Connect with us

Crime

ಕಾಮದಾಹ ತೀರಿಸದ್ದಕ್ಕೆ ಕಲ್ಲು ಎತ್ತಾಕಿ ಕೊಂದು ಅತ್ಯಾಚಾರಗೈದ ವಿಕೃತ ಕಾಮಿ

Published

on

– ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ
– ನರರೂಪದ ರಾಕ್ಷಸನ ಪೈಶಾಚಿಕ ಕೃತ್ಯ

ಹಾಸನ: ಸೋಮವಾರ ರಾತ್ರಿ ರಸ್ತೆ ಪಕ್ಕದಲ್ಲೇ ಮಹಿಳೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕಾಮದ ದಾಹ ತೀರಿಸಲು ಒಪ್ಪದ ನಿರ್ಗತಿಕ ಮಹಿಳೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ, ಬಳಿಕ ಕಾಮುಕ ಅತ್ಯಾಚಾರ ಎಸಗಿದ್ದಾನೆ.

ನಗರದ ಬಿಎಂ ರಸ್ತೆಯಲ್ಲಿನ ಎನ್‍ಆರ್ ವೃತ್ತದ ಸಮೀಪವಿರುವ ಶ್ರೀ ಕನ್ನಿಕಾ ಪರಮೇಶ್ವರಿ ಸಹಕಾರಿ ಬ್ಯಾಂಕ್ ಎದುರು ಕೊಲೆ ನಡೆದಿತ್ತು. ಮಹಿಳೆ ಸುಮಾರು 45 ವರ್ಷದವಳಾಗಿದ್ದರು. ತನ್ನ ಕಾಮದಾಹ ತೀರಿಸಲೊಪ್ಪದ ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ರಕ್ತದ ಮಡುವಿನಲಿ ಬಿದ್ದು ಮೃತಪಟ್ಟ ಮಹಿಳೆಯ ಮೇಲೆ ಕಾಮುಕ ಅತ್ಯಾಚಾರ ಎಸಗುವ ಮೂಲಕ ರಾಕ್ಷಸಿ ವರ್ತನೆ ತೋರಿದ್ದಾನೆ. ಕಾಮುಕನ ರಾಕ್ಷಸಿ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸೋಮವಾರ ರಾತ್ರಿ ನಿರ್ಗತಿಕ ಮಹಿಳೆ ರಸ್ತೆ ಬದಿಯ ಅಂಗಡಿ ಮುಂದೆ ಮಲಗಿದ್ದರು. ಮೊದಲು ಮಹಿಳೆಯನ್ನು ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬರಲೊಪ್ಪದಿದ್ದಾಗ ಮಹಿಳೆ ಮಲಗಿದ ಬಳಿಕ ಸಿಮೆಂಟ್ ಇಟ್ಟಿಗೆಯನ್ನು ತಲೆ ಮೇಲೆ ಎತ್ತಿಹಾಕಿ ಹತ್ಯೆ ಮಾಡಿದ್ದಾನೆ. ಬಳಿಕ ಕೊಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ, ಮಹಿಳೆ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ಎಸಗಿದ್ದಾನೆ. ಪೊಲೀಸರು ಸಿಸಿ ಟಿವಿ ವಿಡಿಯೋ ಆಧರಿಸಿ ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಹಾಸನ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಹಾಸನದ ಪ್ರಮುಖ ರಸ್ತೆಯಲ್ಲೇ ಕೊಲೆ ನಡೆದಿರುವುದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿತ್ತು. ಕೊಲೆ ನಡೆದಿದ್ದ ಸ್ಥಳದಲ್ಲಿ ಹಗಲು ಯಾವಾಗಲೂ ಜನಜಂಗುಳಿಯಿಂದ ತುಂಬಿರುತ್ತದೆ. ಆರೋಪಿ ರಾತ್ರಿ ಯಾರೂ ಇಲ್ಲದ ವೇಳೆ ಕೃತ್ಯ ಎಸಗಿದ್ದಾನೆ.

Click to comment

Leave a Reply

Your email address will not be published. Required fields are marked *