Connect with us

Districts

ರಸ್ತೆ ಹಂಪ್‍ನಿಂದ ಮಗನ ಮದುವೆ ಆಹ್ವಾನ ಪತ್ರಿಕೆ ಹಂಚಲು ಹೋಗ್ತಿದ್ದ ತಾಯಿ ಸಾವು

Published

on

ಮಂಡ್ಯ: ಮಗನ ಮದುವೆಯ ಆಹ್ವಾನ ಪತ್ರಿಕೆಯನ್ನು ಹಂಚಲು ಹೋಗುತ್ತಿದ್ದಾಗ ರಸ್ತೆ ಹಂಪ್‍ನಿಂದಾಗಿ ಬೈಕ್‍ನಿಂದ ಕೆಳಗೆ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆಯಲ್ಲಿ ನಡೆದಿದೆ.

ಮದುವೆಯ ಆಹ್ವಾನ ಪತ್ರಿಕೆಯನ್ನು ಕೊಡಲು ಹೋಗುತ್ತಿದ್ದ ವೇಳೆ ರಸ್ತೆಯ ಹಂಪ್ ಹತ್ತಿಸುವಾಗ ಆಕಸ್ಮಿಕವಾಗಿ ಬೈಕ್ ನಿಂದ ಕೆಳಗೆ ಬಿದ್ದು ಲಕ್ಷ್ಮಮ್ಮ(43) ಎಂಬವರು ಮೃತಪಟ್ಟಿದ್ದಾರೆ.

ತೊರೆಕಾಡನಹಳ್ಳಿ ಗ್ರಾಮದ ನಿವಾಸಿ ಲಕ್ಷ್ಮಮ್ಮ ಅವರ ಮಗನ ಮದುವೆ ನವೆಂಬರ್ 8 ಮತ್ತು 9ರಂದು ನಿಗಧಿಯಾಗಿತ್ತು. ಆದ್ದರಿಂದ ಆಹ್ವಾನ ಪತ್ರಿಕೆಯನ್ನು ನೀಡಲು ಸಹೋದರನ ಜೊತೆಯಲ್ಲಿ ಹೋಗುತ್ತಿದ್ದರು. ಹಂಪ್ ಸರಿಯಾಗಿ ಕಾಣಿಸದೇ ಇದ್ದರಿಂದ ಒಮ್ಮೆಲೆ ಹಂಪ್ ಮೇಲೆ ಬೈಕ್ ಹತ್ತಿದ ತಕ್ಷಣ ಹಿಂದೆ ಕುಳಿತಿದ್ದ ಲಕ್ಷಮ್ಮ ಬೈಕ್ ನಿಂದ ಕೆಳಗೆ ಬಿದ್ದಿದ್ದಾರೆ.

ಕುಟುಂಬದವರು ಹಂಪ್ ಸರಿಯಾಗಿ ಕಾಣದಿರುವುದೇ ಈ ಸಾವಿಗೆ ಕಾರಣ ಎಂದು ದುಃಖಿಸುತ್ತಿದ್ದಾರೆ. ಇದೀಗ ಲಕ್ಷ್ಮಮ್ಮ ಸಾವಿನಿಂದ ಮದುವೆ ಸಂಭ್ರಮದ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.