Thursday, 17th October 2019

Recent News

ರೌಡಿಶೀಟರ್ ಮೇಲೆ ಮಹಿಳಾ ಪೇದೆಗಾಯ್ತು ಲವ್

ನವದೆಹಲಿ: ಕಳ್ಳನ ಮೇಲೆ ಮಹಿಳಾ ಪೊಲೀಸ್ ಲವ್ ಆಗೋದನ್ನು ಸಿನಿಮಾಗಳಲ್ಲಿ ನೋಡಿರುತ್ತವೆ. ಇದೇ ರೀತಿಯ ಕಥೆಯನ್ನೊಳಗೊಂಡಿರುವ ಹಲವು ಸಿನಿಮಾಗಳಿವೆ. ಸಿನಿಮಾ ರೀತಿಯಲ್ಲಿ ನೋಯ್ಡಾದ ಮಹಿಳಾ ಪೊಲೀಸ್ ಪೇದೆಗೆ ರೌಡಿಶೀಟರ್ ಮೇಲೆ ಪ್ರೇಮಾಂಕುರವಾಗಿದ್ದು, ಇಬ್ಬರು ಮದುವೆ ಆಗಿದ್ದಾರೆ.

ಉತ್ತರ ಪ್ರದೇಶದ ಮೂಲದ ಮಹಿಳಾ ಪೊಲೀಸ್ ಪೇದೆ ನೋಯ್ಡಾದ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ರೌಡಿಶೀಟರ್ ರಾಹುಲ್ ಟಸಾರಾನ ಮೇಲೆ ಪ್ರೇಮಾಂಕುರವಾಗಿದೆ. ಜಾಮೀನಿನ ಮೇಲೆ ಹೊರಗಿರುವ ರಾಹುಲ್ ಮತ್ತು ಮಹಿಳಾ ಪೊಲೀಸ್ ಪೇದೆ ರಹಸ್ಯ ಸ್ಥಳದಲ್ಲಿ ಮದುವೆಯಾಗಿದ್ದು, ಫೋಟೋಗಳು ವೈರಲ್ ಆಗಿವೆ.

ರಾಹುಲ್ ಮೇಲೆ 12ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. 2014ರಲ್ಲಿ ನಡೆದ ಉದ್ಯಮಿ ಮನಮೋಹನ್ ಗೋಯಲ್ ಹತ್ಯೆ ಪ್ರಕರಣದಲ್ಲಿ ಜೈಲುವಾಸ ಸಹ ಅನುಭವಿಸಿದ್ದಾನೆ. ಈ ಹಿಂದೆ ರಾಹುಲ್ ಬಗ್ಗೆ ಮಾಹಿತಿ ನೀಡಿದವರಿಗೆ 5 ಸಾವಿರ ರೂ. ಬಹುಮಾನವನ್ನು ಪೊಲೀಸ್ ಇಲಾಖೆ ಘೋಷಿಸಿತ್ತು.

ಲವ್ ಆಗಿದ್ದು ಹೇಗೆ?
ಉದ್ಯಮಿ ಮನಮೋಹನ್ ಗೋಯಲ್ ಪ್ರಕರಣದಲ್ಲಿ ಆರೋಪಿಯಾಗಿರುವವ ರಾಹುಲ್ ಜಾಮೀನಿನ ಮೇಲೆ ಹೊರ ಬಂದಿದ್ದನು. ನ್ಯಾಯಾಲದಯ ಆದೇಶದನ್ವಯ ರಾಹುಲ್ ನನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಈ ಸಂದರ್ಭದಲ್ಲಿ ಮಹಿಳಾ ಪೊಲೀಸ್ ಪೇದೆಯನ್ನು ರಾಹುಲ್ ಮನೆಯ ಡ್ಯೂಟಿಗೆ ಹಾಕಲಾಕಿತ್ತು. ಈ ವೇಳೆ ಇಬ್ಬರಿಗೂ ಪರಿಚಯವಾಗಿದೆ. ಬದಲಾದ ದಿನಗಳಲ್ಲಿ ಇಬ್ಬರ ಸ್ನೇಹ ಪ್ರೇಮವಾಗಿ ಬದಲಾಗಿದೆ. ಮದುವೆ ಬಳಿಕ ಅಜ್ಞಾತಸ್ಥಳದಲ್ಲಿ ಜೋಡಿ ಉಳಿದುಕೊಂಡಿದೆ.

Leave a Reply

Your email address will not be published. Required fields are marked *