರೋಪಿ ಮತ್ತು ಮಹಿಳೆಯ ಪತಿಯನ್ನು ಬಂಧಿಸಿ ವಿಚಾರಣೆ ಮಾಡಿದ ನಂತರ ಘಟನೆಯ ಹಿಂದಿನ ಸತ್ಯವು ಬೆಳಕಿಗೆ ಬರಲಿದೆ ಎಂದು ಪೊಲೀಸ್ ಅಧಿಕಾರಿ ತಪನ್ ಕುಮಾರ್ ನಾಯಕ್ ಹೇಳಿದ್ದಾರೆ.

Leave a Reply

Your email address will not be published. Required fields are marked *